ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ :ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 92.02 ರಷ್ಟು ಮತದಾನ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್
ಬೆಂಗಳೂರು : ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಇಂದು ನಡೆದ ಮತದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ ಶೇಕಡ 96.02 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ್ ಅವರು ತಿಳಿಸಿದರು.
ಜಿಲ್ಲೆಯ ದೊಡ್ಡಬಳ್ಳಾಪುರ ಟೌನ್ ನ ಮತದಾನ ಕೇಂದ್ರದಲ್ಲಿ 458 ಮತದಾರರಲ್ಲಿ 437 ಮತದಾರರು ಮತ ಚಲಾಯಿಸಿದ್ದು ಶೇ.95.41 ರಷ್ಟು ಮತದಾನವಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಮತದಾನ ಕೇಂದ್ರದಲ್ಲಿ 112 ಮತದಾರರಿದ್ದು 106 ಮತದಾರರು ಮತ ಚಲಾಯಿಸಿದ್ದು ಶೇ.94.64 ರಷ್ಟು ಮತದಾನವಾಗಿದೆ,
ದೇವನಹಳ್ಳಿ ಟೌನ್ ನ ಮತದಾನ ಕೇಂದ್ರದಲ್ಲಿ 496 ಮತದಾರರಿದ್ದು 465 ಮತ ಚಲಾಯಿಸಿದ್ದು ಶೇ.93.75 ರಷ್ಟು ಮತದಾನವಾಗಿದೆ, ಹೊಸಕೋಟೆ ಟೌನ್ ನ ಮತದಾನ ಕೇಂದ್ರದಲ್ಲಿ 563 ಮತದಾರರ ಪೈಕಿ 554 ಮತದಾರರು ಮತ ಚಲಾಯಿಸಿದ್ದು ಶೇ.98.40 ಮತದಾನವಾಗಿದೆ.
ನೆಲಮಂಗಲ ಟೌನ್ ಮತದಾನ ಕೇಂದ್ರದಲ್ಲಿ 382 ಮತದಾರರ ಪೈಕಿ 368 ಮತದಾರರು ಮತ ಚಲಾಯಿಸಿದ್ದು ಶೇ.96.34 ಮತದಾನವಾಗಿದೆ. ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಮತದಾನ ಕೇಂದ್ರದಲ್ಲಿ 177 ಮತದಾರರ ಪೈಕಿ 171 ಮತ ಚಲಾಯಿಸಿದ್ದು ಶೇ.96.61 ಮತದಾನವಾಗಿದೆ.
ಒಟ್ಟಾರೆ 1163 ಪುರುಷ ಮತದಾರರು, 1025 ಮತದಾರರು ಸೇರಿ ಒಟ್ಟು 2188 ಶಿಕ್ಷಕ ಮತದಾರರು ಅಂತಿಮ ಪಟ್ಟಿಯಲ್ಲಿ ಇದ್ದು, ಅದರಲ್ಲಿ 1120 ಪುರುಷ ಮತದಾರರು, 981 ಮಹಿಳಾ ಮತದಾರರು ಸೇರಿ ಒಟ್ಟಾರೆ 2101 ಮತದಾರರು ಮತ ಚಲಾಯಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ ಎನ್ ಶಿವಶಂಕರ್ ಅವರು ತಿಳಿಸಿದರು.