ದೊಡ್ಡಬಳ್ಳಾಪುರ ಲಕ್ಕಸಂದ್ರದಲ್ಲಿ ಹುಲಿ ಅಜ್ಜಯ್ಯ ಹಾಗೂ ಬಾಲ ತ್ರಿಪುರ ಸುಂದರಿ ವಿಗ್ರಹ ಪ್ರಾಣ ಪ್ರತಿಷ್ಠಾಪನೆ.
ದೊಡ್ಡಬಳ್ಳಾಪುರ.. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ, ಲಕ್ಕಸಂದ್ರ ಗ್ರಾಮದ ನಿಸರ್ಗದ ಮಡಿಲಿನ ಪ್ರಶಾಂತ ವಾತಾವರಣದಲ್ಲಿರುವ ಶ್ರೀ ಕ್ಷೇತ್ರ ಪುಣ್ಯದಾಮದಲ್ಲಿ ಶ್ರೀ ಜಗದ್ಗುರು ಅಜ್ಜಯ್ಯನವರ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಫೆ 15, ಹಾಗೂ 16ರಂದು ನಡೆಯಲಿದೆ ಎಂದು ಶ್ರೀ ಕ್ಷೇತ್ರ ಪುಣ್ಯದಾಮದ ಪೀಠ ಅಧ್ಯಕ್ಷರಾದ ಶ್ರೀ ಗುರುದೇವ್ ಗುರೂಜಿ ಹೇಳಿದ್ದಾರೆ.
ಲಕ್ಕಸಂದ್ರದ ಶ್ರೀ ಕ್ಷೇತ್ರ ಪುಣ್ಯ ದಾಮದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಗುರುದೇವ್ ಗುರೂಜಿ ಮಾತನಾಡಿ, ಹಸರಂಗಿ ಅಜ್ಜಯ್ಯ ಉತ್ತರ ಕರ್ನಾಟಕದ ಸಂತ, ಪಕೀರ. ಉತ್ತರ ಕರ್ನಾಟಕದಲ್ಲಿ ತನ್ನ ಪವಾಡ ಗಳಿಂದಾಗಿ ಆ ಭಾಗದ ಭಕ್ತರ ಮನದಲ್ಲಿ ಚಿರಸ್ತಾಯಿಯಾಗಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಅವರ ಪ್ರೇರಣೆ ಯಂತೆ ದೊಡ್ಡಬಳ್ಳಾಪುರದ ನಿಸರ್ಗ ರಮನೀಯಾ ಪ್ರಶಾಂತ ಸ್ಥಳವಾದ, ಜೊತೆಗೆ ಗುರುರಾಯರ ಮಠವಿರುವ ಲಕ್ಕಸಂದ್ರದ ಪುಣ್ಯ ದಾಮದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಅಮೃತ ಶಿಲೆಯಲ್ಲಿ ಮೂಡಿಬಂದಿರುವ ಹುಲಿ ಅಜ್ಜಯ್ಯನ ವಿಗ್ರಹ ಹಾಗೂ ತ್ರಿಪುರ ಸುಂದರಿ ಹೆಸರಿನ ಬಾಲ ತ್ರಿಪುರಾಂಬಿಕೆ ಅಮ್ಮನವರ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀ ಕ್ಷೇತ್ರ ಪುಣ್ಯದಾಮದ ಲೋಕಾರ್ಪಣೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ನಾಡಿನ ಸುಮಾರು 15ಕ್ಕೂ ಹೆಚ್ಚು ಶಕ್ತಿ ಕೇಂದ್ರಗಳ, ಹೆಸರಾಂತ ಮಠಗಳ ಪೀಠ ಅಧ್ಯಕ್ಷರು ಹಾಗೂ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಫೆ.15 ಗುರುವಾರ ಗುರು ಪ್ರಾರ್ಥನೆ, ಮಹಾಗಣಪತಿ, ಪೂಜಾ ಕಳಸ ಸ್ಥಾಪನೆ, ವಾಸ್ತು ಹೋಮ, ಮಹಾ ಮಂಗಳಾರತಿ ನಡೆಯಲಿದೆ.16ಶುಕ್ರವಾರದಂದು ಗೋ ಪೂಜೆ, ಪ್ರಾಣ ಪ್ರತಿಷ್ಠಾಪನೆ, ಗೋ ಪ್ರವೇಶ, ಮಹಾ ಗಣಪತಿ ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪ್ರದಾನ ದೇವತೆಗಳ ಹೋಮ, ಲಲಿತ ಹೋಮ, ಸಹಸ್ರ ಹೋಮ, ಹಾಗೂ ಕುಂಬಾಭಿಷೇಕ ನಡೆಯಲಿದೆ ಎಂದ ಶ್ರೀಗಳು
ಶ್ರೀ ಕ್ಷೇತ್ರ ಪುಣ್ಯದಾಮವು ಹುಲಿ ಅಜ್ಜಯ್ಯನ ಶ್ರದ್ದಾ ಭಕ್ತಿ ಹಾಗೂ ಶಕ್ತಿ ಕೇಂದ್ರವಾಗಿದ್ದು, ಹುಲಿ ಅಜ್ಜಯ್ಯನವರು ಸರ್ವ ಧರ್ಮ ಸಮಾನ ಪ್ರತಿಪಾದಕರಾಗಿದ್ದಾವರು. ಹಾಗಾಗಿ ಉತ್ತರ ಕರ್ನಾಟಕ ದಾದ್ಯಂತ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ಅಜ್ಜಯ್ಯನವರ ಶಿಷ್ಯರಿದ್ದಾರೆ. ಮೇಲಾಗಿ ಶ್ರೀ ಕ್ಷೇತ್ರ ಜಾತ್ಯತೀತ ಕೇಂದ್ರವಾಗಿದ್ದು, ಇಲ್ಲಿ ಯಾವುದೇ ಭೇದ ಬಾವವಿಲ್ಲಲ್ಲದ ಬಾವೈಕ್ಯ ಸಾರುವ ಧಾರ್ಮಿಕ ಕೇಂದ್ರವಾಗಿದೆ. ಹಾಗಾಗಿ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಜಾತ್ಯತೀತವಾಗಿ, ಧರ್ಮತೀತವಾಗಿ ಸರ್ವರೂ ಆಗಮಿಸುತ್ತಾರೆ ಎಂದು ಗುರುದೇವ್ ಗುರೂಜಿ ಹೇಳಿದರು.
ಶ್ರೀ ಕ್ಷೇತ್ರ ಪುಣ್ಯದಾಮ ಹುಲಿ ಅಜ್ಜಯ್ಯ ಟ್ರಸ್ಟನ ಪ್ರಮುಖ ವಿನಯ್ ,ಚಂದ್ರಶೇಖರ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.