ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ನೇಣಿಗೆ ಯತ್ನ ಮನೆಯ ಬಾಗಿಲು ಒಡೆದು ಮಹಿಳೆಯ ರಕ್ಷಣೆ ಮಾಡಿದ ಪೊಲೀಸರು

ದೊಡ್ಡಬಳ್ಳಾಪುರ : ಅತ್ತೆ-ಸೊಸೆ ಜಗಳದಿಂದ ಬೇಸತ್ತ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು, 112 ಕರೆಗೆ ಸ್ವಂದಿಸಿದ ERSS ಪೊಲೀಸ್ ಸಿಬ್ಬಂದ ಸಕಾಲಕ್ಕೆ ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲು ಒಡೆದು ಮಹಿಳೆಯ ಪ್ರಾಣ ರಕ್ಷಣೆ ಮಾಡಿದ್ದಾರೆ. ಮಹಿಳೆ ಜೀವ ಕಾಪಾಡಿದ ಇಬ್ಬರು ERSS ಪೊಲೀಸ್ ಸಿಬ್ಬಂದಿಯನ್ನ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದರು.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಾಂಗಲ್ಯ ಸರ ಕಳವಿಗೆ ಯತ್ನ. ಕೈಯಲ್ಲಿದ್ದ ಸ್ಕ್ರೂಡ್ರೈವರ್ ನಿಂದ ಸರಗಳ್ಳನನ್ನ ಹಿಮ್ಮೆಟ್ಟಿಸಿದ ಗಟ್ಟಿಗಿತ್ತಿ ಮಹಿಳೆ
ದೊಡ್ಡಬಳ್ಳಾಪುರ ತಾಲೂಕಿನ ಮಳೇಕೋಟೆ ಗ್ರಾಮದಲ್ಲಿ ವಾರದ ಹಿಂದೆ ಘಟನೆ ನಡೆದಿದ್ದು, ಭಾಗ್ಯಲಕ್ಷ್ಮಿ ಎಂಬ ಹೆಣ್ಣು ಮಗಳು ಅತ್ತೆ ಜೊತೆ ಜಗಳವಾಡಿದ್ದಾಳೆ, ಜಗಳದಿಂದ ಬೇಸತ್ತ ಆಕೆ ಇಬ್ಬರು ಸಣ್ಣ ಮಕ್ಕಳನ್ನ ಕರೆದುಕೊಂಡು ಮನೆಯ ಬಾಗಿಲು ಹಾಕಿಕೊಂಡಿದ್ದಾಳೆ, ಈದಕ್ಕೂ ಮುನ್ನ ಆಕೆ 112 ಸಹಾಯವಾಣಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ

ಕರೆಗೆ ತಕ್ಷಣವೇ ಸ್ಪಂದಿಸಿದ ERSS-112 ಸಿಬ್ಬಂದಿಗಳಾಗ ಅಭಿಷೇಕ್ ಮತ್ತು ಶಿವರಾಜ್ ಸ್ಥಳಕ್ಕೆ ಧಾವಿಸಿದ್ದಾರೆ, ಭಾಗ್ಯಲಕ್ಷ್ಮೀಗೆ ಪೋನ್ ಮಾಡಿದ್ದಾಗ ಕರೆ ಸ್ವೀಕರ ಮಾಡಿಲ್ಲ, ಮನೆಯ ಬಳಿ ಹೋದಾಗ ಒಳಗಡೆಯಿಂದ ಬಾಗಿಲು ಹಾಕಲಾಗಿತ್ತು, ಕಿಟಕಿಯಿಂದ ನೋಡಿದ್ದಾಗ ವೇಲ್ ನಿಂದ ನೇಣು ಹಾಕಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ, ತಕ್ಷಣವೇ ಮನೆಯ ಬಾಗಿಲು ಒಡೆದು ಮಹಿಳೆಯ ಆತ್ಮಹತ್ಯೆ ಯತ್ನವನ್ನ ವಿಫಲಗೊಳಿಸಿದ್ದಾರೆ, ಆಕೆಯನ್ನ ಆಸ್ಪತ್ರೆಗೆ ಸೇರಿಸುವ ಮೂಲಕ ಇಬ್ಬರು ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದಿದ್ದರು ಈ ಕಾರಣಕ್ಕೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.