ಗಂಟಿಗಾನಹಳ್ಳಿ ಎಂ ಪಿ. ಸಿ. ಎಸ್ ಗೆ ಅಧ್ಯಕ್ಷ ರಾಗಿ ಡಿ. ರಮೇಶ್, ಉಪಾಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆ.ದೊಡ್ಡಬಳ್ಳಾಪುರ:ಗಂಟಿಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುದುವಾರ ಚುನಾವಣೆ ನಡೆಯಿತು.
13ಸದಸ್ಯ ಬಲದ ಗಂಟಿಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣಾಧಿಕಾರಿ ಮಾದವ ರೆಡ್ಡಿ ನೇತೃತ್ವದಲ್ಲಿ ನಡೆದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ದಿಸಿದ್ದ ಡಿ. ರಮೇಶ್ 9ಮತಗಳನ್ನು ಹಾಗೂ ಹನುಮಂತರಾಜು 4ಮತಗಳನ್ನು ಪಡೆದು 9ಮತಗಳನ್ನು ಪಡೆದ ಡಿ. ರಮೇಶ್ ರವರು ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ನವೀನ್ ಕುಮಾರ್ 9ಮತಗಳನ್ನು ಹಾಗೂ ಮಹೇಶ್ 4ಮತಗಳನ್ನು ಪಡೆದರು.9ಮತಗಳನ್ನು ಪಡೆದ ನವೀನ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ತೆಂಗುನಾರು ಸಹಕಾರ ಮಂಡಳಿ ಅಧ್ಯಕ್ಷರಾದ ಗಂಟಿಗಾನಹಳ್ಳಿ s. L ವೆಂಕಟೇಶ್ ಬಾಬು, ಟಿ. ಎ. ಪಿ. ಎಂ ಸಿಎಸ್ ನಿರ್ದೇಶಕ ರಂಗಪ್ಪ, ಪಿ. ಎಲ್. ಡಿ. ಬ್ಯಾಂಕ್ ನಿರ್ದೇಶಕ ಹನುಮಪ್ಪ, ಶೋಭಾ ನಾರಾಯಣ್, ಮೆಳೇಕೋಟೆ ಗ್ರಾ. ಪಂ. ಸದಸ್ಯರಾದ ನರೇಂದ್ರ ಗೌಡ, ರತ್ನಮ್ಮ ಸತ್ಯನಾರಾಯಣ, ಮುಖಂಡರಾದ ರಾಜೇಂದ್ರ, ರವಿಕುಮಾರ್, ನರಸಿಂಹ ಸ್ವಾಮಿ, ಶ್ರೀಧರ್ ಮೂರ್ತಿ, ಕೆಂಪರಾಜು, ಸುರೇಶ, ದುಬಾಯ್ ಪ್ರಕಾಶ್ ಹಾಜರಿದ್ದು ಶುಭ ಹಾರೈಸಿದರು.