ಪುಟ್ ಪಾತ್ ಅಂಗಡಿಗೆ ನುಗ್ಗಿದ ಲಾರಿ ಬೆಡ್ ಶಿಟ್ ವ್ಯಾಪಾರಿ ಕಾಲು ಮುರಿತ.
ದೊಡ್ಡಬಳ್ಳಾಪುರ; ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಗೂಡಂಗಡಿಗೆ ನುಗ್ಗಿರುವ ಘಟನೆ ನಗರದ ಹೊರವಲಯದಲ್ಲಿರುವ ಪಿಎಸ್‌ಐ ಜಗದೀಶ್ ವೃತ್ತದಲ್ಲಿ ನಡೆದಿದೆ.
ಘಟನೆಯಲ್ಲಿ ವ್ಯಾಪಾರಿ ಮಧ್ಯಪ್ರದೇಶ ಮೂಲದ ಶರವಣ (28 ವರ್ಷ) ಎನ್ನುವವರು ಗಂಭಿರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ದೇವನಹಳ್ಳಿ ಕಡೆಯಿಂದ ಕಬ್ಬಿಣ ಕಂಬಿಗಳನ್ನು ತುಂಬಿಕೊಂಡು ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದು, ಯಲಹಂಕ- ಹಿಂದೂಪುರ-ಕೋಲಾರ ಸಂಪರ್ಕದ ರಾಜ್ಯ ಹೆದ್ದಾರಿಯ ಪಿಎಸ್‌ಐ ಜಗದಿ ವೃತ್ತದ ಬದಿಯಲ್ಲಿ ಬೆಡ್ ಶೀಟ್‌ಗಳನ್ನು ಮಾರಾಟ ಮಾಡಲು ತಾತ್ಕಾಲಿಕವಾಗಿ ನಿರ್ಮಿಸಿದ್ದ ಗೂಡಂಗಡಿಗೆ ನುಗ್ಗಿದ್ದು, ನಾಲ್ಕು ಅಂಗಡಿಗಳಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆರವು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.