ದೊಡ್ಡಬಳ್ಳಾಪುರ:ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಜಾರಿಗೆ ತಂದಿದ್ದ ಯೋಜನೆಗಳಿಗೆ ಈಗಿನ ಕಾಂಗ್ರೇಸ್ ಸರ್ಕಾರ ಅನುದಾನ ನೀಡದೆ ಉಚಿತ ಭಾಗ್ಯಗಳ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಅಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಬಾಗವಹಿಸಿ ಮಾತನಾಡಿದರು
ರಾಜ್ಯ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸ ಲಾಗದೆ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ದಾರೆ ಈಗಿನ ಸರ್ಕಾರಕ್ಕೆ ಯಾವುದೆ ರೀತಿಯ ಮೌಲ್ಯ ಗಳು ಇದೆಯಾ ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರಿಗೆ ನಯಾಪೈಸೆ ಲಾಭವಾಗುತ್ತಿಲ್ಲ ಜನರು ಬಳೆಚಸುವಂತ ದಿನ ನಿತ್ಯ ಬೆಳೆಸುವ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ ನಾನು ಸಾರಿಗೆ ಸಚಿವರಾಗಿದ್ದಾಗ ದೊಡ್ಡಬಳ್ಳಾಪುರ ಕ್ಕೆ ಬಿ ಎಂ ಟಿ ಸಿ ಬಸ್ಸಿನ ಭಾಗ್ಯ ಕಲ್ಪಿಸಿಕೊಟ್ಟೆ ಅದರೆ ಈಗಿನ ಸರ್ಕಾರ ಇಂತಹ ಒಂದೆ ಒಂದು ಸೌಲಭ್ಯವನ್ನು ಕಾಂಗ್ರೇಸ್ ಸರ್ಕಾರ ನೀಡಿದೆಯಾ ಎಂದು ಪ್ರಶ್ನೆ ಮಾಡಿದರು.
ನಂತರ ಮಾಜಿ ಸಚಿವ ಎಂ ಟಿ ಬಿ ನಾಗರಾಜ್ ಮಾತನಾಡಿ ಅಧಿಕಾರದಲ್ಲಿ ಇರುವ ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜನರಲ್ಲಿ ತಲುಪಿಸುವಲ್ಲಿ ಸಂಪೂರ್ಣವಾಗಿ ಸೋತಿದೆ ಗ್ಯಾರಂಟಿ ಎಂಬ ಅಸ್ತ್ರ ಬಳಿಸಿ ಚುನಾವಣೆ ಗೆದ್ದು ಕಾಂಗ್ರೇಸ್ ಪಕ್ಷ ಜನರಿಗೆ ದ್ರೋಹ ಮಾಡಿದೆ ಎಂದು ಅರೋಪಿಸಿದರು.
ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಗಳು ಯಶಸ್ವಿಯಾಗಿ ಜಾರಿಯಾಗುತ್ತಿಲ್ಲ ತಾಲ್ಲೂಕು ಜಿಲ್ಲಾ ಕಛೇರಿ ಸೇರಿದಂತೆ ಮಧ್ಯವರ್ತಿಗಳ ಹಾವಳಿಗಳಿಂದ ಸರ್ಕಾರಕ್ಕೂ ಹಾಗು ಜನರಿಗೂ ತುಂಬಾ ತೊಂದರೆಯಾಗುತ್ತಿದೆ
ಹಾಗು ಗ್ರಾಮೀಣ ಬಾಗದಲ್ಲಿ ಕುಡಿಯುವ ನೀರಿನ ಬವಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ವಿದ್ಯುತ್ ಅಭಾವ ಮೂಲಭೂತ ಸೌಕರ್ಯಗಳು
ತಾಂಡವಾಡುತ್ತಿದೆ ಹಾಗು ಗ್ರಾಮೀಣ ಬಾಗದಲ್ಲಿ ರಸ್ತೆಗಳಿಗೆ ಡಾಂಬರೀಕರಣಕ್ಕೆ ಮಂಜೂರು ಮಾಡಿ ಅರ್ಧದಷ್ಠು ಕಾಮಗಾರಿ ಮಾಡಿ ಸರ್ಕಾರ ಹಣ ಬಿಡುಗಡೆ ಮಾಡದೆ ಹಾಗೆ ಉಳಿದಿವೆ ದಿನ ನಿತ್ಯ ಸಾಮಾನ್ಯರು ಸಮಸ್ಯೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ.ಎಂದು ಸರ್ಕಾದ ವಿರುದ್ದ ಕಿಡಿಕಾರಿದರು.
ತಾಲ್ಲೂಕಿಗೆ ಮಂಜೂರಾಗಿರುವ 250 ಹಾಸಿಗೆಗಳ ಅಸ್ಪತ್ರೆ ನಿರ್ಮಾಣ ವಿಳಂಬವಾಗಿದೆ 250 ಹಾಸಿಗೆಯ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡುವ ಹಂತದಲ್ಲಿದ್ದು ಅದಕ್ಕೆ ತಡೆ ಮಾಡುತ್ತಿರುವ ಸರ್ಕಾರದ ವಿರುದ್ದ ಹೋರಾಟ ಮಾಡಲು ಮುಂದಾಗಿದ್ದೇವೆ ಎಂದು ಶಾಸಕ ದಿರೇಜ್ ಮುನಿರಾಜ್ ಅಕ್ರೋಶ ವ್ಯಕ್ತ ಪಡಿಸಿದರು.
ನಮ್ಮ ಜಿಲ್ಲೆಯಲ್ಲಿ ರೈತ ಸಮಸ್ಯ ಬಿಗಡಾಯಿಸಿದೆ ಅದರೆ ಕಾಂಗ್ರೇಸ್ ಸರ್ಕಾರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ ಅದರೆ ಕಾಂಗ್ರೇಸ್ ಸರ್ಕಾರ ಜನ ವಿರೋದ ಕೆಲಸಗಳುನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದೆ ಸರ್ಕಾರಗಳನ್ನು ಬಡಿದೆಬ್ಬಿಸಲು ಇಂತಹ ಪ್ರತಿಭಟನೆಗಳು ನಿರಂತರವಾಗಿ ನೆಡೆಯ ಬೇಕಿದೆ ಎಂದು ಹೇಳಿದರು.
ಬಿಜೆಪಿ ಪಕ್ಷದ ಮುಖಂಡರು ಹಾಗು ನೂರಾರು ಕಾರ್ಯಕರ್ತರು ನಗರದ ನೆಲದಾಂಜೀನೇಯ ದೇವಾಲಯದಲ್ಲಿ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ತಾಲ್ಲೂಕು ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.