ಬೆಂಗಳೂರು ಗ್ರಾಮಾಂತರ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾಗಿ ಟಿ. ವಿ. ಶರತ್ ಪಟೇಲ್ ನೇಮಕ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾಗಿ ದೊಡ್ಡಬಳ್ಳಾಪುರ ತಾಲೂಕು ತಲಗವಾರ ಗ್ರಾಮದ T. V. ಶರತ್ ಪಟೇಲ್ ಅವರನ್ನು ಆಯ್ಕೆ ಮಾಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಲ್. ಆರ್. ನಾಗೇಶ್ ನೇಮಕಾತಿ ಪತ್ರ ನೀಡಿದ್ದಾರೆ.
ಇದರ ಅನ್ವಯ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಈ ಹೊಣೆಗಾರಿಕೆ ಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢ ಗೊಳಿಸುತ್ತ, ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸುವಲ್ಲಿ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ನೂತನವಾಗಿ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶರತ್ ಪಟೇಲರನ್ನು ಮಾಜಿ ಶಾಸಕರಾದ ವೆಂಕಟರಮಣಯ್ಯ, ತಾ. ಪಂ. ಮಾಜಿ ಅಧ್ಯಕ್ಷ ರಾದ ಡಿ. ಸಿ. ಶಶಿಧರ್, ದೊಡ್ಡಬಳ್ಳಾಪುರ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾದ ಬೈರೇಗೌಡ, ಕಸಬಾ ಬ್ಲಾಕ್ ಅಧ್ಯಕ್ಷರಾದ ವೆಂಕಟೇಶ್.. ಅಪ್ಪಿ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಪಿ. ಜಗನ್ನಾಥ್, ಕಾಂಗ್ರೆಸ್ ಮುಖಂಡರಾದ ರಾಮಣ್ಣ, ಲಾವಣ್ಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ವಿಶ್ವಾಸ್ ಹನುಮಂತೇಗೌಡ ರವರು ಅಭಿನಂದಿಸಿದ್ದಾರೆ.