ರಾಗಿ ಬಣವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು : ಸುಮಾರು ₹40 ಸಾವಿರ ಬೆಲೆಯ ಹುಲ್ಲು ನಷ್ಟ.
ದೊಡ್ಡಬಳ್ಳಾಪುರ: ಇಂದು ಮುಂಜಾನೆ ಹುಲ್ಲು ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ರಾಗಿ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಬೂದಿಯಾಗಿದೆ.
ತಾಲ್ಲೂಕಿನ ತೂಬಗೆರೆ ಹೋಬಳಿ ನೆಲ್ಲುಕುಂಟೆ ಗ್ರಾಮದ ರಾಮಂಜಿನಪ್ಪಾ ಮತ್ತು ಕೋಮಲಮ್ಮ ದಂಪತಿಗಳಿಗೆ ಸೇರಿದ ರಾಗಿ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಹುಲ್ಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಈ ಕುರಿತ ಮಾತನಾಡಿದ ರೈತ ರಾಮಾಂಜಿನಪ್ಪ ಅವರು, ಇಂದು ಮುಂಜಾನೆ ಎರಡು ಗಂಟೆ ರಾತ್ರಿಯಲ್ಲಿ ರಾಗಿ ಬಣವೆಗೆ ಯಾರೊ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಬಂತು. ಸುತ್ತಲಿನ ಜನರು ಸೇರಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದೆವು. ಆದರೆ, ಈ ವೇಳೆಗಾಗಲೇ ಸುಮಾರು ₹40 ಸಾವಿರ ಬೆಲೆ ಬಾಳುವ ಹುಲ್ಲು ಸಂಪೂರ್ಣ ಸುಟ್ಟು ಹೋಗಿತ್ತು ಎಂದು ತಮ್ಮ ಅಳಲು ತೋಡಿಕೊಂಡರು.