ಅನಂತಕುಮಾರ್ ಹೇಳಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ.

ದೊಡ್ಡಬಳ್ಳಾಪುರ,: ದೊಡ್ಡಬಳ್ಳಾಪುರ ನಗರ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ತಾಲೂಕು ಕಚೇರಿ ವೃತ್ತದಲ್ಲಿ ತಾಲೂಕು ಕಾಂಗ್ರಸ್ ಕಾರ್ಯರ್ತರ ವತಿಯಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅನಂತ್ ಕುಮಾರ್ ಹೆಗಡೆಯ ಹೇಳಿಕೆ ಖಂಡಿಸಿ ಅವರ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷಿಪತಿ ಮಾತನಾಡಿ, ಸಂಸ್ಕೃತಿ ಇಲ್ಲದ ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆ ನಾಲ್ಕು ವರ್ಷಗಳಿಂದ ಜನಸೇವೆ ಮಾಡದೆ ತಲೆಮರಿಸಿಕೊಂಡಿದ್ದು ಹಿಂದೂ ಧಾರ್ಮಿಕ ಹೆಸರಿನಲ್ಲಿ ಹಾಗೂ ಶ್ರೀ ರಾಮನ ಹೆಸರಿನಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಕೀಳು ಮಟ್ಟದ ಟೀಕೆ ಮಾಡಿ ಹಾಗೂ ಕಾನೂನು ವ್ಯವಸ್ಥೆಗೆ ದಕ್ಕೆ ತರುವ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಬಂಧಿಸಬೇಕೆಂದರು. ಸಂವಿಧಾನದ ವಿಚಾರದಲ್ಲಿ ಸಂವಿಧಾನ ಬದಲಾವಣೆ ಮಾಡಬೇಕೆಂದು ಹೇಳಿಕೆ ನೀಡಿದ್ದ ಅನಂತ್ ಕುಮಾರ್ ಸಂವಿಧಾನ ವಿರೋಧಿ ಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲಿ ಅದನ್ನ ಹೊರೆತು ಚುನಾವಣೆಯ ದೃಷ್ಟಿಯಿಂದ ಕೋಮುಗಲಭೆ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಖಂಡನೀಯ ಎಂದರು.

ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದ ಪರಿಣಾಮ ಬಿಜೆಪಿ ಲೋಕಸಭೆ ಚುನಾವಣೆ ಎದುರಿಸಲು ಕಷ್ಟವಾಗಿದೆ. ಜತೆಗೆ ಈಗಾಗಲೇ ವಿಶ್ವೇಶ್ವರ ಹೆಗಡೆ ಅಲ್ಲಿ ಚುನಾವಣೆ ಟಿಕೆಟ್ ಕೇಳುತ್ತಿದ್ದಾರೆ ಈ ಕಾರಣಕ್ಕೆ ನಾಲ್ಕು ವರ್ಷ ಮಲಗಿದ್ದ ಅನಂತ್ ಕುಮಾರ್ ಚುನಾವಣೆ ಸಮೀಪಿಸುತ್ತಿದ್ದಾಂತೆ ಸಿ.ಎಂ ರನ್ನು ನಿಂದಿಸಿ ಟಿಕೆಟ್ ಗಿಟ್ಟಿಸಿಕೊಳ್ಳುವ ಭರದಲ್ಲಿದ್ದಾರೆಪ್ರತಿ ಹಂತದಲ್ಲೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಧರ್ಮವನ್ನು ಒಡೆದು ಆಳುವುದು ಹಾಗೂ ಧರ್ಮದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸುವುದು ಬಿಜೆಪಿಯ ಉನ್ನಾರವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದರು.

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಎಂ ಕೃಷ್ಣ ಮೂರ್ತಿ, ಬಿ.ಜಿ ಹೇಮಂತ್ ರಾಜ್ , ವೆಂಕಟೇಶ್(ಅಪ್ಪಿ) ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.