M. T. B. ನಾಗರಾಜ್ ರವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸ್ಪರ್ದಿಸಲು ಟಿಕೆಟ್ ನೀಡಬೇಕು… ಆಲಹಳ್ಳಿ ಚಂದ್ರ ಶೇಖರ್.
ದೊಡ್ಡಬಳ್ಳಾಪುರ:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿ. ಜೆ ಪಿ ಪಕ್ಷದಿಂದ ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ M. T. B. ನಾಗರಾಜ್ ರವರಿಗೆ ಟಿಕೆಟ್ ನೀಡಬೇಕು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳು ಅಧಿಕವಾಗಿವೆ. ಹಿಂದಿನ B. J. P ಸರ್ಕಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಯಶಸ್ವಿ ಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದ್ದರಿಂದ ಪಕ್ಷ ಅವರಿಗೆ ಟಿಕೆಟ್ ನೀಡಿದರೆ ಗೆಲ್ಲುವ ಸಾಧ್ಯತೆ ನಿಚ್ಚಳವಾಗಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಹಾಲಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ M. T. B. ಅಭಿಮಾನಿಗಳಿಂದ ನಡೆಸಲಾದ ಪತ್ರಿಕಾಗೋಷ್ಟಿಯಲ್ಲಿ ಚಂದ್ರಶೇಖರ್ ಮಾತನಾಡಿ, ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿರವರ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ಎಂಬ ಘೋಷವಾಕ್ಯದಂತೆ ನಾವುಗಳು ಹಿಂದುಳಿದ ವರ್ಗಗಳ ಹಿರಿಯಣ್ಣನಂತಿರುವ ಕುರುಬ ಸಮಾಜವು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ದಲ್ಲಿ ಸುಮಾರು 2.50ಲಕ್ಷ ಮತದಾರರಿದ್ದು, ಈಗಾಗಲೇ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚಿರಪರಿಚಿತರಾಗಿರುವ ಹಿರಿಯ ರಾಜಕಾರಣಿ M. T. B. ನಾಗರಾಜಣ್ಣನವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಲು ಅವಕಾಶ ಮಾಡಿಕೊಡಬೇಕೆಂದು ರಾಜ್ಯ B. J. P ವರಿಷ್ಟರನ್ನು ಈ ಮೂಲಕ ಒತ್ತಾಯಿಸುತ್ತಿದ್ದೇವೆ.ಕಳೆದ ಬಾರಿ B. J. P. ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದ M. T. B. ನಾಗರಾಜಣ್ಣನವರು ಮೊನ್ನಿನ ವಿಧಾನಸಭಾ ಚುನಾವಣೆ ಯಲ್ಲಿ ಕೆಲವರ ಕುತಂತ್ರದಿಂದ ಸೋಲುಡಿದ್ದರು ಸಹ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಮೇಲಾಗಿ ಲೋಕಸಭಾ ಕ್ಷೇತ್ರದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿ ವರ್ಗವಿದೆ. ಮೇಲಾಗಿ ಕ್ಷೇತ್ರ ವ್ಯಾಪಿ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪಕ್ಷದ ಹಿಂದುಳಿದ ವರ್ಗಗಳ ಮುಖಂಡರು ನಾಗರಾಜ್ ರವರಿಗೆ ಟಿಕೆಟ್ಗಾಗಿ ಸಭೆ ನಡೆಸಿದ್ದಾರೆ. ಜೊತೆಗೆ ನಮ್ಮ ಕುರುಬ ಸಮಾಜದ ಮುಖಂಡರು ಈ ಬಗ್ಗೆ ಪಕ್ಷದ ಮುಖಂಡರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನಾಗರಾಜ್ ರವರ ಸ್ಪರ್ಧೆಯಿಂದ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಈ ಎಲ್ಲಾ ಕಾರಣಗಳಿಂದಾಗಿ M. T. B. ರವರಿಗೆ ಸ್ಪರ್ದಿಸಲು ಪಕ್ಷದ ವರಿಷ್ಟರು ಅವಕಾಶ ಮಾಡಿಕೊಡಬೇಕೆಂದು ನಾಗರಾಜ್ ಅಣ್ಣನವರ ಅಭಿಮಾನಿ ವರ್ಗ ಒತ್ತಾಯಿಸುತ್ತದೆ ಎಂದು ಚಂದ್ರಶೇಖರ್ ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಹೊಸಕೋಟೆ ಕೇಶವ ಮೂರ್ತಿ ಮಾತನಾಡಿ, ಕುರುಬ ಸಮಾಜ ಸ್ಪರ್ದಿಸಲು ಅವಕಾಶವಿರುವ ರಾಜ್ಯದ ಕೆಲವೇ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವು ಒಂದು. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ M. T. B ರವರ ಪ್ರಭಾವ ಹೆಚ್ಚಿದೆ. ಈ ಭಾಗದಲ್ಲಿ ಕುರುಬ ಸಮಾಜದ ಮತಗಳು ಅಧಿಕ ಸಂಖ್ಯೆಯಲ್ಲಿವೆ. ಅದಕ್ಕಿಂತ ಮುಖ್ಯವಾಗಿ ಎಲ್ಲಾ ಹಿಂದುಳಿದ ವರ್ಗಗಳು ನಾಗರಾಜ್ ಅವರನ್ನು ಪಕ್ಷತೀತವಾಗಿ ಬೆಂಬಲಿಸುತ್ತವೆ. ಹಿಂದಿನ ಬಾರಿ ಪಕ್ಷ ಅಧಿಕಾರಕ್ಕೆ ಬರಲು ನಾಗರಾಜ್ ರವರು ಶ್ರಮಿಸಿದ್ದರು. ಹಾಗೂ ಸರ್ಕಾರದಲ್ಲಿ ಸಚಿವರಾಗಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೆಚ್ಚಿನ ಸಹಕಾರ ನೀಡಿ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಹಾಗಾಗಿ ಇವರಿಗೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಲು ವರಿಷ್ಟರು ಅನುವು ಮಾಡಿಕೊಡಬೇಕಿದೆ. ಹಿಂದುಳಿದ ವರ್ಗಕ್ಕೆ ಅನುಕೂಲ ಮಾಡಿಕೊಡುವುದರಿಂದ ಪಕ್ಷಕ್ಕೆ ಸಹಕಾರಿ ಯಾಗಲಿದೆ. ಇಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ನಾಗರಾಜ್ ರವರ ಸ್ಪರ್ಧೆಯಿಂದ ಪಕ್ಕದ ಕ್ಷೇತ್ರಗಳಿಗೆ ಅನುಕೂಲವಾಗುವ ಸಾಧ್ಯತೆ ಗಳು ದಟ್ಟವಾಗಿವೆ. ಈ ಬಗ್ಗೆ ರಾಜ್ಯಬ್. B. J. P. ವರಿಷ್ಟರು M. T. B. ರವರ ಪ್ರಭಾವವನ್ನು ಹಾಗೂ ಅವರ ಪಕ್ಷ ಸೇವೆಯನ್ನು ಗುರ್ತಿಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಲು ಅವರಿಗೆ ಅವಕಾಶ ಮಾಡಿಕೊಡಬೇಕಾಗಿದೆ ಎಂದು ಕೇಶವ ಮೂರ್ತಿ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ನೆಲಮಂಗಲ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್, ಮಾಡಗೊಂಡಹಳ್ಳಿ ಗ್ರಾ. ಪಂ. ಸದಸ್ಯ ನಾಗರಾಜು ತಾಲೂಕು ಹಾಲುಮತ ಮಹಾಸಭಾದ ಕಾರ್ಯಾಧ್ಯಕ್ಷ ಚೌಡರಾಜ್, ಮಾದಗೊಂಡನಹಳ್ಳಿ m p. C. S. ನಿರ್ದೇಶಕ ಮಂಜುನಾಥ್, ತೇರಿನ ಬೀದಿ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಎಲ್ಲಪ್ಪ, ಮುಖಂಡರಾದ ಕೆಂಪರಾಜು, ಮುನಿಬೀರಣ್ಣ, ಲಕ್ಷ್ಮೀಶ್, ಬೀರೇಶ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.