ದೊಡ್ಡಬಳ್ಳಾಪುರ.. ಗಂಡರ ಗೂಳಿಪುರ ವಿ. ಎಸ್. ಎಸ್. ಎನ್ ಚುನಾವಣೆ ಪ್ರಕ್ರಿಯೆ ಕ್ರಮ ಬದ್ದವಾಗಿಲ್ಲ. ಮತದಾರ ಪಟ್ಟಿಯಲ್ಲಿ ಪಹಣಿ ಹೊಂದಿಲ್ಲದ ಹಲವಾರು ಜನ ಸೇರ್ಪಡೆಯಾಗಿದ್ದಾರೆ. ಅರ್ಹ ಷೇರುದಾರರನ್ನು ಪಟ್ಟಿಯಿಂದ ಹೊರಗಿಟ್ಟು ಚುನಾವಣೆ ನಡೆಸಲು ಹೊರಟಿರುವುದು ಸರಿಯಲ್ಲ. ಇದು ಸಂಪೂರ್ಣ ಅಕ್ರಮವಾಗಿದೆ. ಆದ್ದರಿಂದ ಈಗ ಘೋಷಣೆ ಯಾಗಿರುವ ಸೊಸೈಟಿ ಚುನಾವಣೆ ಮುಂದೂಡಬೇಕು. ಇಲ್ಲದಿದ್ದರೆ ಪರಿಣಾಮ ಬೇರೆಯಾಗುತ್ತದೆ. ಎಂದು ರಾಜ್ಯ ಜೆ. ಡಿ. ಎಸ್ ಪ್ರದಾನ ಕಾರ್ಯದರ್ಶಿ ಹರೀಶ್ ಗೌಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗಂಡರ ಗೂಳಿ ಪುರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಹರೀಶ್ ಗೌಡರು ಮಾತನಾಡಿ ಕನಸವಾಡಿ ಹಾಗೂ ಹೊನ್ನಾವರ ಪಂಚಾಯ್ತಿ ವ್ಯಾಪ್ತಿಯ ಸುಮಾರು 800ಷೇರುದಾರರು ಕನಸವಾಡಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ಯಶಸ್ಸಿಗೆ ಕಾರಣರಾಗಿದ್ದರು. ಪ್ರಸ್ತುತ ಕನಸವಾಡಿ ಯಿಂದ ಬೇಪಟ್ಟು ಈಗ ಪ್ರತ್ಯೇಕವಾಗಿ ಗಂಡರ ಗೂಳಿ ಪುರ ವಿ ಎಸ್ ಎಸ್ ಎನ್ ಅಸ್ತಿತ್ವಕ್ಕೆ ಬಂದಿದೆ. ಆದರೆ ಮೂಲ ಷೇರುದಾರರನ್ನು ಕೈ ಬಿಟ್ಟು ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿ ಚುನಾವಣೆಯನ್ನು ಅಕ್ರಮವಾಗಿ ಗೆಲ್ಲಲು ಕಾಂಗ್ರೆಸ್ ನಾಯಕರು ಯತ್ನಿಸಿದ್ದಾರೆ. ಆಶ್ಚರ್ಯವೆಂದರೆ ಮುಖ್ಯ ಪ್ರವರ್ತಕರ ಗಮನಕ್ಕೆ ಹಾಗೂ ಸದಸ್ಯರ ಗಮನಕ್ಕೆ ತರದೇ ಏಕಾ ಏಕಿ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಚುನಾವಣಾಧಿಕಾರಿಗಳು ಆಡಳಿತ ಪಕ್ಷದ ಸದಸ್ಯರ ಒತ್ತಡಕ್ಕೆ ಒಳಗಾಗಿ ವಿರೋಧಪಕ್ಷಗಳನ್ನು ಹೊರಗಿಟ್ಟು ಅಕ್ರಮ ಚುನಾವಣೆಗೆ ಸಹಕಾರ ನೀಡುತ್ತಿದ್ದಾರೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಲು ಬಿಡುವುದಿಲ್ಲ. ಮತದಾರರ ಪಟ್ಟಿ ಸರಿ ಪಡಿಸಿ ನಂತರ ಚುನಾವಣೆ ನಡೆಸಲಿ. ಅಲ್ಲಿಯವರೆಗೂ ಚುನಾವಣೆ ಮುಂದೂಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾದೀತು ಎಂದು ಹರೀಶ್ ಗೌಡ ಹೇಳಿದರು.
ಗಂಡರ ಗುಳಿಪುರದ ವಿ. ಎಸ್. ಎಸ್. ಎನ್ ಮುಖ್ಯ ಪ್ರವರ್ತಕ ಗಂಗಾಧರಯ್ಯ ಮಾತನಾಡಿ ಚುನಾವಣೆ ಘೋಷಣೆ ಮುಖ್ಯ ಪ್ರವರ್ತಕ ನಾದ ನನ್ನ ಗಮನಕ್ಕೆ ಬಂದಿಲ್ಲ. ಜೊತೆಗೆ ಜೆ. ಡಿ. ಎಸ್ ಹಾಗೂ ಬಿ. ಜೆ. ಪಿ ಪಕ್ಷದವರ ಗಮನಕ್ಕೆ ತರದೇ ಏಕಾ ಏಕಿ ಚುನಾವಣೆ ಘೋಷಿಸಿದ್ದಾರೆ. ಆಶ್ಚರ್ಯವೆಂದರೆ ನನ್ನ ಹೆಸರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ಮತದಾರ ಪಟ್ಟಿ ಸರಿ ಪಡಿಸಿ ಚುನಾವಣೆ ನಡೆಸಲಿ. ಆದ್ದರಿಂದ ಚುನಾವಣೆ ಮುಂದೂಡಬೇಕು ಇಲ್ಲವಾದಲ್ಲಿ ಕಾನೂನು ರೀತ್ಯ ಹೋರಾಟ ಮಾಡಲು ಸಿದ್ದರಿದ್ದೇವೆ ಎಂದರು.
ವಿ ಎಸ್. ಎಸ್. ಎನ್. ಸದಸ್ಯ ಗಂಗಾಧರಯ್ಯ್ ಮಾತನಾಡಿ ನೂತನ ಸೊಸೈಟಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮಗೆ ಬೇಕಾದವರ ಷೇರುಗಳನ್ನು ಹಾಕಿಸಿ ಅರ್ಹರದವರನ್ನು ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಇದು ಕಂಡನೀಯ. ಜೊತೆಗೆ ಈ ಸೊಸೈಟಿ ಕೆಲವು ಕಾಂಗ್ರೆಸ್ ಕುಟುಂಬಗಳ ಕೈಗೆ ಅಧಿಕಾರ ಕೊಡುವ ಹುನ್ನಾರವಾಗಿದೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಈಗಾಗಲೇ ಸ್ಥಳೀಯ ರೈತರು ಪ್ರತಿಭಟಿಸಿದ್ದಾರೆ. ಚುನಾವಣೆ ಮುಂದೂಡದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳಿದರು.