ಸರ್ಕಾರಿ ಮಹಿಳಾಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ.

ದೊಡ್ಡಬಳ್ಳಾಪುರ: ನಗರದ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಲ್ಲಿ ಅರ್ಥಶಾಸ್ತ್ರದ ವಿವಿಧ ಭಾಗದ ವತಿಯಿಂದ ವಿಶೇಷ ಉಪನ್ಯಾಸಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .

ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಸುಧಾರಣೆಗಳ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಆಶಾಲತಾ ವಿ. ಸಹಾಯಕ ಪ್ರಾಧ್ಯಾಪಕರು ಬೆಂಗಳೂರು ಇವರು ವಿದ್ಯಾರ್ಥಿನಿಯರಿಗೆ ಸುಸ್ಥಿರ ಅಭಿವೃದ್ಧಿ ಮೂಲ ನೆಲೆ ಹಾಗೂ ಸುಧಾರಣಾ ಕ್ರಮಗಳನ್ನು ಕುರಿತು ವಿಚಾರ ಮಂಡನೆ ಮಾಡಿದ್ದರು.

ನಂತರ ಮಾತನಾಡಿದ ಸರ್ಕಾರಿ.ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಸುದರ್ಶನ್ ಕುಮಾರ್ ಎಂ. ಇವರು ಬದಲಾಗುತ್ತಿರುವ ಸಂಕೀರ್ಣ ಆರ್ಥಿಕ ಪರಿಸ್ಥಿತಿ ಯಲ್ಲಿ ಪ್ರತಿಯೊಬ್ಬರ ಪಾತ್ರ ಸುಸ್ಥಿರ ಅಭಿವೃದ್ಧಿ ಗೆ ಬಹಳ ಮಹತ್ವ ವಾದದ್ದು ಎಂದು ನಿರಂತರತೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ವಿದ್ಯಾರ್ಥಿ ನಿರಿಗೆ ಅರಿವನ್ನು ಮೂಡಿಸಿದ್ದರು.

ಈ ಸಂದರ್ಭ ದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹನುಮಂತ ರಾಯಪ್ಪ ಹೆಚ್ ಹಾಗೂ IQAC ಸಂಚಾಲಕ ದಿವ್ಯಶ್ರೀ ಎಂ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.