ದೊಡ್ಡಬಳ್ಳಾಪುರ:ನಗರ ವೀರಭದ್ರನಪಾಳ್ಯ, ಕನಕಪ್ಪನಹಟ್ಟಿ ಸುಣ್ಣಕಲ್ಲರ ಬೀದಿಯಲ್ಲಿ ದೇವನಹಳ್ಳಿ ಶ್ರೀ ಚೌಡೆಶ್ವರಿ ಮತ್ತು ಶ್ರೀ ಮುತ್ಯಾಲಮ್ಮ ಸೇವಾ ಸಮಿತಿಯಿಂದ 8ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೆ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ರಾದಮ್ಮ ನವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಾಬು, ಹರೀಶ್, ಸುಬ್ರಮಣಿ, ನಾಗರಾಜ್, ರಾಜ, ಸುರೇಶ, ಮಧುಸೂದನ್, ಹಿರಿಯರಾದ ವಕೀಲ ಲಕ್ಷ್ಮೀನಾರಾಯಣ, ಸೀನಪ್ಪ, ಚೌಡರಾಜ್ ಮುಂತಾದವರು ಭಾಗವಹಿಸಿದ್ದರು.