ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ನಾರಾಯಣಗೌಡರು ನಾಮಫಲಕಗಳಲ್ಲಿ ಕನ್ನಡವನ್ನು ಕಡೆಗಣಿಸಿರುವುದನ್ನು ವಿರೋಧಿಸಿ ನಡೆಸಿದ ಬೃಹತ್ ಜನಜಾಗೃತಿ ಪ್ರತಿಭಟನಾ ಹೋರಾಟಕ್ಕೆ ರಾಜ್ಯಾದ್ಯಂತ ಉತ್ತಮ ಬೆಂಬಲ ಸಿಕ್ಕಿದ್ದು ದೊಡ್ಡಬಳ್ಳಾಪುರ ತಾಲೂಕು ರಕ್ಷಣಾ ವೇದಿಕೆ ವತಿಯಿಂದ ಹೋರಾಟಕ್ಕೆ ನೂರಾರು ಕಾರ್ಯಕರ್ತರು ಬೆಂಬಲ ಸೂಚಿಸಿ ಹೋರಾಟದಲ್ಲಿ ಭಾಗವಹಿಸಿದ್ದರು.
ನಾರಾಯಣಗೌಡರ ಆದೇಶದಂತೆ ರಾಜ್ಯ ಉಪಾಧ್ಯಕ್ಷ ಪುಟ್ಟೇಗೌಡರ ಹಾಗೂ ಮಹಿಳಾ ಘಟಕದ ಉಪಾಧ್ಯಕ್ಷರಾದ ಅನ್ನಪೂರ್ಣ ರವರ ಮಾರ್ಗದರ್ಶನದಲ್ಲಿ ತಾಲೂಕು ಅಧ್ಯಕ್ಷರಾದ ವಿ ಪುರುಷೋತ್ತಮ್ ಗೌಡ ನೇತೃತ್ವದಲ್ಲಿ ಹೋರಾಟಕ್ಕೆ ಬೆಂಬಲ ಸೂಚಿಸಿ ತಾಲೂಕಿನ ನೂರಾರು ಕಾರ್ಯಕರ್ತರು ಹೋರಾಟದ ಕೇಂದ್ರ ಬಿಂದುವಾದ ಸಾದಳ್ಳಿ ಗೇಟ್ ಬಳಿ ವಾಹನಗಳಲ್ಲಿ ತೆರಳಿ ಆಂಗ್ಲ ಭಾಷೆಯ ನಾಮಫಲಕಗಳ ತೆರವಿಗೆ ಆಗ್ರಹಿಸಿ ಧಿಕ್ಕಾರ ಕೂಗಿದರು. ನಂತರ ನಾರಾಯಣಗೌಡರ ಸಲಹೆಯಂತೆ ಮಾಲ್ ಆಫ್ ಏಶಿಯಾಗೆ ಮುತ್ತಿಗೆ ಹಾಕಲು ಬೆಂಗಳೂರು ಕಡೆ ತೆರಳಿದಾಗ ಮಾರ್ಗ ಮಧ್ಯೆ ಪೊಲೀಸರು ದೊಡ್ಡಬಳ್ಳಾಪುರದ ಹೋರಾಟಗಾರರನ್ನು ತಡೆದು ವಾಪಸ್ ಕಳಿಸಿದರು.ಇದರ ಮಧ್ಯೆ ದಾರಿಯಲ್ಲಿ ಸಿಕ್ಕ ಆಂಗ್ಲ ಭಾಷೆಯ ನಾಮಫಲಕಗಳನ್ನು ಕಿತ್ತು ಬಿಸಾಡಿ ವಲಸಿಗರ ಹಾಗೂ ಕನ್ನಡ ವಿರೋಧಿಗಳ ವಿರುದ್ಧ ಘೋಷಣೆ ಕೂಗಿದರು. ಜನಜಾಗೃತಿಯ ಪ್ರತಿಭಟನೆ ಈ ಹೋರಾಟಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಸಾಕಷ್ಟು ವಾಣಿಜ್ಯ ಮಳಿಗೆಗಳು ಹಾಗೂ ಮಾಲ್ಗಳ ಆಂಗ್ಲ ಆಂಗ್ಲ ಪಾಲಕಗಳು ಕಣ್ಮರೆಯಾಗಿ ಕನ್ನಡ ಭಾಷೆಯ ನಾಮಫಲಕಗಳು ದಿಡೀರನೆ ಉದ್ಭವವಾಗಿದ್ದು, ಒಂದು ಅರ್ಥದಲ್ಲಿ ಕನ್ನಡವನ್ನು ಕಡೆಗಣಿಸಿದ್ದ ವಲಸಿಗರಿಗೆ ಮುಂದೆ ಭಾಗಶಹ ಪರಭಾಷ ನಾಮಫಲಕಗಳು ಕಡಿಮೆಯಾಗುವ ನಿರೀಕ್ಷೆ ಹೋರಾಟಗಾರರದ್ದು.ಇದು ಒಂದು ಅರ್ಥದಲ್ಲಿ ದೊಡ್ಡಬಳ್ಳಾಪುರ ವಾಣಿಜ್ಯ ಮಳಿಗೆಗಳವರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟರಾಜು, ಮಹಿಳಾ ಘಟಕದ ಗೀತಾ, ಶೋಭಾ ಹಾಗೂ ಯುವ ಘಟಕದ ಹಲವಾರುಕಾರ್ಯಕರ್ತರು ಭಾಗವಹಿಸಿದ್ದರು.