ಖಾಸಗಿಯವರ ಸಹಭಾಗಿತ್ವದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ, ಗುದ್ದಲಿಪೂಜೆ ನೆರವೇರಿಸಿದ ಶಾಸಕ ಧೀರಜ್ ಮುನಿರಾಜು.
ದೊಡ್ಡಬಳ್ಳಾಪುರ : ಖಾಸಗಿಯವರ ಸಹಭಾಗಿತ್ವದಲ್ಲಿ ದೊಡ್ಡಬಳ್ಳಾಪುರ ನಗರಸಭೆಯಿಂದ ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು, ನಗರದ ಬಸವ ಭವನ ಮತ್ತು ಪ್ರವಾಸಿ ಮಂದಿರ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಪ್ರಯಾಣಿಕರ ತಂಗುದಾಣಕ್ಕೆ ಶಾಸಕ ಧೀರಜ್ ಮುನಿರಾಜು ಗುದ್ದಲಿಪೂಜೆ ನೆರವೇರಿಸಿದರು.
ದೊಡ್ಡಬಳ್ಳಾಪುರ ನಗರದ ಬಹುತೇಕ ಕಡೆ ಬಸ್ ತಂಗುದಾಣಗಳಿಲ್ಲದೆ ಪ್ರಯಾಣಿಕರು ಮಳೆ.ಬಿಸಿಲಿನಲ್ಲೇ ಬಸ್ಸಿಗಾಗಿ ಕಾಯುತ್ತಿದ್ದರು, ಈ ಬಗ್ಗೆ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಲು ದೊಡ್ಡಬಳ್ಳಾಪುರ ನಗರಸಭೆಯಲ್ಲಿ ತಿರ್ಮಾನ ಮಾಡಲಾಗಿತ್ತು.
ಪ್ರಮುಖವಾಗಿ ಇಂದು ಬಸವ ಭವನ ಮುಂಭಾಗ ಮತ್ತು ಪ್ರವಾಸಿ ಮಂದಿರ ಮುಂಭಾಗದ ಬಸ್ ತಂಗುದಾಣ ಕಾಮಾಗಾರಿಗೆ ಶಾಸಕ ಧೀರಜ್ ಮುನಿರಾಜು ಗುದ್ದಲಿಪೂಜೆ ನೆರವೇರಿಸಿದರು, ಸುಮಾರು 8 ಲಕ್ಷ ವೆಚ್ಚದಲ್ಲಿ ಎರಡು ತಂಗುದಾಣ ನಿರ್ಮಾಣವಾಗಲಿದ್ದು, ಅಕ್ಕಮಹಾದೇವಿ ಬಳಗ ಮತ್ತು ಪುಟಾಣಿ ಕುಟುಂಬಸ್ಥರು ತಂಗುದಾಣ ನಿರ್ಮಾಣಕ್ಕೆ ಕೊಡುಗೆಯನ್ನ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಸುಧಾಲಕ್ಷ್ಮಿನಾರಾಯಣ್, ಉಪಾಧ್ಯಕ್ಷರಾದ ಫರ್ಹಾನ್ ತಾಜ್, ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್, ಪದ್ಮನಾಭ್, ಸುಮಿತ್ರ ಆನಂದ್, ಬಿಜೆಪಿ ಮುಖಂಡರಾದ ಪುಷ್ಪಶಿವಶಂಕರ್ ಭಾಗಿಯಾಗಿದ್ದರು.