ದೊಡ್ಡಬಳ್ಳಾಪುರ ವಕೀಲರ ಸಂಘಕ್ಕೆ ನೂತನ ಪದಾಧಿಕಾರಿಗಳಾಗಿ ಆಯ್ಕೆ.
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಕೀಲರ ಸಂಘಕ್ಕೆ ಚುನಾವಣೆ ನಡೆದು ಫಲಿತಾಂಶ ಬಂದ ನಂತರ ಕೆಲವು ಗೊಂದಲಗಳಿಂದಾಗಿ ಹೈ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಫಲಿತಾಂಶ ವನ್ನು ತಡೆಹಿಡಿಯಲಾಗಿತ್ತು. ಈಗ ರಾಜ್ಯ ಹೈ ಕೋರ್ಟ್ ಆದೇಶದಂತೆ ನೂತನ ಪದಾಧಿಕಾರಿಗಳ ಹೆಸರನ್ನು ಚುನಾವನಾಧಿಕಾರಿ ಎಸ್. ಎನ್. ಮುರುಳಿಕೃಷ್ಣ ಅಧಿಕೃತವಾಗಿ ಘೋಷಣೆ ಮಾಡಿ ಪ್ರಮಾಣಪತ್ರಗಳನ್ನು ವಿತರಣೆ ಮಾಡಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ರುವ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಸಹಕಾರ ಸಂಘಗಳ ಸಹಾಯಕ ನೊಂದಣಧಿಕಾರಿ ಹಾಗೂ ವಕೀಲರ ಸಂಘದ ಆಡಳಿತಧಿಕಾರಿ ಶೀಲಾ ರವರು ಮತದಾರರ ಪಟ್ಟಿಯಲ್ಲಿ ನ ಗೊಂದಲದ ಬಗ್ಗೆ ಕೆಲವರಿಂದ ಹೈ ಕೊರ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಹೈ ಕೋರ್ಟ್ ಆದೇಶದಂತೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷರಾಗಿ ಎಂ. ರವಿ, ಉಪಾಧ್ಯಕ್ಷ ಎಂ ಆರ್. ಸುರೇಶ, ಪ್ರದಾನ ಕಾರ್ಯದರ್ಶಿ ಎ. ಕೃಷ್ಣ ಮೂರ್ತಿ, ಜಂಟಿ ಕಾರ್ಯದರ್ಶಿ ವಿಜಯ್ ಕುಮಾರ್, ಖಜಾಂಚಿ ಮುನಿರಾಜು,
ನಿರ್ದೇಶಕರಾಗಿ ಸಯ್ಯದ್ ನಜಿಮುಲ್ಲಾ, ಬಿ. ಪ್ರವೀಣ್ ಕುಮಾರ್ ಗುಪ್ತ,ಮಹ್ಮದ್ ಮಮತಾಜ್, ಎನ್. ಲೀಲಾವತಿ, ಎ. ಎಸ್. ಚಂದೇಶ ಕುಮಾರ್, ಎನ್. ಅನಿತಾ, ಆರ್. ಪ್ರಭಾಕರ್, ಟಿ. ಜೆ. ಶಿವಕುಮಾರ್, ಟಿ. ಉಮೇಶ್, ಎಂ. ಮೋಹನ್ ಕುಮಾರ್ ಆಯ್ಕೆಯಾಗಿದ್ದಾರೆ.