ಕನ್ನಡಪರ ಹೋರಾಟಗಾರ, ಮಾಜಿ ನಗರಸಭಾ ಸದಸ್ಯ ಜಿ. ಸತ್ಯನಾರಾಯಣ ರವರ ಅಭಿನಂದನಾ ಸಮಾರಂಭ
ಸತ್ಯನಾರಾಯಣ ಒಬ್ಬ ಸ್ವಾಭಿಮಾನಿ ಕನ್ನಡಪರ ಹೋರಾಟಗಾರ… ಅದ್ದೇ ಮಂಜುನಾಥ್
ದೊಡ್ಡಬಳ್ಳಾಪುರ,… ನಾನು ಕಂಡ ಕೆಲವೇ ಜನ ಪ್ರಾಮಾಣಿಕ ಹೋರಾಟಗಾರರಲ್ಲಿ ಸತ್ಯನಾರಾಯಣ ಕೂಡಾ ಒಬ್ಬರು. ಸತ್ಯರವರಲ್ಲಿ 50ವರ್ಷಗಳಾದರು ಭಾಷೆಯ ತುಡಿತ ಕಡಿಮೆಯಾಗಿಲ್ಲ. ತನ್ನ ಸುದೀರ್ಘ ಹೋರಾಟದ ಜೀವನದಲ್ಲಿ ನೇರ ನಿಷ್ಟುರವಾಗಿ ನಡೆದುಕೊಂಡ ಸ್ವಾಭಿಮಾನಿ ಹೋರಾಟಗಾರ ಅವರು. ಎಂದು ಜನಪರ ಚಿಂತಕ, ಪತ್ರಕರ್ತ ಮಂಜುನಾಥ್ ಅದ್ದೇ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಜನಪರ ಕಾರ್ಯಕ್ಕೆ ಆವೇಶ ಸತ್ಯ ಬಳಗ ಆಯೋಜಿಸಿದ್ದ ಕನ್ನಡ ಜನಪರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅದ್ದೇ ಮಂಜು ಸುಮಾರು ವರ್ಷಗಳ ಕಾಲ ದಿಂದ ಸತ್ಯರವರನ್ನು ಹತ್ತಿರದಿಂದ ನೋಡಿದ್ದೇನೆ ಭಾಷೆ ಇನ್ನಿತರ ಹೋರಾಟಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ದೊಡ್ಡಬಳ್ಳಾಪುರದ ಹೋರಾಟಗಳಲ್ಲಿ ಸತ್ಯನಾರಾಯಣ ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ. ಒಬ್ಬ ಹೋರಾಟಗಾರನೆಂದರೆ ಸಮಾಜ ಒಂದು ಚೌಕಟ್ಟು ಹಾಕಿ ನೋಡುತ್ತದೆ. ಬಹುಷಃ ಸತ್ಯರವರು ಆ ಚೌಕಟ್ಟನ್ನು ಮೀರಿ ಬೆಳೆದವರು. ಭುವನೇಶ್ವರಿ ಕನ್ನಡ ಸಂಘ ಸ್ಥಾಪನೆ, ಗೋಕಾಕ ವರದಿ ಹೋರಾಟ, ಕನ್ನಡ ಜಾಗೃತ ಪರಿಷತ್ತು, ಕನ್ನಡ ಭವನ, ಕನ್ನಡ ಪಕ್ಷ ಇವುಗಳ್ಳೆಲ್ಲವುಗಳ ಬೆಳವಣಿಗೆಗಳಲ್ಲಿ ಸತ್ಯರವರ ಪಾತ್ರ ಅಪಾರ. ಇವರ ಸುದೀರ್ಘ 50ವರ್ಷಗಳ ಸೇವೆಯನ್ನು ಗುರ್ತಿಸಿ ಸನ್ಮಾನ ಮಾಡುತ್ತಿರುವುದು ಸಂತಸ ವಾಗಿದೆ. ಎಂದ ಮಂಜು ದೊಡ್ಡಬಳ್ಳಾಪುರ ನನ್ನನ್ನು ಗುರ್ತಿಸಿ ಬೆಳೆಸಿದೆ. ಹೀಗಾಗಿ ಪ್ರತಿವರ್ಷ ಹೋರಾಟಗಾರರು, ಮಹಿಳೆಯರು, ಹಾಗೂ ಪ್ರತಿಭಾವಂತ ಯುವಕರನ್ನು ಗುರ್ತಿಸಿ ಅವರನ್ನು ಸತ್ಕಾರ ಮಾಡುವ ಗುರಿ ನನ್ನದು. ಇದಕ್ಕೆ ಜಾಗೃತ ಪರಿಷತ್ತು ಹಾಗೂ ಊರಿನ ಎಲ್ಲಾ ಹೋರಾಟಗಾರರ ಸಹಕಾರವನ್ನು ಬಯಸುತ್ತೇನೆ. ಎಂದು ಮಂಜುನಾಥ್ ಹೇಳಿದರು.
ತ. ನ. ಪ್ರಭುದೇವ್ ಮಾತನಾಡಿ ಸತ್ಯ ಹಾಗೂ ತನ್ನ ಸುದೀರ್ಘ 50ವರ್ಷಗಳ ಹೋರಾಟದ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದೇವೆ. ವಾಟಾಳ್ ನಾಗರಾಜ್, ಹಾಗೂ ಡಾ, ವೆಂಕಟರೆಡ್ಡಿ ರವರ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರದಲ್ಲಿ ಕನ್ನಡಪರ, ಜನಪರ, ರೈತ ಪರ ದಲಿತ ಪರ, ಹೋರಾಟಗಳನ್ನು ಮಾಡಿದ್ದೇವೆ. ಸತ್ಯ ರವರ ಇನ್ನೊಂದು ಹೆಸರೇ ಆವೇಶ. ಸತ್ಯರವರಲ್ಲಿದ್ದಂತ ಬದ್ಧತೆ, ಆಕ್ರೋಶ, ಆವೇಶಗಳನ್ನು ಗಮನಿಸಿ ಡಾ, ಚಿದಾನಂದ್ ಮೂರ್ತಿ ರವರು ಆವೇಶ ಸತ್ಯ ಎಂದು ಆಗ ಕರೆದದ್ದು ಈಗಲೂ ಅದು ಪ್ರಚಲಿತದಲ್ಲಿದೆ. ಬರೀ ಹೋರಾಟಗಾಲಷ್ಟೇ ಅಲ್ಲದೆ ಸತ್ಯ ಒಬ್ಬ ನಗರ ಸಭಾ ಸದಸ್ಯನಾಗಿ ತನ್ನ ವಾರ್ಡಿಗೆ ಹಾಗೂ ಊರಿಗೆ ಮಾಡಿದ ಜನಪರ ಕೆಲಸ ಅನನ್ಯವಾದುದು. ನನ್ನ ಹಾಗೂ ಸತ್ಯ ನಡುವೆ ನಡುವೆ ಹಲವಾರು ಸಂದರ್ಭಗಳಲ್ಲಿ ಬಿನ್ನಾಭಿಪ್ರಾಯಗಳು ಮೂಡಿವೆ. ಅದು ಯಾವತ್ತೂ ಕೂಡಾ ನಮ್ಮ ವಿಶ್ವಾಸಕ್ಕೆ ಅಡ್ಡಿ ಬಂದಿಲ್ಲ. ಒಬ್ಬ ನೇರ ನಿಷ್ಟುರ ವಾದಿ ಸತ್ಯನಾರಾಯಣ ತನ್ನ ಸುದೀರ್ಘ 50ವರ್ಷಗಳ ಹೋರಾಟದ ಬದುಕನ್ನು ಸವೆಸಿರುವುದು ಸುಲುಭದ ಸಂಗತಿಯಲ್ಲ. ಎಂದ ಪ್ರಭುದೇವ್ ತಮ್ಮ ಹಾಗೂ ಸತ್ಯರವರ ಸುದೀರ್ಘ ಹೋರಾಟದ ಸಂದರ್ಭಗಳನ್ನು ಸ್ಮರಿಸಿಕೊಂಡರು.
ಕನ್ನಡ ಜನಪರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸತ್ಯನಾರಾಯಣ, ನಾನು ಒಬ್ಬ ಸಾಮಾನ್ಯ. ನನ್ನ ಈ ಹೋರಾಟಗಳನ್ನು ಮಾಡಲು ಸ್ಫೂರ್ತಿ ಕೊಟ್ಟದ್ದು ದೊಡ್ಡಬಳ್ಳಾಪುರ ಜನತೆ ಹಾಗೂ ಡಾ, ವೆಂಕಟರೆಡ್ಡಿ, ವಾಟಾಳ್ ನಾಗರಾಜ್. ಯಾವತ್ತೂ ಕೂಡಾ ನನ್ನ ಹೋರಾಟದ ಹಾದಿಯಲ್ಲಿ ನಿಷ್ಠೆಯನ್ನು ನನ್ನತನವನ್ನು ಉಳಿಸಿಕೊಂಡಿದ್ದೇನೆ. ಇಂದು ನನಗೆ ನೀಡಿದ ಗೌರವ ನನ್ನ ಜೀವಮಾನ ಸಾಧನೆಗೆ ಸಂದ ಗೌರವ ಎಂದು ಬಾವಿಸುತ್ತೇನೆ. ಈ ಸನ್ಮಾನ ನನ್ನೊಬ್ಬನಿಗೆ ಸಲ್ಲ ತಕ್ಕ ದ್ದಲ್ಲ. ನನ್ನ ಜೊತೆ ನಿರಂತರವಾಗಿ ಹೋರಾಡಿದ ನೂರಾರು ಹೋರಾಟಗಾರರಿಗೆ ಅರ್ಪಿಸುತ್ತೇನೆ. ಇಂತಹ ಸಂದರ್ಭವನ್ನು ಜೀವನ ಪರ್ಯಂತ ಮರೆಯುವಂತಿಲ್ಲ. ನನ್ನ ಅಹರ್ನಿಷಿ ಹೋರಾಟಕ್ಕೆ ಸಾಥ್ ನೀಡಿದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದು ಸತ್ಯನಾರಾಯಣ ಹೇಳಿದರು.
ಕನ್ನಡ ಜಾಗೃತ ಪರಿಷತ್ತಿನ ಅಧ್ಯಕ್ಷ, ಪತ್ರಕರ್ತ ವೆಂಕಟೇಶ್, ಮೇಜರ್ ಮಹಾಬಲೇಶ್ವರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.