ಶಿಕ್ಷಕರ ನ್ನು ನಡು ನೀರಿನಲ್ಲಿ ಕೈ ಬಿಟ್ಟ ಪುಟ್ಟಣ್ಣ…. A. P. ರಂಗನಾಥ್.

ದೊಡ್ಡಬಳ್ಳಾಪುರ:ಪ್ರತಿ ಬಾರಿ ಶಿಕ್ಷಕರ ನ್ನು ಮರುಳು ಗೊಳಿಸಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಗೆದ್ದು ವಿಧಾನಪರಿಷತ್ ಗೆ ಆಯ್ಕೆಯಾಗುತ್ತಿದ್ದ ಪುಟ್ಟಣ್ಣ, ಕಳೆದ ಬಾರಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಕಾರಣರಾಗಿದ್ದಾರೆ. ಈಗ ಮತ್ತೆ ಅದೇ ಸ್ಥಾನಕ್ಕೆ ಸ್ಪರ್ದಿಸಲು ಸಿದ್ದರಾಗಿದ್ದಾರೆ. ಅವರಿಗೆ ಶಿಕ್ಷಕರ ಮತ ಕೇಳಲು ಯಾವುದೇ ನೈತಿಕತೆ ಇಲ್ಲಾ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆ. ಡಿ. ಎಸ್ ಸಂಭವನೀಯ ಅಭ್ಯರ್ಥಿ A. P. ರಂಗನಾಥ್ ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ರಂಗನಾಥ್ ಮಾತನಾಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮೊದಲು ದಳದಿಂದ ಎರಡು ಬಾರಿ ಗೆದ್ದು ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು. ಕಳೆದ ಬಾರಿ ನಡೆದ ಪರಿಷತ್ ಚುನಾವಣೆ ಯಲ್ಲಿ ಜೆ. ಡಿ. ಎಸ್. ಬಿಟ್ಟು ಅಧಿಕಾರದಲ್ಲಿದ್ದ ಬಿ. ಜೆ. ಪಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಆಯ್ಕೆಯಾದ ಒಂದು ವರ್ಷದೊಳಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಬಿ ಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರದಿಂದ ಸ್ಪರ್ದಿಸಿ ಸೋತರು. ಅವರು ಮದ್ಯದಲ್ಲಿ ವಿಧಾನ ಪರಿಷತ್ತಿನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಕ್ಕೇ ಈಗ ಉಪ ಚುನಾವಣೆ ನಡೆಯುತ್ತಿದೆ. ಈಗ ಪುನಃ ಅದೇ ಸ್ಥಾನಕ್ಕೆ ಸ್ಪರ್ದಿಸುತ್ತಾರೆ ಎಂಬ ತಯಾರಿ ನಡೆಸುತ್ತಿದ್ದಾರೆ.
ಮೂರೂ ಬಾರಿ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ತನ್ನ ಅಧಿಕಾರವಧಿಯಲ್ಲಿ ಶಿಕ್ಷಕ ರ ಸಮಸ್ಯೆಗಳ ಬಗ್ಗೆ ಒಂದು ದಿನವೂ ಸದನದಲ್ಲಿ ಚಕಾರ ಎತ್ತಲಿಲ್ಲ. ಬರೀ ಅಧಿಕಾರಕ್ಕೋಸ್ಕರ ಪಕ್ಷಗಳನ್ನು ಬದಲಿಸಿದ್ದೆ ಇವರ ಸಾಧನೆ. ಕೊಟ್ಟ ಕುದುರೆಯನ್ನು ಏ ರದವ ವೀರನೂ ಅಲ್ಲಾ, ಶೂರನು ಅಲ್ಲಾ ಎಂಬ ಗಾದೆ ಮಾತು ಪುಟ್ಟಣ್ಣನವರಿಗೆ ಸೂಕ್ತವಾಗಿದೆ ಎಂದ ರಂಗನಾಥ್. ಕಳೆದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಾನು ದಳದಿಂದ ಸ್ಪರ್ದಿಸಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ. ನಾನು ಈಗಾಗಲೇ ವಕೀಲರ ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕಾಗಿ ಅಹರ್ನಿಷಿ ದುಡಿಯುತ್ತಿದ್ದೇನೆ. ನನ್ನ ಪಕ್ಷ ಸೇವೆಯನ್ನು ಮೆಚ್ಚಿ ಪಕ್ಷದ ವರಿಷ್ಟರಾದ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರು ಪ್ರಸ್ತುತ ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಮತ್ತೆ ಸ್ಪರ್ದಿಸಲು ನನಗೆ ಅನುವು ಮಾಡಿಕೊಟ್ಟಿದ್ದಾರೆ. ಈಗಾಗಲೇ ನಾನು ಕ್ಷೇತ್ರದ ಸಾಕಷ್ಟು ಶಿಕ್ಷಕರನ್ನು ಸಂಪರ್ಕಿಸಿದ್ದೇನೆ. ಕ್ಷೇತ್ರದ ಶಿಕ್ಷಕರು ನನಗೆ ಸ್ಪಂದಿಸುತ್ತಿದ್ದಾರೆ. ಪುಟ್ಟಣ್ಣ ಮಾಡಿದ ದ್ರೋಹದ ಬಗ್ಗೆ ಕ್ಷೇತ್ರದ ಶಿಕ್ಷಕರಲ್ಲಿ ಸಾಕಷ್ಟು ಆಕ್ರೋಶವಿದೆ. ಈ ಎಲ್ಲಾ ಕಾರಣಗಳಿಂದಗಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ದಾರರು ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ರಂಗನಾಥ್ ಹೇಳಿದರು.
T. A. P . M. C. S ಮಾಜಿ ಅಧ್ಯಕ್ಷ ಅಂಜನ್ ಗೌಡ, A. P. M. C ನಿರ್ದೇಶಕ ವಕೀಲ ಜಿಂಕೆಬಚ್ಚಳ್ಳಿ ಲೋಕೇಶ್, ನಗರ ಸಭಾ ಸದಸ್ಯ ವಡ್ಡರಹಳ್ಳಿ ರವಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.