ದೊಡ್ಡಬಳ್ಳಾಪುರ: ತಾಲ್ಲೋಕಿನ ಹೊನ್ನಾವರ ಪಂಚಾಯ್ತಿಯ ಹೊನ್ನಾದೇವಿಪುರದ ನೂತನ ರಸ್ತೆ ಕಳಪೆ ಕಾಮಗಾರಿ ಎಂದು ಸ್ಥಳೀಯ ಬಿ ಜೆ ಪಿ ಮುಖಂಡರ ಆರೋಪ ಸಂಪೂರ್ಣ ನಿರಾದಾರ.ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಈ ಆರೋಪ ಮಾಡಿದ್ದಾರೆಂದು ಬಿಡಿ ಸಿ ಸಿ ಬ್ಯಾಂಕ್ ನಿರ್ದೆಶಕ ,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾದ ಜಿ ಚುಂಚೇಗೌಡ ಹೇಳಿದ್ದಾರೆ.
ಹೊನ್ನಾದೇವಿಪುರದ ರಸ್ತೆ ವೀಕ್ಷಿಸಲು ಪತ್ರಕರ್ತರ ನ್ನು ಆಹ್ವಾನಿಸಿ ಮಾತನಾಡಿದ ಚುಂಚೇಗೌಡರು ಈ ರಸ್ತೆ ಕಾಮಗಾರಿ ಇನ್ನೊ ಸಂಪೂರ್ಣವಾಗಿಲ್ಲ.ರಸ್ತೆ ಬದಿಯ ಮಣ್ಣನ್ನು ಸರಿಸಲಿಕ್ಕೆ ಬಳಸಿದ ಜೆ ಸಿ ಬಿ ಯಂತ್ರದಿಂದಾಗಿ ರಸ್ತೆಯ ಕೆಲವು ಕಡೆ ನೂತನ ಡಾಂಬರ್ ಕಿತ್ತು ಹೋಗಿರುವುದು ವಾಸ್ತವ.ಜೊತೆಗೆ ಡಾಂಬರೀಕರಣ ಇನ್ನೂ ಆಗಬೇಕಿದೆ ಕೆಲವು ಕಡೆ ಕಿತ್ತು ಹೋದ ಡಾಂಬರ್ ಗುಂಡಿಗಳನ್ನು ಗುತ್ತಿಗೆದಾರರು ಸರಿ ಪಡಿಸಿದ್ದಾರೆ‌.ಇದನ್ನೇ ದೊಡ್ಡದಾಗಿ ಬಿಂಬಿಸಿ ಶಾಸಕರನ್ನು ಎತ್ತು ಕಟ್ಟಿ ಕಾಮಗಾರಿಯನ್ನು ಕಳಪೆಯೆಂದು ಬಿ ಜೆ ಪಿ ಯವರು ಸುಳ್ಳು ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.ಕಳೆದ ಸಮ್ಮಿಶ್ರ ಸರ್ಕಾರ ದ ಅವದಿಯಲ್ಲಿ ಆಗಿನ ಕಾಂಗ್ರೆಸ್ ಶಾಸಕರಾದ ವೆಂಕಟರಮಣಯ್ಯರವರು ಕ್ಷೇತ್ರದ ಕೆಲವು ರಸ್ತೆ ಅಭಿವೃದ್ಧಿಗೆ ಸುಮಾರು 40 ಕೋಟಿ ರೂಗಳ ಅನುದಾನ ತಂದು ರಸ್ತೆಗಳ ಅಭಿವೃದ್ಧಿಗೆ ಪ್ರಯತ್ನಿಸಿದ್ದರು.ಈ ಅನುದಾನದಲ್ಲಿ ಹೊನ್ನಾದೇವಿಪುರದ ರಸ್ತೆ ಅಭಿವೃದ್ಧಿಯು ಸೇರಿತ್ತು.ಸುಮಾರು ವರ್ಷಗಳ ಕಾಲ ಈ ರಸ್ತೆ ಅಭಿವೃದ್ಧಿಯನ್ನೇ ಕಂಡಿರಲಿಲ್ಲ ಈಗ ರಸ್ತೆ ಕಾಮಗಾರಿ ನೆಡೆದಿದೆ ಅಂತಹದರಲ್ಲಿ ವಿನಾ ಕಾರಣ ರಸ್ತೆ ಕಾಮಗಾರಿ ಕಳಪೆ ಎಂದು ಇದರಲ್ಲಿ ಮಾಜಿ ಶಾಸಕರ ಕೈವಾಡವಿದೆಯೆಂದು ಆರೋಪಿಸುತ್ತಿರುವುದು ಅವರಿಗೆ ಶೋಬೆ ತರುವುದಿಲ್ಲ.ಈ ಬಗ್ಗೆ ಶಾಸಕರೇ ಖುದ್ದಾಗಿ ಅಧಿಕಾರಿಗಳನ್ನು ಕರಿಸಿ ರಸ್ತೆ ಪರಿಶೀಲನೆ ನೆಡೆಸಿ ತಪ್ಪಿದ್ದರೆ ಇದಕ್ಕೆ ಕಾರಣರಾದವರ ಮೇಲೆ ಕ್ರಮಕ್ಕೆ ಒತ್ತಾಹಿಸಲಿ.ಅದು ಬಿಟ್ಟು ಕೇವಲ ರಾಜಕೀಯ ತೆವಲಿಗಾಗಿ ನೆಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಗಳಿಗೆ ತಡೆ ಒಡ್ಡುವುದು ಅದೆಷ್ಟರಮಟ್ಟಿಗೆ ಸರಿಯೆಂದ ಚುಂಚೇಗೌಡರು ಕಳೆದ ಮೂರು ವರ್ಷ ಬಿ ಜೆ ಪಿ ಸರ್ಕಾರ ವೇ ಅದಿಕಾರದಲ್ಲಿತ್ತು ಶಾಸಕರು ಬೇಡಿಕೆ ಇಟ್ಟ ಅನುದಾನವನ್ನು ತಾಲೂಕಿನ ಬಿಜೆಪಿ ಮುಖಂಡ ರೇ ತಪ್ಪಿಸಿದ್ದರು.ಆದರೆ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಿಗೆ ಕೈ ಹಾಕಿರುವಾಗ ಅದಕ್ಕೆ ಸಹಕರಿಸುವುದನ್ನು ಬಿಟ್ಟು ಸಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ.ಇದನ್ನು ನಾವು ಸಹಿಸುವುದಿಲ್ಲ.ಇದಕ್ಕೆ ತಕ್ಕ ಉತ್ತರ ಕೊಡುತ್ತೇವೆ.ಈ ರಸ್ತೆ ಕಾಮಗಾರಿ ಪ್ರಾಂಭವಾದ ಮೇಲೆ ಚುನಾವಣೆ ನೀತಿ ಸಂಹಿತೆ ಜೊತೆಗೆ ಮಳೆಯ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು.ಈಗ ರಸ್ತೆ ಕಾಮಗಾರಿ ಸಂಪೂರ್ಣವಾದ ನಂತರ ಜಿಲ್ಲಾ ಉಸ್ತುವಾರಿ ಮಂತ್ರಿ ಯನ್ನು ಕರೆಸಿ ರಸ್ತೆಯನ್ನು ಉದ್ಘಾಟಿಸಲಿದ್ದೇವೆ.ಪ್ರಸ್ತುತ ಆರೋಪ ಮಾಡಿರುವರು ನೇರ ಚರ್ಚೆಗೆ ಬರಲಿ ನಾವು ಕೂಡ ಸಾರ್ವಜನಿಕವಾಗಿ ಬಹಿರಂಗ ಚರ್ಚೆ ಗೆ ಸಿದ್ದರಿದ್ದೇವೆ ಎಂದು ಚುಂಚೇ ಗೌಡರು ಹೇಳಿದರು.