ಮಾದಾಪುರ ಗ್ರಾ ಪಂ ನಲ್ಲಿ ಗ್ರಾಮ ಸಭೆ

ಸಂತೆಮರಹಳ್ಳಿ :- ಸಮೀಪದ ಮಾದಾಪುರ  ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆಯನ್ನು ಆಯೋಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎಂ ರೂಪೇಶ್  ಮಾತನಾಡಿ ಈಗಾಗಲೇ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ವಾರ್ಡ್ ಸಭೆ ಮಾಡಿದ್ದು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಪಲಾನುಭವಿಗಳ ಪಟ್ಟಿ ತಯಾರಾಗಿ ಗ್ರಾಮ ಸಭೆಯಲ್ಲಿ ಫಲನುಭವಿಗಳ ಹೆಸರನ್ನು ಅಧಿಕೃತವಾಗಿ ತಿಳಿಸಲಾಗಿದೆ,  ಮುಂಬರುವ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರತಿಯೊಂದು ಗ್ರಾಮಗಳಿಗೂ ಮನೆ ನೀಡಲಾಗುವುದು ಸಾರ್ವಜನಿಕರು ಇದನ್ನ ಸದ್ಭಾಳಕೆ ಮಾಡಿಕೊಳ್ಳಬೇಕು ಹಾಗೂ  ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬರುವಂತಹ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ( ತಾಲ್ಲೋಕು ಸಹಾಯಕ ನಿರ್ದೇಶಕರು  )ನ್ಯೂಡೆಲ್ ಅಧಿಕಾರಿ ಪ್ರಭುಸ್ವಾಮಿ  , ಉಪಾಧ್ಯಕ್ಷೆ  ತಾಯಮ್ಮ, ಸದಸ್ಯರಾದ ಸುಸನ್ ಕುಮಾರಿ, ಮೋಹನ್ ಕುಮಾರ್ ಎಂ, ಮಹದೇವ್, ಲಿಂಗರಾಜು, ಸಿದ್ದರಾಜಮ್ಮ, ರೇಣುಕಾ, ಶಿವಮ್ಮ, ರಾಚೇಗೌಡ, ಪುಟ್ಟಣ್ಣ, ಸಿದ್ದರಾಜು, ಭುವನೇಶ್ವರಿ, ಶಿವಮ್ಮ, ಸಯ್ಯದ್ ನಜೃಲ್, ಮಂಜುನಾಥ್, ಜ್ಯೋತಿ, ಮಹಾದೇವಮ್ಮ ಪಿ ಡಿ ಓ ಭಾಗ್ಯಲಕ್ಷ್ಮಿ, ಕಾರ್ಯದರ್ಶಿ ರವೀಶ್,  ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರು ಈ ಸಭೆಯಲ್ಲಿ ಹಾಜರಿದ್ದರು.


ವರದಿ ಆರ್ ಉಮೇಶ್