ದೇಮಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಸಭೆ ನಡೆಯಿತು
ಸಂತೆಮರಹಳ್ಳಿ : – ಸಮೀಪದ ದೇಮಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮ ಸಭೆಯನ್ನ ಆಯೋಜನೆ ಮಾಡಲಾಯಿತು. ಈ ವೇಳೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪುನೀತ್ ಮಾತನಾಡಿ ಈಗಾಗಲೇ ಪಂಚಾಯ್ತಿಗೆ ಒಳಪಡುವ ಗ್ರಾಮಗಳಲ್ಲಿ ವಾರ್ಡ್ ಸಭೆ ಹಮ್ಮಿಕೊಂಡಿದ್ದು ಬಸವ ವಸತಿ ಯೋಜನೆಯಡಿಯಲ್ಲಿ 41 ಮನೆಗಳನ್ನು ಆಯ್ಕೆ ಮಾಡಿದ್ದು ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ 9 ಮನೆಗಳನ್ನು ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಿ ಗ್ರಾಮ ಸಭೆಯಲ್ಲಿ ಅನುಮೋದನೆ ಮಾಡಲಾಗಿದೆ ಎಂದು ತಿಳಿಸಿದರು. ನಂತರ ತಾಲ್ಲೋಕು ಸಹಾಯಕ ನಿರ್ದೇಶಕಾರದ ಪ್ರಕಾಶ್ ಮಾತನಾಡಿ , ಈ ಭಾಗದಲ್ಲಿ 840 ಜಾಬ್ ಕಾರ್ಡ್ ಇದ್ದು ಇದನ್ನ ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬೇಕು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಪ್ರಮಾಣದಲ್ಲಿ ರೈತರಿಗೆ ಎಲ್ಲಾ ರೀತಿಯಲ್ಲೂ ಸಾಲ ಸೌಲಭ್ಯ ನೀಡಲಾಗುವುದು ಹಾಗೂ ಎಲ್ಲಾ ಬೆಳೆಗಳಿಗೆ ಸಬ್ಸಿಡಿ ದರದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಮಾಡಲು ತಮ್ಮ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯಲು 5 ಲಕ್ಷ ಸಹಾಯ ಧನ ನೀಡಲಾಗುವುದು ಆರ್ಥಿಕವಾಗಿ ಬೆಳೆಯಲು ಕಾರಣ ಕರ್ತರಾಗಬಹುದು ಎಂದು ತಿಳಿಸಿದರು. ಈ ವೇಳೆಯಲ್ಲಿ ನೋಡಲ್ ಅಧಿಕಾರಿ ಪ್ರಭುಸ್ವಾಮಿ, ಶಾಂತರಾಜು ರೇಷ್ಮೆ ಇಲಾಖೆ, ಪಿ ಡಿ ಓ ನಾಗಯ್ಯ, ಉಪಾಧ್ಯಕ್ಷೆ ರಾಜಮ್ಮ, ಗ್ರಾಮ ಪಂ ಸದಸ್ಯರು ಹಾಗೂ ಕಾರ್ಯದರ್ಶಿ ಸುನಿಲ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಹಾಜರಿದ್ದರು.
ವರದಿ ಆರ್ ಉಮೇಶ್