ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ.

ಚಾಮರಾಜನಗರ:ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯ
ಮಸಣಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕರ ಅಹವಾಲುಗಳ ಸ್ವೀಕಾರ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಎ‌ ಆರ್ ಕೃಷ್ಣಮೂರ್ತಿ ರವರು ಉದ್ಘಾಟಿಸಿ ಮಾತನಾಡಿದರು

ಈ ಸಭೆಯಲ್ಲಿ ಸಾರ್ವಜನಿಕರು ಶಾಸಕರಿಗೆ ಹಲವು ಬೇಡಿಕೆಗಳ ಬಗ್ಗೆ ಹಾಗೂ ತಮ್ಮ ಗ್ರಾಮಗಳಿಗೆ ಆಗಬೇಕಾದ ಹಲವು ಮೂಲಭೂತ ಸೌಲಭ್ಯಗಳ ಬಗ್ಗೆ ಮನವಿ ಮಾಡಿದರು

ಡಿಜಿಟಲ್ ಗ್ರಂಥಾಲಯ ಕಲ್ಪಿಸಿ ಕೊಡುವ ಬಗ್ಗೆ ಮನವಿ ಪತ್ರ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಾಗೂ ಬಸ್ ನಿಲ್ದಾಣ ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ ಮನವಿ ಸಲ್ಲಿಸಿದರು ಕಳ್ಳಿಪುರ ಮಾರಮ್ಮ ದೇವಸ್ಥಾನದ ಮುಂಭಾಗ ತೇರು ನಿಲುಗಡೆಗೆ ರಸ್ತೆ ನಿರ್ಮಾಣ ಮಾಡಲು ಮನವಿ ಸಲ್ಲಿಸಿದರು ಉಪ್ಪಾರ ಸಮುದಾಯ ಭವನದ ನಿರ್ಮಾಣ ಮಾಡಲು ಮನವಿ ಹಾಗೂ ಚಾಟೀಪುರ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಎಸ್ ಸಿ ಜನಾಂಗದವರ ರುದ್ರಭೂಮಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುಂತೆ ಮನವಿ ಮಾಡಿದರು ಮಸಣಾಪುರ ಗ್ರಾಮ ಪಂಚಾಯಿತಿಗೆ ಬರುವ ಎಲ್ಲಾ ಗ್ರಾಮಗಳಿಗೂ ಪ್ರಮುಖ ವಾಗಿ ರಸ್ತೆ ಚರಂಡಿಗಳನ್ನು ಅಭಿವೃದ್ಧಿ ಪಡಿಸಲು ಎಲ್ಲಾ ಗ್ರಾಮಗಳ ಸಾರ್ವಜನಿಕರು ಮಾನ್ಯ ಶಾಸಕರಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು ಈ ಎಲ್ಲಾ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು ಅಧಿಕಾರಿಗಳು ಸಹ ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇವಣ್ಣ. ಉಪಾಧ್ಯಕ್ಷರು ತಹಸಿಲ್ದಾರ್ ಬಸವರಾಜು. ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಪೂರ್ಣಿಮಾ. ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಿಡಿಓ ಮುಖಂಡರಾದ ಯೋಗೇಶ್.ಚಂದ್ರು. ಹಾಗೂ ಗ್ರಾಮಸ್ಥರು ಹಾಜರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ