ಇಲ್ಲೊಂದು ಗ್ರಾಮಪಂಚಾಯಿತಿ ಚೆಲ್ಲಾಟ; ರೈತನಿಗೆ ಪ್ರಾಣ ಸಂಕಟ

ಮಸಣಪುರ ಗ್ರಾಮ ಪಂಚಾಯಿತಿ ಇರುವುದೆ ಸಮಸ್ಯಗೆ ಸ್ಪಂದಿಸಿ‌ ಗ್ರಾಮಗಳ ಅಭಿವೃದ್ಧಿ ಮಾಡುವುದಕ್ಕಾಗಿ. ಆದರೆ ಇಲ್ಲೋಂದು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯತನದಿಂದಲೇ ರೈತನು ಸಮಸ್ಯೆಯ ಸುಳಿಗೆ ಸಿಲುಕಿ ಬದುಕಿನಲ್ಲಿ ಸಂಕಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿರುವ ಘಟನೆ ಚಾಟೀಪುರ ಗ್ರಾಮದಲ್ಲಿ ಕಂಡುಬಂದಿದೆ….

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಮಸಣಾಪುರ ಗ್ರಾಮಪಂಚಾಯಿತಿಯ ಚಾಟೀಪುರ ಗ್ರಾಮದ ರೈತನಿಗೆ ಸಮಸ್ಯೆಯನ್ನು ತಂದೊಡ್ಡಿರುವ ಪಂಚಾಯಿತಿಯಾಗಿದೆ.
ಮಸಣಾಪುರ ಮತ್ತು ಚಾಟೀಪುರ ಗ್ರಾಮಗಳು ಒಂದಕ್ಕೊಂದು ಅಂಟಿಕೊಂಡು ಬೆಳಿದಿದ್ದು ಚಾಟೀಪುರ ಗ್ರಾಮವು ಮಸಣಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರುತ್ತದೆ.

ಚಾಟೀಪುರ ಗ್ರಾಮದ ಪ್ರಜಿಲ್ಲಾಖಾನ್ ಎಂಬ ರೈತನೇ ಮಸಣಾಪುರ ಗ್ರಾಮಪಂಚಾಯಿತಿಯ ನಿರ್ಲಕ್ಷ್ಯದಿಂದ ಸಮಸ್ಯಯ ಸುಳಿಯಲ್ಲಿ ಸಿಲುಕಿ ಸಂಕಟ ಅನುಭವುಸುತ್ತಿರುವ ರೈತನಾಗಿದ್ದಾನೆ.

ಮಸಣಾಪುರ ಮತ್ತು ಚಾಟೀಪುರ ಗ್ರಾಮಗಳ ಚರಂಡಿನೀರು ಹೊರಹೋಗುವುದಕ್ಕೆ ಸರಿಯಾಗದ ಚರಂಡಿ ನಿರ್ಮಿಸದೆ ಹಾಗೂ ಚರಂಡಿಯ ಹೂಳನ್ನು ತೆಗೆಸದೆ ಚರಂಡಿಯು ಮುಚ್ಚಿಹೋಗಿದ್ದು ಈ ಎರಡು ಗ್ರಾಮಗಳ‌ಚರಂಡಿ ನೀರು ಪ್ರಜುಲ್ಲಾಖಾನ್ ಎಂಬ ರೈತನ ಏಳು ಎಕರೆ ಜಮೀನಿಗೆ ತ್ಯಾಜ್ಯ ನೀರು ಸೇರುತ್ತಿರುವ ಪರಿಣಾಮ ಯಾವ ಬೆಳೆಯನ್ನು ಬೆಳೆಯಲಾಗದೆ ಸಂಕಟಕ್ಕೆ ಸಿಲುಕಿದ್ದಾನೆ.

ರೈತ ಪ್ರಜುಲ್ಲಾಖಾನ್ ಏಳು ಎಕರೆ ಜಮೀನನ್ನೆ ನಂಬಿ ಬುದುಕು ನಡೆಸುತ್ತಿದ್ದು ಸುಮಾರು ಮೂರು ವರ್ಷಗಳಿಂದಲೂ ಬೆಳೆಇಲ್ಲದೆ ಹಾಗೂ ಇರುವ ಬೆಳೆಯು ಚರಂಡಿ ನೀರಿನಿಂದ ಹಾಳಾಗಿರುವುದರಿಂದ ಮುಂದೆ ಜೀವನ ಹೇಗಪ್ಪಾ ಎಂದು ತಲೆಮೇಲೆ‌ ಕೈ ಇಟ್ಟು ಕುಳಿತುಕೊಳ್ಳುವ ಸನ್ನಿವೇಶವನ್ನು ಪಂಚಾಯಿತಿ ನಿರ್ಮಿಸಿದೆ.

ಸುಮಾರು ಮೂರು ವರ್ಷಗಳಿಂದ ನಮ್ಮ ಜಮೀನಿಗೆ ಚರಂಡಿ‌ನೀರು ಬರುತ್ತಿದೆ ಇದರಿಂದ ನಮ್ಮಬೆಳೆ ನಾಶವಾಗುತ್ತಿದೆ ಹಾಗಾಗಿ ಚರಂಡಿಯನ್ನು ನಿರ್ಮಿಸಿ ಹಾಗೂ ಚರಂಡಿಯ ಹೂಳು ತೆಗೆಸಿ ಎಂದು ಮನವಿ ಮಾಡಿದರು ಈ ಮಸಣಾಪುರ ಗ್ರಾಮ ಪಂಚಾಯಿತಿಯ ಪಿಡಿಒ ಹಾಗೂ ಪಂಚಾಯಿತಿಗೆ ಸಂಬಂಧಿಸಿದ ಯಾವೊಬ್ಬರು ನಮ್ಮ ಸಮಸ್ಯಗೆ ಸ್ಪಂದಿಸದೆ ನಮಗೆ ಸಂಕಟನೀಡುತ್ತಿದ್ದಾರೆ ಎಂದು ರೈತ ಪ್ರಜುಲ್ಲಾಖಾನ್ ಮತ್ತು ಕೂಸಪ್ಪ ಬೇಸರವ್ಯಕ್ತಪಡಿಸುತ್ತಾರೆ.

ಚರಂಡಿಯು ಸಂಪೂರ್ಣ ಹೂಳು ತುಂಬಿಕೊಂಡು ಮುಚ್ಚಿದೆ ಹಾಗೂ ಚರಂಡಿಯಲ್ಲಿ ಕಸ ಕಡ್ಡಿ ಬಾಟಲ್ ಮುಂತಾದ ತ್ಯಾಜ್ಯ ಪದಾರ್ಥಗಳಿಂದ ಜಮೀನಿಗೆ ತ್ಯಾಜ್ಯ ನೀರು ನುಗ್ಗಿ ಬೆಳೆಯನ್ನು‌ ನಾಶ ಮಾಡಿದೆ ತೆಂಗಿನಮರಗಳು ಹಾಗೂ ಕಬ್ಬಿನ ಗದ್ದೆಗೆ ತ್ಯಾಜ್ಯ ನೀರಿನಿಂದ ಒಣಗಿಹೋಗುತ್ತಿವೆ ಅದರೆ ನಮ್ಮ ಮನವಿಗೆ ಇದುವರೆಗೂ ಗ್ರಾಮಪಂಚಾಯಿತಿ ಸ್ಪಂದಿಸುತ್ತಿಲ್ಲ ಎಂದು ನೋವಿನಿಂದ ರೈತರು ಹೇಳುತ್ತಾರೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು “ರೈತನು ದೇಶದ ಬೆನ್ನೆಲುಬು” ಎಂದು ಕೇವಲ ವೇದಿಕೆಗಳಲ್ಲಿ ಹೇಳಿದರೆ ಸಾಲದು. ಅನ್ನದಾತನ ಸಮಸ್ಯ ಮತ್ತು ಸಂಕಷ್ಟಗಳಿಗೆ ಇನ್ನಾದರು ಸ್ಪಂದಿಸಿ ರೈತನಿಗೆ ನ್ಯಾಯ ಸಲ್ಲಿಸುತ್ತಾರೊ ಕಾದು ನೋಡಬೇಕಿದೆ.

ವರದಿ ಆರ್ ಉಮೇಶ್ ಮಲಾರಪಾಳ್ಯ