ಯಳಂದೂರು: ತಾಲ್ಲೋಕಿನ ವಿವಿಧ ಗ್ರಾಮಗಳಾದ ಶಿವಕಳ್ಳಿ ಟಿ ಹೊಸೂರು ದೇವರಹಳ್ಳಿ ಗ್ರಾಮಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಆರ್ ಕೃಷ್ಣಮೂರ್ತಿರವರು ಗುದ್ದಲಿ ಪೂಜೆ ನೆರವೇರಿಸಿದರು

ಮೂರು ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೆಐಆರ್‌ಡಿಎಲ್ ಇಲಾಖೆಯ ಒಟ್ಟು ಅಂದಾಜು ವೆಚ್ಚ ಒಂದು ಕೋಟಿ 50 ಲಕ್ಷ ವೆಚ್ಚದ ಕಾಮಗಾರಿಯು ಇದಾಗಿದ್ದು ಈ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ಹೇಳಿದರು.

ಈ ಮೂರು ಗ್ರಾಮಗಳ ರಸ್ತೆಯು ಕಳೆದ ಬಾರಿ ಪ್ರವಾಹ ಬಂದು ಹಾಳಾಗಿರುವ ರಸ್ತೆಇದಾಗಿದ್ದು ಈ ಅಭಿವೃದ್ಧಿ ಕಾಮಗಾರಿಯಿಂದಾಗಿ ಈ ರಸ್ತೆಗಳು ಉತ್ತಮ ರಸ್ತೆಯಾಗಲಿವೆ ಹಾಗಾಗಿ ಗ್ರಾಮಸ್ಥರು ರಸ್ತೆ ನಿರ್ಮಿಸುವ ಸಮಯದಲ್ಲಿ ಖುದ್ದಾಗಿ ನಿಂತು ಪರಿಶೀಲಿಸಿ ರಸ್ತೆಯನ್ನು ನಿರ್ಮಿಸಿಕೊಳ್ಳಲು ಸಾರ್ವಜನಿಕರಿಗೆ ಶಾಸಕ ಎ‌ ಆರ್ ಕೃಷ್ಣಮೂರ್ತಿ ರವರು ಸಾರ್ವಜನಿಕರಿಗೆ ಸಲಹೆ ಸೂಚನೆ ನೀಡಿದರು
ಈ ಸಂದರ್ಭದಲ್ಲಿ ಗೌಡಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯ ಉಮೇಶ್, ನಾಗೇಂದ್ರ, ಗೀತಾ.ಪಿ ಡಿ ಒ ರಮೇಶ್ ಇಂಜಿನಿಯರ್ ಚಿಕ್ಕಲಿಂಗಯ್ಯ. ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಂಗನೂರು ಚಂದ್ರು, ಕಾಂಗ್ರೆಸ್ ಮುಖಂಡ ಅಗ್ರಹಾರ ರೇವಣ್ಣ, ಹೊಸೂರು ಚಂದ್ರು. ಮಹೇಶ್, ರಾಜೇಶ್ ಮಹದೇವಸ್ವಾಮಿ ಬಸವಯ್ಯ ನಿಂಗಯ್ಯ ಮುಂತಾದ ಗ್ರಾಮಗಳ ಮುಖಂಡರುಗಳು ಹಾಗೂ ಗ್ರಾಮಸ್ಥರುಗಳು ಹಾಜರಿದ್ದರು. ‌


ವರದಿ ಆರ್ ಉಮೇಶ್ ಮಲಾರಪಾಳ್ಯ