ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸಿಲ್ದಾರ್ ಗೆ ಮನವಿ ಪತ್ರ.
ಯಳಂದೂರು: ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಸವಿತಾ ಸಮಾಜಕ್ಕೆ ಮೀಸಲಾತಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ
ಸವಿತಾ ಸಮಾಜವು ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಹಾಗೂ ಶೋಷಣೆ ಅಸ್ಪ್ರಶ್ಯತೆಗೆ ಹಾಗೂ ತುಳಿತಕ್ಕೊಳಗಾಗಿರುವ ಸವಿತಾ ಸಮಾಜಕ್ಕೆ ಮೀಸಲಾತಿ ಹಾಗೂ ಜಾತಿ ನಿಂದನೆ ಕಾಯ್ದೆ ಜೊತೆಗೆ ಎಂಟು ಬೇಡಿಕೆಗಳನ್ನು ಕೂಡಲೇ ಜಾರಿ ಮಾಡಬೇಕೆಂದು ಆಗ್ರಹಿಸಿ ಈ ಮನವಿ ಪತ್ರವನ್ನು ಕೂಡಲೇ ಮಾನ್ಯ ಮುಖ್ಯಮಂತ್ರಿ ರವರಿಗೆ ಈ ಶಿಫಾರಸ್ಸು ಪತ್ರವನ್ನು ತಲುಪಿಸಬೇಕು ಎಂದು ಸವಿತಾ ಸಮಾಜದ ಅಧ್ಯಕ್ಷ ಶ್ರೀಕಂಠಸ್ವಾಮಿ ರವರು ಹಾಗೂ ಮುಖಂಡರು ಸೇರಿದಂತೆ ತಹಸಿಲ್ದಾರ್ ಜಯಪ್ರಕಾಶ್ ರವರಿಗೆ ಮನವಿ ಪತ್ರ ಸಲ್ಲಿಸಿದರು
ಸವಿತಾ ಸಮಾಜದವರ ಬೇಡಿಕೆಗಳು ಸರ್ಕಾರದ ಜಾತಿ ಕಾಲಂನಲ್ಲಿ ಸವಿತಾ ಸಮಾಜದ ಮೀಸಲಾತಿಯನ್ನು ತೆಗೆದು ಹಾಕಿರುವುದು ಹಾಗೂ ಸವಿತಾ ಸಮುದಾಯದವರಿಗೆ ಜಾತಿ ನಿಂದನೆ ಪದವನ್ನು ಬಳಸುತ್ತಾರೆ ಇಂಥವರಿಗೆ ಕಾನೂನಿನಲ್ಲಿ ಶಿಕ್ಷೆಯಾಗಬೇಕು
ಸವಿತಾ ಸಮಾಜವು ಇತ್ತೀಚಿನ ವರ್ಷಗಳಲ್ಲಿ ಹೆಚ್ ಕಾಂತರಾಜು ಆಯೋಗವು ಕುಲಶಾಸ್ತ್ರೀಯ ಅಧ್ಯಯನ ವರದಿ ನೀಡಿದ್ದು ಸಂವಿಧಾನದ ನಿಯಮದಂತೆ ಮೀಸಲಾತಿ ನೀಡಬೇಕು
ಹಿಂದುಳಿದ ವರ್ಗಗಳ ಆಯೋಗದ ವರದಿ ಇಲ್ಲಿದೆ ನಾಯಿಂದ ಜಾತಿಯನ್ನು ತೆಗೆದು ಹಾಕಿರುವ ಕಾರಣ ಸವಿತಾ ಸಮುದಾಯದ ಕುಲವೃತ್ತಿಗಳಲ್ಲಿ ಒಂದಾದ ವೈದ್ಯ ವೃತ್ತಿಯನ್ನು ಈಗಾಗಲೇ ಕಸಿದು ಕೊಂಡಿದೆ ಕ್ಷೌರಿಕ ವೃತ್ತಿಯನ್ನು ಅನ್ಯಧರ್ಮದವರಿಗೆ ಬಂಡವಾಳ ಶಾಹಿಗಳಿಗೆ ಲೈಸೆನ್ಸ್ ನೀಡಿ ಅನುಮತಿ ನೀಡಿರುವುದರಿಂದ ನಮ್ಮ ಸವಿತಾ ಸಮಾಜದವರಿಗೆ ಕೆಲಸ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ತಪ್ಪಿಸಿ ರಾಜ್ಯದ ನಾಲ್ಕು ಭಾಗಗಳಲ್ಲಿ ಕ್ಷೌರಿಕ ತರಬೇತಿ ನೀಡಬೇಕು ಉಚಿತ ಆರೋಗ್ಯ ತಪಾಸಣಾ ವಿಮೆ ಸೌಲಭ್ಯ ಕಲ್ಪಿಸಬೇಕು ಸವಿತಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಬೆಂಗಳೂರಿನ ಪ್ರಮುಖ ರಸ್ತೆಗೆ ಸವಿತಾ ಮಹರ್ಷಿ ರಸ್ತೆ ಎಂದು ನಾಮಕರಣ ಮಾಡಿ ಸವಿತಾ ಮಹರ್ಷಿ ಪ್ರತಿಮೆ ಸ್ಥಾಪನೆ ಮಾಡಬೇಕು
ರಾಜ್ಯದ ಪ್ರತಿ ಗ್ರಾಮಗಳಲ್ಲಿ ಕ್ಷೌರಿಕ ವೃತ್ತಿಪರರಿಗೆ ಒಂದೊಂದು ಕುಟೀರ ನೀಡಬೇಕು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವತಿಯಿಂದ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಷೌರಿಕ ವೃತ್ತಿಯನ್ನು ಮಾಡಲು ಸವಿತಾ ಸಮಾಜದ ಕ್ಷೌರಿಕ ರನ್ನು ನೇಮಕ ಮಾಡಿಕೊಳ್ಳಬೇಕು ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಧಾರ್ಮಿಕ ನಿಯಮದಂತೆ ನಾದಸ್ವರ ವಾದನ ನುಡಿಸಲು ಸವಿತಾ ಸಮಾಜದ ಬಂಧುಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಮನವಿ ಪತ್ರವನ್ನು ನೀಡಿದರು
ಈ ಮೇಲಿನ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಸವಿತಾ ಸಮಾಜದ ಸ್ವಾಮೀಜಿ ಶ್ರೀ ಶ್ರೀ ಸವಿತಾನಂದನಾಥ ಮಹಾಸ್ವಾಮಿಗಳ ಸಮ್ಮುಖದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸವಿತಾ ಸಮಾಜದ ಉಪಾಧ್ಯಕ್ಷ ಬಸವಣ್ಣ.ರಾಮು.ವೀರಶೆಟ್ಟಿ.ರೇವಣ್ಣ. ಮಹೇಶ್ ವೆಂಕಟೇಶ್ ಹಾಗೂ ಸವಿತಾ ಸಮಾಜದ ಎಲ್ಲಾ ಮುಖಂಡರುಗಳು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ.