ದೊಡ್ಡಬಳ್ಳಾಪುರ:ಹಿರಿಯ ಕನ್ನಡ ಪರ ಹೋರಾಟಗಾರ ಆರ್ ರಮೇಶ್ ನಿಧನ.

ಹಿರಿಯ ಕನ್ನಡಪರ ಹೋರಾಟಗಾರ ಆರ್ ರಮೇಶ್ 67 ವರ್ಷ ನಿಧನ ರಾಗಿದ್ದಾರೆ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ
ರಾಜೀವ್ ಗಾಂಧಿ ಬಡಾವಣೆಯಲ್ಲಿ ವಾಸವಾಗಿದ್ದ ರಮೇಶ್ ರವರು ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು
ಡಾ” ವೆಂಕಟರೆಡ್ಡಿ ರವರ ಅನುಯಾಯಿ ಆಗಿದ್ದ ರಮೇಶ್ ಗೋಕಾಕ್ ಚಳುವಳಿ ಮೂಲಕ ಕನ್ನಡ ಚಳವಳಿಗೆ ಧುಮುಕಿದರು ಭುವನೇಶ್ವರಿ ಕನ್ನಡ ಸಂಘ ಕನ್ನಡ, ಜಾಗೃತ ಪರಿಷತ್ತು, ಕನ್ನಡ ಪಕ್ಷದ ಸಂಘಟನೆಗಳಲ್ಲಿ 80 – 90 ರ ದಶಕದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದರು
ಆರ್ ರಮೇಶ್ ರವರಿಗೆ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಕನ್ನಡ ಕಟ್ಟಾಳು ಪ್ರಶಸ್ತಿ ನೀಡಿ ಗೌರವಿಸಿತ್ತು ರಮೇಶ್ ರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕನ್ನಡ ಪಕ್ಷ ಮತ್ತು ಕನ್ನಡ ಜಾಗೃತ ಪರಿಷತ್ತು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ.