ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಛೇರಿ ಹಾಗೂ ಹಾಸ್ಟೆಲ್ ಗಳಿಗೆ ಡಿ ಡಿ ಭೇಟಿ.
ಯಳಂದೂರು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಛೇರಿ ಹಾಗೂ ಹಾಸ್ಟೆಲ್ ಗಳಿಗೆ ಜಿಲ್ಲಾ ಉಪನಿರ್ದೇಶಕರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು

ವಿದ್ಯಾರ್ಥಿ ನಿಲಯಗಳಿಗೆ ಬೇಟೆ ನೀಡಿ ಅಲ್ಲಿನ ಆರೋಗ್ಯ ಮತ್ತು ಸ್ವಚ್ಚತೆಯನ್ನು ಪರಿಶೀಲನೆ ಮಾಡಿದರು ಅಲ್ಲಿನ ಬೋಧನಾ ಲಯದಲ್ಲಿರುವ ಕಂಪ್ಯೂಟರ್ ಮತ್ತು ಗ್ರಂಥಾಲಯ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ದೊರೆಯುತ್ತಿದೆಯೇ ಎಂಬುದನ್ನು ನಿಲಯ ಪಾಲಕಿಯಿಂದ ಮಾಹಿತಿಯನ್ನು ಪಡೆದುಕೊಂಡರು
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ನಿಲಯ ಪಾಲಕಿ ನೇತ್ರಾವತಿ ಹಾಗೂ ಕಛೇರಿ ಸಿಬ್ಬಂದಿಗಳು ಹಾಜರಿದ್ದರು

ವರದಿ ಆರ್ ಉಮೇಶ್ ಮಲಾರಪಾಳ್ಯ