68ನೇ ಕನ್ನಡ ರಾಜ್ಯೋತ್ಸವ ಆಚರಣೆ…..

ಯಳಂದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆಸಲಾಯಿತು
ಈ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಎ‌ ಆರ್ ಕೃಷ್ಣಮೂರ್ತಿ ರವರು ಉದ್ಘಾಟಿಸಿ ಮಾತನಾಡಿ ಮೈಸೂರ್ ರಾಜ್ಯವು 1956 ರ ನವೆಂಬರ್ 1 ರಂದು ನಿರ್ಮಾಣವಾದ ಸಂಕೇತ ವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ.1950 ರಲ್ಲಿ ಭಾರತವು ಗಣರಾಜ್ಜ್ಯ ವಾದ ನಂತರ ಭಾರತದ ವಿವಿಧ ಪ್ರಾಂತ್ಯಾಗಳು ಹಾಗೂ ಭಾಷೆಗಳ ಆಧಾರದ ಮೇಲೆ ರಾಜ್ಯ ಗಳಾಗಿ ರೂಪಗೊಂಡ ಸಂದರ್ಭದಲ್ಲಿ ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ ಮೈಸೂರ್ ರಾಜ್ಯ ಉದಯವಾಯಿತು 1973 ರ ನವೆಂಬರ್ 1 ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು ಎಂದು ತಿಳಿಸಿದರು. ಕನ್ನಡ ನಾಡು ನುಡಿಗೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ.ಕರ್ನಾಟಕಕ್ಕೆ ಸೇರಿದ ಪ್ರದೇಶಗಳು ಜಿಲ್ಲೆಯ ಯಾವುದೇ ಭಾಗದ ಜನರು ಕನ್ನಡ ಬಿಡದೇ. ನೆರೆವರೆಯ ಅನ್ಯ ಭಾಷೆಗಳಿಗೆ ಪ್ರಭಾವಿತರಾಗದಿರುವುದು ಹೇಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.ನಮ್ಮ ಕನ್ನಡನಾಡು ನೆಲ ಜಲ ಭಾಷೆ ನಾಡು ನುಡಿಗೆ ಹೆಸರಾಗಿದೆ ಎಂದು ತಿಳಿಸಿದರು
ಈ ಸಂರ್ಭದಲ್ಲಿ ಮುಖ್ಯ ಭಾಷಣಕಾರರಾದ ಎಚ್ ಶಿವಣ್ಣ ನಿವೃತ್ತ ಪ್ರೌಢಶಾಲಾ ಅಧ್ಯಾಪಕರು ದೊಡ್ಡಿಂದವಾಡಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಭಾವತಿ.ಲಕ್ಷ್ಮಿ ಮಹೇಶ್.ರಂಗನಾಥ್.ಸುಶೀಲ ತಹಸಿಲ್ದಾರ್ ಜಯಪ್ರಕಾಶ್. ಬಿ ಇ ಓ ಕಾಂತರಾಜು. ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚಂದ್ರಹಾಸ್ ನಾಯಕ್. ಕೃಷಿ ಇಲಾಖೆ ಅಧಿಕಾರಿ ಅಮೃತೇಶ್. ಪ್ರಾಂಶುಪಾಲರಾದ ವಿಜಯ್. ಕೆ ಪಿ ಎಸ್ ಶಾಲಾ ಉಪ ಪ್ರಾಂಶುಪಾಲರಾದ ನಂಜುಂಡಯ್ಯ. ಹಾಗೂ ಕ ಸಾ ಪ‌ ಅಧ್ಯಕ್ಷ ನಾಗೇಂದ್ರ ಇನ್ನಿತರ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಾಲಾ ಕಾಲೇಜು ಮಕ್ಕಳು ಪೋಷಕರು ಹಾಜರಿದ್ದರು.


ವರದಿ ಆರ್ ಉಮೇಶ್ ಮಲಾರಪಾಳ್ಯ