ಯಳಂದೂರು:- ತಾಲ್ಲೋಕಿನ ಸಮಾಜ ಕಲ್ಯಾಣ ಅಧಿಕಾರಿಗಳಾದ ರಾಜೇಶ್ ರವರಿಗೆ ತಾಲ್ಲೋಕಿನ ದೀಕ್ಷಾ ಭೂಮಿ ಯಾತ್ರಾರ್ತಿಗಳು ಸನ್ಮಾನವನ್ನು ಮಾಡಿದರು. ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಹಾರಾಷ್ಟ್ರದ ನಾಗ್ಪುರದಲ್ಲಿ ಇರುವಂತಹ ಡಾ. ಬಿಆರ್ ಅಂಬೇಡ್ಕರ್ ರವರು ಬೌದ್ದ ಧರ್ಮ ಸ್ವೀಕರಿಸಿದ ಸ್ಥಳದಲ್ಲಿ ಲಕ್ಷಾಂತರ ಜನರಿಗೆ ದೀಕ್ಷೆ ಕೊಟ್ಟಂತಹ ಜಾಗಕ್ಕೆ ಯಳಂದೂರು ತಾಲ್ಲೋಕಿನ ಸುಮಾರು 45 ಜನ ಯತ್ರಿಗಳು ಮಹಾರಾಷ್ಟ್ರದ ನಾಗ್ಪುರಕ್ಕೆ 5 ದಿನಗಳ ಪ್ರವಾಸ ಹೋಗಿ ಅಲ್ಲಿ ಯಾವುದೇ ಸಮಸ್ಯೆ ಆಗದೆ ಸುರಕ್ಷಿತವಾಗಿ ತಮ್ಮ ಊರುಗಳಿಗೆ ವಾಪಾಸ್ ಆಗಿದ್ದು ಯಾತ್ರಾರ್ಾರ್ತಿಗಳಿಗೆ ತುಂಬಾ ಸಂತೋಷವಾಯಿತು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವಂದನೆಗಳನ್ನು ತಿಳಿಸಿದರು ಈ ದಮ್ಮ ದೀಕ್ಷೆ ಪ್ರವಾಸಕ್ಕೆ ಹೊರಡುವ ಸಮಯದಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ರಾಜೇಶ್ ರವರು ಯಾತ್ರಾರ್ತಿಗಳಿಗೆ ಶುಭಾ ಕೋರಿದರು ಪ್ರವಾಸದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿ, ತಮ್ಮ ಇಲಾಖೆಯ ಸಿಬ್ಬಂದಿ ಒಬ್ಬರನ್ನು ಯಾತ್ರಾರ್ತಿಗಳ ಜೊತೆ ಕಳುಹಿಸಿ ಯೋಗ ಕ್ಷೇಮ ನೋಡಿಕೊಳ್ಳುವಂತೆ ತಿಳಿಸಿದರು. ಇದನ್ನು ಮನಗಂಡ ಯಾತ್ರಾರ್ತಿಗಳು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸನ್ಮಾನ ಮಾಡಿ ಶುಭಾ ಕೋರಿದರು.
ವರದಿ ಆರ್ ಉಮೇಶ್ ಮಲಾರಪಾಳ್ಯ