1. ದೊಡ್ಡಬಳ್ಳಾಪುರ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ನೇಕಾರರಿಗೆ 10 ಹೆಚ್ ಪಿ ವರೆಗೆ ಉಚಿತ ವಿದ್ಯುತ್ ನೀಡುವ ನೇಕಾರ ಯೋಜನೆ ಜಾರಿ ಮಾಡಿರುವುದು ಸ್ವಾಗತರ್ಹ ಎಂದು ಕರ್ನಾಟಕ ರಾಜ್ಯ ನೇಕಾರ ಮಹಾಮಂಡಲದ ಪ್ರದಾನ ಕಾರ್ಯದರ್ಶಿ ಬಿ. ಜಿ. ಹೇಮಂತರಾಜ್ ಹೇಳಿದ್ದಾರೆ.
    ದೊಡ್ಡಬಳ್ಳಾಪುರ ನೇಕಾರ ಹೋರಾಟ ಸಮಿತಿ ಆಯೋಜಿಸಿದ್ದ ಸುದ್ದಿಗೊಷ್ಟಿಯಲ್ಲಿ ಹೇಮಂತರಾಜ್ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ನವರು ನೇಕಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ನೇಕಾರರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದರು. ಈಗ ಅವರು ಕೊಟ್ಟ ಭರವಸೆ ಈಡೇರಿಸಲು ಆದೇಶ ನೀಡಿರುವುದು, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಸೊರಗಿದ್ದ ನೇಕಾರಿಕೆ ಉದ್ಯಮಕ್ಕೆ ಸ್ವಲ್ಪ ಚೇತರಿಕೆ ಬಂದಂತಾಗಿದೆ.19ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿದ್ದಾಗ 20 H. P ವರೆಗಿನ ವಿದ್ಯುತ್ಗೆ 1.25ರೂಗಳ ರಿಯಾಯ್ತಿ ದರದಲ್ಲಿ ವಿದ್ಯುತ್ ನೀಡಿ ನೇಕಾರಿಕೆಗೆ ಸಹಕಾರ ನೀಡಿದ್ದರು. ಇತ್ತೀಚಿನ ವರ್ಷಗಳಲ್ಲಿ ನೇಕಾರಿಕೆ ಉದ್ಯಮ ಭಾರೀ ಸಂಕಷ್ಟದಲ್ಲಿದ್ದು ನೇಕಾರರಿಗೆ ನೆರವು ನೀಡುವಂತೆ ಕರ್ನಾಟಕ ರಾಜ್ಯ ನೇಕಾರ ಮಹಾಮಂಡಲ ಹಾಗೂ ದೊಡ್ಡಬಳ್ಳಾಪುರ ನೇಕಾರ ಹೋರಾಟ ಸಮಿತಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರಸ್ತುತ ರಾಜ್ಯ ಸರ್ಕಾರ ಸ್ಪಂದಿಸಿದೆ. ಇಷ್ಟೇ ಅಲ್ಲದೆ ಕಳೆದ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನೇಕಾರರಿಗೆ ನೀಡುತ್ತಿದ್ದ 1.25ರೂ ರಿಯಾಯ್ತಿ ದರದ ವಿದ್ಯುತ್ ಆದೇಶವನ್ನು ರದ್ದು ಮಾಡಿ ಯುನಿಟಿಗೆ 4.75ರೂಗಳಆದೇಶವನ್ನು ಹೊರಡಿಸಿತ್ತು. ಈಗ ಉಚಿತ ವಿದ್ಯುತ್ ಯೋಜನೆಯ ಜೊತೆಗೆ ಹಿಂದಿನ ಸರ್ಕಾರದ 4.75ರೂಗಳ ಆದೇಶವನ್ನು ರದ್ದು ಪಡಿಸುವುದಾಗಿ ಸರ್ಕಾರ ಆದೇಶ ನೀಡಿದೆ. ಎಂದ ಹೇಮಂತರಾಜ್ ಈ ಯೋಜನೆಯಿಂದ 80/. ನೇಕಾರರಿಗೆ ಅನುಕೂಲವಾಗಲಿದೆ. ಈ ಹಿಂದೆ ನೇಕಾರರಲ್ಲದವರು ನೇಕಾರಿಕೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಈಗಾಗಲೇ ನೇಕಾರ ಗಣತಿ ನಡೆದಿದ್ದು, ನೇಕಾರರಲ್ಲದವರನ್ನು ಪಟ್ಟಿಯಿಂದ ತೆಗೆಯಲಾಗಿದೆ.10ರಿಂದ 20 ಹೆಚ್ ಪಿ  ಇರುವ ಮಗ್ಗದ ಘಟಕಗಳಿಗೆ ಹಾಲಿ ರಿಯಾಯ್ತಿ ಧರ ಮುಂದುವರೆಯಲಿದೆ. ಇದಕ್ಕೆ ಎಂ. ಎಸ್. ಎಂ. ಈ. ಪ್ರಮಾಣಪತ್ರದ ದಾಖಲಾತಿಗಳೊಂದಿಗೆ ಪರಿಶೀಲನ ವರದಿ ನೀಡಿದೆ. ಪ್ರಮುಖ ಅಂಶವೆಂದರೆ ಸರ್ಕಾರ ಅದೇಶಿಸಿರುವ ಹಲವು ಹೊಸ ಮನದಂಡಗಳನ್ನು ಸರಲೀಕರಣ ಗೊಳಿಸಿ ಈಗಿರುವ ದಾಖಲೆಗಳ ಆಧಾರದ ಮೇಲೆ ನೇಕಾರರಿಗೆ ಉಚಿತ ವಿದ್ಯುತ್ ನೀಡಬೇಕು. ನಮ್ಮ ನೇಕಾರ ಹೋರಾಟ ಸಮಿತಿಯ ಪ್ರಯತ್ನಕ್ಕೆ ಗಣ್ಯರಾದ ಮಾಜಿ ಕೇಂದ್ರ ಮಂತ್ರಿ ವೀರಪ್ಪ ಮೊಯಿಲಿ ರವರು, ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಜವಳಿ ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವ ಹೆಚ್ ಎಂ. ರೇವಣ್ಣ, ದೊಡ್ಡಬಳ್ಳಾಪುರ ಮಾಜಿ ಶಾಸಕರಾದ ಅಪಕಾರನಹಳ್ಳಿ ವೆಂಕಟರಮಣಯ್ಯ ರವರಿಗೆ ಕರ್ನಾಟಕ ನೇಕಾರ ಮಹಾ ಮಂಡಲ ಹಾಗೂ ದೊಡ್ಡಬಳ್ಳಾಪುರ ನೇಕಾರ ಹೋರಾಟ ಸಮಿತಿ ರಾಜ್ಯದ ಸಮಸ್ತ ನೇಕಾರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದು ಹೇಮಂತರಾಜ್ ಹೇಳಿದರು.
    ಪತ್ರಿಕಾಗೋಷ್ಟಿಯಲ್ಲಿ ನೇಕಾರ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲ್, ಎನ್. ಲೋಕೇಶ್, ಉಪಾಧ್ಯಕ್ಷ ಮಂಜುನಾಥ್, ಟಿ.ವಿ‌. ಸೂರ್ಯ ಪ್ರಕಾಶ್, ಸಂಜೀವ್, ಕಾರ್ಯದರ್ಶಿ ಕೃಷ್ಣಮರಾಜ್, ಅನಿಲಕುಮಾರ್, ರಾಘವೇಂದ್ರ, ಖಜಾಂಚಿ ರಂಗಸ್ವಾಮಿ ಹಾಜರಿದ್ದರು.