ಯಳಂದೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವಯಸ್ಸಾದ ರೋಗಿ ಒಬ್ಬರನ್ನು ಪಟ್ಟಣದ ವಾಸಿಯೊಬ್ಬರು ಮಾನವೀಯತೆ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಿಸಿದ್ದು ಈ ವೃದ್ದ ರೋಗಿಯ ಆರೋಗ್ಯ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ.
ಪಟ್ಟಣದ ವಿಳಾಸ ನೀಡಿ ಬಸವರಾಜು ಎಂಬುವರು ಸೆಪ್ಟಂಬರ್ ನಲ್ಲಿ ವೃದ್ದ ರೋಗಿ ಒಬ್ಬನನ್ನು ಸಾರ್ವಜನಿಕ ಆಸ್ಪತ್ರೆಗೆ ಮಾನವೀಯತೆ ದೃಷ್ಟಿಯಿಂದ ದಾಖಲಿಸಿದ್ದಾರೆ. ದಾಖಲಿಸಿದ ವ್ಯಕ್ತಿ ಪೋನ್ ನಂಬರ್ ನೀಡಿ ಹೋಗಿದ್ದಾರೆ. ಈ ನಂಬರ್ ಗೆ ಕರೆ ನೀಡಿದರೆ ಸ್ವಿಚ್ ಆಫ್ ಆಗಿದೆ. ಆದರೂ ವೈದರು ಈ ಈ ರೋಗಿಗೆ ಕಳದೆ ಇಪ್ಪತ್ತು ದಿನಗಳಿಂದ ಚಿಕಿತ್ಸೆಯನ್ನು ವೈದ್ಯರು ನೀಡುತ್ತಾ ಬಂದಿದ್ದಾರೆ ರೋಗಿಯ ಆರೋಗ್ಯ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಈ ರೋಗಿಯು ಯಳಂದೂರು ಪಟ್ಟಣದವರೆಂದು ಹೇಳಲಾಗುತ್ತದೆ ಆದರೆ ಯಾವುದೇ ವಾರಸುದಾರರು ಇವರ ನೆರವಿಗೆ ಬಂದಿಲ್ಲ ಹಾಗಾಗಿ ಆಸ್ಪತ್ರೆ ವೈದ್ಯರು . ಈ ಬಗ್ಗೆ ಅನಾಥಾಶ್ರಮಕ್ಕೂ ಮಾಹಿತಿ ನೀಡಿದೆ. ಪೊಲೀಸ್ ಠಾಣೆಗೂ ದೂರು ದಾಖಲಿಸಲಾಗಿದೆ ದಯಾ ಮಾಡಿ ಈ ವೃದ್ದರ ವಾರಸುದಾರರು ಬಂದು ನೋಡಬೇಕಾಗಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶ್ರೀಧರ್, ಡಾ ನಾಗೇಶ್ ತಿಳಿಸಿದರು.
ವರದಿ ಆರ್ ಉಮೇಶ್ ಮಲಾರಪಾಳ್ಯ