ನಾನು ನಾಯಕ… ರಾಜ್ಯ ಮಟ್ಟದ ನಾಯಕತ್ವ ಶಿಬಿರ 23
ದೊಡ್ಡಬಳ್ಳಾಪುರ:ಕರ್ನಾಟಕ ರಾಜ್ಯ ವ್ಯೆಜ್ಞಾನಿಕ ಸಂಶೋಧನ ಪರಿಷತ್ತು ವತಿಯಿಂದ ಅಕ್ಟೋಬರ್ 14,15ರಂದು ಎರಡು ದಿನಗಳ ಕಾಲ ನಾನು ನಾಯಕ ರಾಜ್ಯಮಟ್ಟದ ನಾಯಕತ್ವ ಶಿಬಿರವನ್ನು ಸ್ಕೌಟ್ ಕ್ಯಾಂಪನಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದರು.
ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ನಟರಾಜ್ ಮಾತನಾಡಿ ಖ್ಯಾತ ವಿಜ್ಞಾನಿ ಹಾಗೂ ಇಸ್ರೋ ದ ಮಾಜಿ ಅಧ್ಯಕ್ಷರಾದ ಡಾ. ಎ. ಎಸ್. ಕಿರಣಕುಮಾರ್ ಹಾಗೂ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ್ ದಾಸ್ ರವರ ಮಾರ್ಗದರ್ಶನದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಿ ಕ್ರಿಯಾಶೀಲವಾಗಿದ್ದು, ಬಹುಸಂಖ್ಯಾತ ಮಂದಿ ಸಂಸ್ಥೆಯ ಸದಸ್ಯತ್ವವನ್ನು ಹೊಂದಿದ್ದಾರೆ. ಪ್ರತಿವರ್ಷ ಸಮ್ಮೇಳನಗಳನ್ನು ಆಯೋಜಿಸಿದ್ದು ಇದರಲ್ಲಿ ಹೆಚ್. ಎನ್. ಪ್ರಶಸ್ತಿಯನ್ನು ನೀಡುತ್ತಿದ್ದು ಹಾಗೂ ಮೇ 1ರಂದು ಕಾಯಕ ರತ್ನ ಪ್ರಶಸ್ತಿಯನ್ನು ನೀಡುತ್ತಿದ್ದು, ಪ್ರತಿ ತಿಂಗಳ ಅಮೃತ ಅಮಾವಾಸ್ಯೆ ಯಂದು ಅಮೃತ ಅಮಾವಾಸ್ಯೆ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ನಡೆಸಲಾಗುತ್ತಿದೆ. ಅಲ್ಲದೆ ಸಂಸ್ಥೆಯು ವಿಜ್ಞಾವನ್ನು ಜನ ಸಾಮಾನ್ಯರಿಗೆ ತಿಳಿಸುವ ಸಲುವಾಗಿ ಆರ್. ರವಿ ಬಿಳಿ ಶಿವಾಲೆ ರವರು ನೀಡಿದ ಹತ್ತು ಎಕರೆ ಜಮೀನಿನಲ್ಲಿ ವಿಜ್ಞಾನ ಗ್ರಾಮ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಇದಕ್ಕೆ ಸರಕಾರವು ಸಹ ಸ್ಪಂದಿಸುತ್ತಿದೆ.
ಈ ನಿಟ್ಟಿನಲ್ಲಿ ಸಂಸ್ಥೆಯ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಮಟ್ಟದ ನಾಯಕತ್ವ ಶಿಬಿರವನ್ನು ಸ್ಕೌಟ್ ಕ್ಯಾಂಪನಲ್ಲಿ ಆಯೋಜಿಸಿದ್ದು ಡಾ. ಕಿರಣಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಾಜ್ಯ ಸಂಘಟನಾ ಕಾರ್ಯದರ್ಶಿ ವಿ. ಟಿ. ಸ್ವಾಮಿ ಆಶಯ ನುಡಿಗಳನ್ನಡಲಿದ್ದಾರೆ. ಸಚಿವ ಜಾರಕಿಹೊಳಿ ರವರು ವಿಜ್ಞಾನ ಗ್ರಾಮದ ನೀಲ ನಕ್ಷೆ ಬಿಡುಗಡೆ ಗೊಳಿಸಳಿದ್ದು, ಶಾಸಕ ಧೀರಜ್ ಮುನಿರಾಜ್, ಜಸ್ಟೀಸ್ ನಾಗಮೋಹನ್ ದಾಸ್, ಆರ್. ರವಿ ಬಿಳೆ ಶಿವಾಲೆ, ಕೆ. ಜಿ. ರಾವ್, ಡಾ. ರಾಮಚಂದ್ರ ವಿಶೇಷ ಆಹ್ವಾನಿತಾರಾಗಿದ್ದು ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಲಿದ್ದಾರೆಂದ ನಟರಾಜ್,
ಎರಡು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ರಾಜ್ಯದ ಹಲವಾರು ಜಿಲ್ಲಾ, ತಾಲೂಕುಗಳ ಸುಮಾರು 500ಜನ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 7ಗೋಷ್ಠಿಗಳನ್ನು ಆಯೋಜಿಸಲಾಗಿದ್ದು ಸಂಸ್ಥೆ ಬೆಳವಣಿಗೆ, ಸಂಘಟನೆ, ವ್ಯಕ್ತಿತ್ವ, ನಿರ್ವಹಣೆ, ಕುರಿತು ಹಲವಾರು ಮಾಹಿತಿಗಳ ಬಗ್ಗೆ ಚರ್ಚೆ ನಡೆಯಲಿದೆ. ಇದರಲ್ಲಿ ಡಾ. ಅಂಜಿನಪ್ಪ, ಆರ್. ಎ. ಚೇತನ್ ರಾಮ್ ಡಾ. ತಿಮ್ಮೆಶ್, ಯಾಮ್ದುರು ಸಿದ್ದರಾಜು, ವೈ. ಎನ್. ಶಂಕರೇ ಗೌಡ, ಡಾ. ಸೋಮಶೇಖರ್, ಡಾ. ಪಲ್ಲವಿ ಮಣಿ, ನಿವೃತ್ತ ಪೊಲೀಸ್ ಅಧಿಕಾರಿ ಎಸ್. ಕೆ. ಉಮೇಶ್, ಚಿಕ್ಕ ಹನುಮಂತೇಗೌಡ, ಕೆ. ಪಿ. ಲಕ್ಷ್ಮೀನಾರಾಯಣ, ಇರ್ಷಾದ್ ಅಹ್ಮದ್, ಬಾಬುರಾವ್, ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು, ಇಂದು ಮತಿ ಸಾಲಿ ಮಠ, ಕುಲಪತಿ ಮಲ್ಲಿಕಾಗಂಟಿ,ಮಾಜಿ ಸಿ. ಎಂ. ವೀರಪ್ಪ ಮೊಯಿಲಿ, ಮಾಜಿ ಸಚಿವ ಪಿ. ಜಿ. ಆರ್ ಸಿಂದ್ಯಾ, ಚಂದ್ರ ಶೇಖರ್ ಗುರೂಜಿ ಡಾ. ಅನುಪಮಾ, ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆಂದು ನಟರಾಜ್ ಹೇಳಿದರು.
ಚಿಕ್ಕ ಹನುಮಂತೇಗೌಡ, ಕೆ. ಪಿ. ಲಕ್ಷ್ಮೀನಾರಾಯಣ, ರಾಮಚಂದ್ರ, ಪಿ. ವಿ. ಸಿದ್ದಲಿಂಗಮ್ಮ, ಹಾಗೂ ಎಸ್. ಆರ್. ಮಂಜುನಾಥ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.