ಮಹಿಷಾ ದಸರಾದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಸಂಸದ ಪ್ರತಾಪ್ ಸಿಂಹನಿಗೆ ಇತಿಹಾಸ ಮತ್ತು ಸಂವಿಧಾನದ ಪಾಠ ಕಲಿಸುವ ಸಲುವಾಗಿ ಎಸ್ ಸಿ ಎಸ್ ಟಿ ಒಬಿಸಿಗಳ ಇತಿಹಾಸಕಾರರು ಸಂಶೋಧಕರು ನಾಡಿನ ಸಮಸ್ತ ಜನರು ದಿನಾಂಕ 13/10/2023 ರಂದು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುವಂತೆ ದ.ಸಂ.ಸ ಮನವಿ ಮಾಡಿದೆ.

ಕರ್ನಾಟಕದ ಅನೇಕ ಊರುಗಳಲ್ಲಿ ರಾವಣನ ದೇವಸ್ಥಾನಗಳಿವೆ ಹಿರಣ್ಯಕಶಿಪುವಿನ ದೇವಸ್ಥಾನಗಳಿವೆ ಅಲ್ಲಲ್ಲಿ ಪೂಜೆ ಪುನಸ್ಕಾರ ಹಬ್ಬ ಆಚರಣೆ ಉತ್ಸವಾದಿಗಳು ನಡೆಯುತ್ತಾ ಬಂದಿದೆ ಇಂತಹ ಬಹುತ್ವದ ದೇಶ ನಮ್ಮದು ಇದೆ ನಮ್ಮ ಭಾರತದ ಹಿರಿಮೆ ಮೈಸೂರು ಮೂಲತಃ ಮಹಿಷಾಸುರನ ನಾಡು ಓಣಂ ಬಲಿ ಚಕ್ರವರ್ತಿ ಹಬ್ಬದಂತೆ ದಸರಾ ಸಂದರ್ಭದಲ್ಲಿ ಪಿತೃ ಪಕ್ಷ ಮಹಿಷಾನ ದಿನಾಚರಣೆಗಳು ಈ ನೆಲದ ಮೂಲನಿವಾಸಿಗಳು ಆಚರಿಸಿಕೊಂಡು ಬರುತ್ತಿದ್ದಾರೆ ಇಂತಹ ಐತಿಹಾಸಿಕ ಪರಂಪರೆಯ ಭಾಗವಾಗಿರುವ ಈ ಮಹಿಷಾ ದಸರಾವನ್ನು ಪ್ರಜ್ಞಾವಂತರು ಅನೇಕ ವರ್ಷಗಳಿಂದ ಚಾಮುಂಡಿ ಬೆಟ್ಟದಲ್ಲಿ ಮಹಿಷಾನ ಪ್ರತಿಮೆಗೆ ಗೌರವ ಸಲ್ಲಿಸುವ ಮೂಲಕ ಮಹಿಷಾಸ ಹಬ್ಬವನ್ನು ಆಚರಿಸಲಾಗುತ್ತದೆ,ಆದರೆ ವೈದಿಕ ಚಾಮುಂಡಿಯನ್ನು ಓಟ್ ಬ್ಯಾಂಕ್ ಮಾಡಲು ಹೊರಟಿರುವ ಸಂಸದ ಪ್ರತಾಪ್ ಸಿಂಹ ಸುಪಾರಿ ಪಡೆದವನಂತೆ ಈ ನೆಲದ ಮೂಲನಿವಾಸಿಗಳು ಭಾವನೆಗಳನ್ನು ಘಾಸಿಗೊಳಿಸಲು ಹೊರಟಿದ್ದಾರೆ
ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಸಂವಿಧಾನದಿಂದಲೇ ಎಲ್ಲಾ ಆಚರಣೆಗಳಿಗೆ ಅವಕಾಶ ಇರುವಾಗ ಮಹಿಷಾ ದಸರಾ ಬೇಡ ಎನ್ನುವುದೇಕೆ?
ಈ ಪ್ರತಾಪ್ ಸಿಂಹನಿಗೆ ನಮ್ಮನ್ನು ಪ್ರಶ್ನಿಸಿಲು ಇವನಿಗೆ ಏನು ಯೋಗ್ಯತೆ ಇದೆ ಪುರಾಣಗಳಲ್ಲಿ ಅಡಗಿರುವ ನೈಜ ಇತಿಹಾಸವನ್ನು ಮರೆಮಾಡಿ ಓಟಿಗಾಗಿ ದ್ವೇಷ ಹರಡಲು ಮಹಿಷಾ ದಸರಾದ ಬಗ್ಗೆ ಅವಹೇಳನ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದ.ಸಂ.ಸ.ಆಗ್ರಹಿಸುತ್ತದೆ.

ಇಂತಹ ಮನುವಾದಿ ಮನಸ್ಸುಳ್ಳ ಓಬಿಸಿ ಸಮುದಾಯದಲ್ಲಿ ಬೆಳೆದು ಸಂವಿಧಾನದ ಅಡಿಯಲ್ಲಿ ಸಂಸದರಾಗಿರುವ ಇಂತಹ ನೂರಾರು ಮನಸ್ಸುಗಳಿಗೆ ಈ ಮಹಿಷಾ ದಸರಾದ ಮೂಲಕ ಎಸ್ ಸಿ ಎಸ್ ಟಿ ಮೈನಾರಿಟಿ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕಾದ ಅನಿವಾರ್ಯವಿದೆ ಬನ್ನಿ ನಾಡಿನಾದ್ಯಂತ ನಮ್ಮ ಮೂಲ ಸಂಸ್ಕೃತಿಯನ್ನು ಆಚರಣೆ ಮಾಡಲು ನಮ್ಮ ಭಾರತದ ಸಂವಿಧಾನದಲ್ಲಿ ಅವಕಾಶ ಕೊಟ್ಟಿರುವಾಗ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೆ ತಂದೇ ಮಹಿಷಾ ದಸರಾವನ್ನು ಶಾಂತಿಯುತವಾಗಿ ಆಚರಿಸಬೇಕಾಗಿರುವುದರಿಂದ‌ ತಾವೆಲ್ಲರೂ ಬನ್ನಿ ಇದನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ
ನಾವು ಬುದ್ದ ಪ್ರಿಯರು ಶಾಂತಿ ಪ್ರಿಯರು ಯುದ್ಧ ಮಾಡುವಂತಹ ಜನರು ನಾವಲ್ಲಾ ನಾವು ಅಂಬೇಡ್ಕರ್ ಅನುಯಾಯಿಗಳು ಬುದ್ದ.ಬಸವ. ಫುಲೆ .ಸಾಹು.ನಾಲ್ವಡಿ.ಕನಕ.ಪೆರಿಯರ್.ಕುವೆಂಪು ಮುಂತಾದ ಮೂಲ ನಿವಾಸಿ ದ್ರಾವಿಡ ಪರಂಪರೆಯ ಸಾಮಾಜಿಕ ಕ್ರಾಂತಿಯ ಪ್ರಿಯರು ಬುದ್ಧರು ಎಂದಿಗೂ ಯುದ್ದವನ್ನು ಬೊಧಿಸಿಲ್ಲ ಪ್ರಚೋದಿಸಿಲ್ಲ ಹಾಗೆಯೇ ಬನ್ನಿ ಬುದ್ಧರು ಮಾರ್ಗದಲ್ಲಿ ಸಾಗೋಣ ಮಹಿಷಾ ದಸರಾವನ್ನು ಶಾಂತಿಯುತವಾಗಿ ಆಚರಿಸೋಣ.

ವರದಿ ಆರ್ ಉಮೇಶ್ ಮಲಾರಪಾಳ್ಯ