ಹಸಿರೇ ಉಸಿರು ಪರಿಸರ ಸಂರಕ್ಷಣೆ ನಮ್ಮೆಲ್ಲರದ್ದು: ಶಾಸಕ ಎ.ಆರ್ ಕೃಷ್ಣಮೂರ್ತಿ.

ಯಳಂದೂರು ತಾಲ್ಲೂಕಿನ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ ಇವರು ಬಿಳಿಗಿರಿರಂಗನಬೆಟ್ಟದ ಯರಕನಗದ್ದೆಪೋಡಿನಲ್ಲಿ ಹಮ್ಮಿಕೊಂಡಿದ್ದ 69ನೇ ವನ್ಯಜೀವಿಗಳ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರಾದ ಎ‌ ಆರ್ ಕೃಷ್ಣಮೂರ್ತಿ ಮಾತಾನಾಡಿದರು.

ಕಾಡಿನ ಹಸಿರೇ ನಾಡಿನ ಉಸಿರಾಗಿದೆ. ಪ್ರಕೃತಿಯ ವಿವಿಧ ಸ್ತರಗಳಿಗೆ ಒಂದಕ್ಕೊಂದು ಸಂಬಂಧವಿದೆ. ಈ ಪ್ರಕೃತಿಕವಾದ ಸ್ತರಗಳು ಒಂದನ್ನೊಂದು ಬಿಟ್ಟಿರುವುದಿಲ್ಲ . ನಮ್ಮಗೆಲ್ಲ ಆಹಾರಬೇಕು .ಆಹಾರವನ್ನು ಬೆಳೆಯಬೇಕು, ಬೇಳೆಗೆ ನೀರುಬೇಕು, ನೀರುಬೇಕಾದರೆ ಮಳೆಯಾಗಬೇಕು ,ಮಳೆಯಾಗಬೇಕಾದರೆ ಕಾಡು ಸಮೃದ್ಧವಾಗಿ ಬೆಳೆದು ಉಳಿಯಬೇಕು ಎಂದರು.

ಇತ್ತೀಚಿಗೆ ಕಾಡು ನಶಿಸಿಹೋಗುತ್ತಿದೆ ಕಾಡು ಉಳಿಯಬೇಕಾದರೆ ನಾವೆಲ್ಲರು ಕಾಡು ನಮ್ಮದು ಕಾಡಲ್ಲಿರುವ ಪ್ರಾಣಿಗಳು ನಮ್ಮದೇಯಾಗಿವೆ ಎಂದು ಭಾವಿಸಿಕೊಳ್ಳಬೇಕು ಆಗಮಾತ್ರ ಕಾಡನ್ನು ನಾವು ಪ್ರೀತಿಸುತ್ತೇವೆ ಮತ್ತು ಉಳಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಕುಸುಮಾಲೆ ಕಲಾ ತಂಡದವರು ಕಾಡಿಗೆ ಸಂಬಂಧಿಸದ ಹಲವು‌ ಗೀತೆಗಳನ್ನು ಹಾಡಿದ ಗೊರುಕನ ನೃತ್ಯ ನಟಿಸಿ ಕಾಡಿನ ಮಹತ್ವವನ್ನು ಕಾಡಿನ ಜನರ ಸಂಸ್ಕ್ರತಿ, ಜೀವನದ ಬದುಕನ್ನು ಗೀತೆಯೊದಿಗೆ ವಿವರಿಸಿದರು.

ಯರಕನಗದ್ದೆ ಜನಾಂಗದ ಮುಖಂಡ ಮಾದೇಗೌಡ ಮಾತಾನಾಡಿ ಇಲ್ಲಿಗೆ ಬಿಳಿಗಿರಿರಂಗನಾಥಸ್ವಾಮಿ ಬರುವುದಕ್ಕೂ ಮೊದಲು ನಾವು ಈ ಕಾಡಿನಲ್ಲಿ ವಾಸವಾಗಿರುವುದು ಆದರೆ ದೇವಾಲಯಕ್ಕೆ ಪೂಜೆಮಾಡುವವರಿಗೆ ಕಂದಾಯ ಭೂಮಿ ನೀಡಿದ್ದಾರೆ. ಇತ್ತೀಚೆಗೆ ಬೆಟ್ಟಕ್ಕೆ ಬಂದಿರುವವರಿಗೆ ಕಂದಾಯ ಭೂಮಿಯನ್ನು ನೀಡಿ ರೆಸಾರ್ಟ್ಸ್ ಕಟ್ಟೋದಕ್ಕೆ, ಮನೆಕಟ್ಟೋದಕ್ಕೆ ಅವಕಾಶ ಮಾಡಿಕೊಡುವ ಸರ್ಕಾರಗಳು ನಮಗೆ ಮತ್ತು‌ ನಮ್ಮ ಜನಾಂಗಕ್ಕೆ ಅರಣ್ಯ ಇಲಾಖೆ ಭೂಮಿಯನ್ನು ಕೊಟ್ಟಿದ್ದಾರೆ ನಮಗೆ ಕಂದಾಯ ಭೂಮಿಯನ್ನಾಗಿ ಮಾರ್ಪಡಿಸಿಕೊಡಿ ಎಂದು ಶಾಸಕರಿಗೆ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ದೀಪ ಜೆ ಕಂಟ್ರಾಕ್ಟರ್ , ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶ್,ವಲಯ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್.ರಮೇಶ್ ಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾದ್ಯಕ್ಷೆ ಕಮಲಮ್ಮ, ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಮುಖಂಡರಾದ ಯೋಗೇಶ್.ಚೇತನ್. ಚಂದ್ರು.ವೆಂಕಟೇಶ್ . ಹರೀಶ್ ರಾಜಣ್ಣ.ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಯರಕನಗದ್ದೆಪೋಡಿನ ಜನರು ಹಾಜರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ