ಗೌಡಹಳ್ಳಿ ಗ್ರಾಮ ಪಂಚಾಯಿತಿಯಿಂದ ಶ್ರಮದಾನ ಸ್ವಚ್ಛತಾ ಸೇವಾ ತ್ಯಾಜ್ಯ ಮುಕ್ತ ಕಾರ್ಯಕ್ರಮ
ಯಳಂದೂರು: ತಾಲ್ಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮಕೆರೆ ಡ್ಯಾಂ ಕಾಲುವೆ ಅರಣ್ಯದ ಚೆಕ್ ಪೂಸ್ಟ್ ಬಳಿ ಸ್ವಚ್ಚತ ಸೇವಾ ಶ್ರಮದಾನವನ್ನು ನೆರವೇರಿಸಲಾಯಿತು.
ಗೌಡಹಳ್ಳಿ ಗ್ರಾಮಪಂಚಾಯಿತಿಯ ವತಿಯಿಂದ ಸ್ವಚ್ಚತ ಸೇವಾ ಶ್ರಮಧಾನ ತ್ಯಾಜ್ಯ ಮುಕ್ತ ಕಾರ್ಯಕ್ರಮವನ್ನು ಇಂದು ಗೌಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಂಥಾಲಯದಲ್ಲಿ ಸ್ವಚ್ಚತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಗೌಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ ಜಯಶಂಕರ್ ಮಾತನಾಡಿ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಪರಿಸರವನ್ನು ನಾವೆಲ್ಲರು ಸಂರಕ್ಷಿಸಬೇಕಿದೆ. ಪ್ಲಾಸ್ಟಿಕ್ ನಂತಹ ಹಲವು ತ್ಯಾಜ್ಯ ವಸ್ತುಗಳು ಪರಿಸರವನ್ನು ಹಾಳು ಮಾಡುತ್ತಿದೆ. ಇದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ ನೀರಿನ ಮಾಲಿನ್ಯವಾಗುತ್ತಿದೆ , ಪ್ರಾಣಿಗಳು ತಿಂದರೆ ಪ್ರಾಣಕ್ಕೆ ಕುತ್ತುತರುತ್ತದೆ ಹಾಗಾಗಿ ಪರಿಸರ ಸ್ನೇಹಿ ವಸ್ತುಗಳನ್ನು ನಾವೆಲ್ಲರು ಬಳಸುವ ಮೂಲಕ ಪರಿಸರವನ್ನು ಉಳಿಸಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಮೇಶ್ ಮಾತಾನಾಡಿ ಸ್ವಚ್ಚತೆಯಿಂದ ಮಾತ್ರ ನಾವು ಆರೋಗ್ಯವನ್ನು ಕಾಡಿಕೊಳ್ಳಬಹುದು ಎಂದರು. ಆರೋಗ್ಯವಂತ ಸಮಾಜ ನಿರ್ಮಿಸಲು ಸ್ವಚ್ಚತೆಯಿಂದಿರಬೇಕು ಈ ಮೂಲಕ ಹಲವು ರೋಗಗಳನ್ನು ತಡೆಯಬಹುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎಂ ಚಿನ್ನಸ್ವಾಮಿ ಮಾತನಾಡಿ ನಾವು ವಾಸಿಸುವ ಪ್ರದೇಶದ ಸ್ವಚ್ಚತೆ ಬಹಳ ಮುಖ್ಯವಾಗುತ್ತದೆ ಸ್ವಚ್ಚತೆಯೇ ಬದುಕಿನ ಜೀವಾಳವಾಗಿದೆ ಈ ಮೂಖೇನ ಸ್ವಚ್ಚಪರಿಸರವನ್ನು ನಿರ್ಮಿಸಬಹುದು ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತನುಜಾ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರಾದ ಚಂದ್ರು ಶೇಖರ್.ಸುಂದರ್.ಉಮೇಶ್.ಮಲ್ಲು.ಪುಷ್ಪ. ಹಾಗೂ ಗ್ರಾಮ ಪಂಚಾಯಿತಿಯ ವಿವಿದ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬಿಲ್ ಕಲೆಕ್ಟರ್ ಶಂಕರ್ ನಾಯಕ್.ಸುಜಾತ.ಮಲ್ಲಯ್ಯ. ರಾಜು.ನಾಗೇಶ್ ಹಾಗೂ ಗ್ರಾಮದ ಯುವಕರು ಮುಖಂಡರು ಈ ಸ್ವಚ್ಚತೆ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ ಆರ್ ಉಮೇಶ್