ಸಾಕು ಬೆಕ್ಕನ್ನು ರಕ್ಷಿಸಿಲು ಹೋಗಿ ವಿದ್ಯುತ್ ತಂತಿ ಸ್ಪರ್ಷಿಸಿ ಯುವಕ ಸಾವು
ದೊಡ್ಡಬಳ್ಳಾಪುರ: ಮರದ ಕೊಂಬೆಗೆ ಸಿಲುಕಿ ಅಪಾಯದಲ್ಲಿದ್ದ ಸಾಕು ಬೆಕ್ಕನ್ನು ರಕ್ಷಿಸಲು ಹೋದ ಯುವಕ ಮರದ ಸಮೀಪದಲಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಸಾವಿಗೀಡಾದ ಘಟನೆ ನಗರದ ಹಾಲಿನ ಡೈರಿ ಮುಂಬಾಗದ ಗ್ಯಾರೇಜ್ ಬಳಿ ಸಂಭವಿಸಿದೆ.
ಸಾವಿಗೀಡಾದ ದುರ್ದೈವಿ ಯುವಕ 20 ವರ್ಷದ ರೋಷನ್ ಎಂದು ತಿಳಿದು ಬಂದಿದೆ.ಈತ ಶಾಂತಿ ನಗರದ ನಿವಾಸಿಯಾಗಿದ್ದು ಹಾಲಿನ ಡೈರಿ ಮುಂಬಾಗದ ಗ್ಯಾರೇಜ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ .
ಈತ ಗ್ಯಾರೇಜ್ ಕೆಲಸದ ವೇಳೆ ತನ್ನ ಸಾಕುಬೆಕ್ಕು ಗ್ಯಾರೇಜ್ ನ ಹಿಂದಿದ್ದ ಮರದ ಮೇಲಿನ ಕೊಂಬೆಗೆ ಸಿಲುಕಿ ಅಪಾಯದಲ್ಲಿದ್ದಾಗ ರೋಷನ್ ಬೆಕ್ಕನ್ನು ರಕ್ಷಿಸಲು ಮರವೇರಿದ್ದಾನೆ, ಈ ವೇಳೆ ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮರದ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ ಆಶ್ಚರ್ಯವೆಂದರೆ ಮರದ ಕೊಂಬೆಗೆ ಸಿಲುಕಿ ಅಪಾಯದಲ್ಲಿದ್ದ ಆತನ ಸಾಕು ಬೆಕ್ಕು ಪ್ರಾಣಾಪಾಯದಿಂದ ಪಾರಾಗಿದೆ.
ಘಟನೆ ನೆಡೆದ ಸ್ಥಳಕ್ಕೆ ನಗರ ಠಾಣಾ ಪೋಲಿಸರು ಆಗಮಿಸಿ ಸ್ಥಳ ಪರಿಶೀಲಿಸಿ ಮರದಲ್ಲಿ ನೇತಾಡುತ್ತಿದ್ದ ಸಾವಿಗೀಡಾದ ಯುವಕನ ಶವವನ್ನು ಸಾರ್ವಜನಿಕರ ಸಹಾಯದಿಂದ ಕೆಳಗಿಳಿಸಿದ್ದಾರೆ.ಈ ಬಗ್ಗೆ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.