ಮಕ್ಕಳ ಹಕ್ಕು ಮತ್ತು ಪೋಕ್ಸೋ ಕಾಯಿದೆ ಅರಿವು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯ- ಮುಖ್ಯ ಶಿಕ್ಷಕ ಉಮಾಶಂಕರ್.
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಚಾಮರಾಜನಗರ, ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯ, ಪಿ, ಎಂ, ಎಸ್, ಆರ್, ಸಂಸ್ಥೆ ಕೊಳ್ಳೇಗಾಲ ಇವರ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕಗಳು, ಮಕ್ಕಳ ರಕ್ಷಣೆ, ಬಾಲ್ಯವಿವಾಹ ನಿಷೇಧ ಕಾಯಿದೆ ಹಾಗೂ ಪೋಕ್ಸೋ ಕಾಯಿದೆ ಕುರಿತು ಅರಿವು ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಸಸಿಗೆ ನೀರು ಹಾಕುವುದರ ಮೂಲಕ ಮುಖ್ಯೋಪಾಧ್ಯಾಯರಾದ ಉಮಾಶಂಕರ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು. ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಅರಿವು ಅಗತ್ಯವಾಗಿದೆ.
ಪ್ರತಿಯೊಬ್ಬ ಮಕ್ಕಳಿಗೂ ಬದುಕುವ ಹಕ್ಕು, ಭಾಗವಹಿಸುವ ಹಕ್ಕು, ವಿಕಾಶವೊಂದುವ ಹಕ್ಕು, ರಕ್ಷಣೆಯ ಹಕ್ಕುಗಳನ್ನು ಹೊಂದಿರುತ್ತಾರೆ. ದಿನೇ ದಿನೇ ಸಮಾಜದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳ ಹೆಚ್ಚಾದ ಹಿನ್ನಲೆ ಪೋಕ್ಸೋ ಕಾಯಿದೆಯನ್ನು ಕೇಂದ್ರಸರಕಾರ 2012 ರಲ್ಲಿ ಜಾರಿಗೆ ತಂದಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಿಗೆ ಕಠಿಣವಾದ ಕಾನೂನು ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಪೋಕ್ಸೋ ಕಾಯಿದೆಯ ಅರಿವು ಸಮಾಜಕ್ಕೆ ಅಗತ್ಯವಾಗಿದೆ.
ಪ್ರತಿಯೊಬ್ಬ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡ ಬೇಕು ಇದು ಮಕ್ಕಳ ಹಕ್ಕು ಕೂಡ ಹೌದು. ಶಾಲೆಯಿಂದ ಹೊರಗಳಿದ ಮಕ್ಕಳನ್ನು ಶಾಲೆ ಸೇರಿಸಿ ಅವರಿಗೆ ಶಿಕ್ಷಣವನ್ನು ನೀಡಬೇಕು ಯಾವ ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗಬಾರದು.
ಯಳಂದೂರು ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ದತಿ ಇನ್ನೂ ಜೀವಂತವಾಗಿದೆ. ಸಂಪೂರ್ಣವಾಗಿ ನಿಲ್ಲಿಸುವಂತಹ ಕಾರ್ಯವನ್ನು ಮಾಡಬೇಕು. ಬಾಲ್ಯ ವಿವಾಹ ಅನ್ನೋದು ಕಾನೂನು ಬಾಹಿರವಾಗಿದೆ. ದಯವಿಟ್ಟು ಬಾಲ್ಯ ವಿವಾಹ ನಡೆಯುತ್ತಿದ್ದರೆ ತಕ್ಷಣ ಪೋಲೀಸರಿಗೆ ಅಥವಾ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ.ಎಂದು ತಿಳಿಸಿದರು.
ಪಿ, ಎಂ, ಎಸ್, ಆರ್, ಸಂಸ್ಥೆಯ ಕಾರ್ಯದರ್ಶಿ ಹ್ಯಾರೀಸ್ ಹರ್ನಾಡ್ ಮಾತನಾಡಿ ನಮ್ಮ ಸಂಸ್ಥೆಯು ಸದಾ ಮಕ್ಕಳ ಮಕ್ಕಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯದಲ್ಲಿ ತೊಡಗಿದೆ.ಎಂದರು
ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿ ಸಿದ್ದ ಶೆಟ್ಟಿ ಮಾತನಾಡಿ. ಸರಕಾರಗಳು ಮಕ್ಕಳ ಹಕ್ಕು ಮತ್ತು ಪೋಕ್ಸೋ ಕಾಯಿದೆಯ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಹೆಚ್ಚು ಅರಿವು ಕಾರ್ಯಕ್ರಮ ಮಾಡುವುದರಿಂದ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ದತಿಯಂತಹ ಅನಿಷ್ಟ ಪದ್ಧತಿಯನ್ನು ತಡೆಗಟ್ಟಬಹುದು. 1098 ಮಕ್ಕಳ ಸಹಾಯ ವಾಣಿಯ ಬಗ್ಗೆ ಅರಿವು ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕೋಮಲ, ಎಸ್ ಡಿ, ಎಂ, ಸಿ ಅಧಕ್ಷ ಸೋಮಣ್ಣ, ಆರೋಗ್ಯ ಇಲಾಖೆಯ ನಾಗರಾಜು, ಗ್ರಾಪಂ ಲೆಕ್ಕಪರಿಶೋಧಕರಾದ ಮಹದೇವಸ್ವಾಮಿ, ಮಕ್ಕಳ ಸಹಾಯವಾಣಿ ಅಧಿಕಾರಿ ರವಿ, ಮಹೇಶ್, ಎಸ್ ಡಿ ಎಂ ಸಿ ಸದಸ್ಯರಾದ ಪರಶಿವಮೂರ್ತಿ, ಸಂಯೋಜಕರಾದ ಸಿದ್ದರಾಜು, ಹಾಗೂ ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಜರಿದ್ದರು
ವರದಿ ಆರ್ ಉಮೇಶ್