ಮಲಾರಪಾಳ್ಯ ಗ್ರಾಮದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.
ಯಳಂದೂರು ತಾಲ್ಲೂಕಿನ ಮಲಾರಪಾಳ್ಯ ಗ್ರಾಮದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಊರಿನ ಸಮುದಾಯ ಭವನದಲ್ಲಿ ಮೂರು ದಿನಗಳ ಕಾಲ ಪೂಜೆ ಪುನಸ್ಕಾರ ನೈವೇದ್ಯ ಮಾಡಿ ಊರಿನ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಂಗೋಲೆ ಬಿಡಿಸಿ ಮಹಿಳೆಯರು ಹಣ್ಣು ಕಾಯಿ ಪೂಜೆ ನೆರವೇರಿಸಿದರು ವಿಜೃಂಭಣೆಯಿಂದ ಮಕ್ಕಳು ಯುವಕರು ಕುಣಿದು ಕುಪ್ಪಳಿಸಿ ಗೌರಿ ಗಣೇಶನನ್ನು ಪಕ್ಕದ ಕಬಿನಿಯ ಬಲದಂಡೆ ಕಾಲುವೆಯಲ್ಲಿ ಗಣಪನನ್ನು ನೀರಿನಲ್ಲಿ ಮುಳುಗಿಸಿದರು ನಂತರ ಲಘು ಉಪಹಾರ ಸೇವಿಸಿ ಮನೆಗಳಿಗೆ ಸುರಕ್ಷಿತವಾಗಿ ಹಿಂತಿರುಗಿದರು ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು ಮುಖಂಡರುಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಚಿನ್ನಸ್ವಾಮಿ ನಿಂಗರಾಜು.ಮದನ್.ಮಹೇಶ್ ಸಂಜಯ್.ಪ್ರಜ್ವಲ್.ರೇಚ.ಸಿದ್ದು ಪೀಟರ್.ಲಕ್ಕಿ.ರಮೇಶ್.ನಂಜಯ್ಯ ಸಚಿನ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದ್ದರು.
ವರದಿ ಆರ್ ಉಮೇಶ್.