ಜಿಲ್ಲಾ ಬಿ. ಜೆ. ಪಿ ವತಿಯಿಂದ… ನನ್ನ ಮಣ್ಣು ನನ್ನ ದೇಶ.. ಅಭಿಯಾನ

ದೊಡ್ಡಬಳ್ಳಾಪುರ.. ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿ ಜೆ ಪಿ ವತಿಯಿಂದ ಘಾಟಿ ಸುಬ್ರಮಣ್ಯದ ಕಲ್ಯಾಣ ಮಂದಿರದಲ್ಲಿ… ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬಿ ಜೆ ಪಿ ವಿಭಾಗೀಯ ಸಂಘಟನಾ ಪ್ರಭಾರಿಗಳಾದ ಕೇಶವಪ್ರಸಾದ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ನನ್ನ ಮಣ್ಣು ನನ್ನ ದೇಶ ಅಭಿಯಾನ ದೇಶದ ಎಲ್ಲಾ ಜನರನ್ನು ಒಗ್ಗೂಡಿಸುವ ಭಾವನಾತ್ಮಕ ಕಾರ್ಯವಾಗಿದ್ದು ರಾಷ್ಟ್ರದ ಪ್ರತಿ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಸೇರಿದಂತೆ ಪ್ರತಿಯೊಬ್ಬ ಪ್ರಜೆಯನ್ನು ತಲುಪುವ ಮಹೋನ್ನತ ಕಾರ್ಯಕ್ರಮ. ಇದರಲ್ಲಿ ದೇಶದ ಪ್ರತಿ ಮನೆಯಿಂದ ಮಣ್ಣನ್ನು ಸಂಗ್ರಹಿಸಿ ಅಕ್ಟೋಬರ್ 26ರಂದು ದೆಹಲಿಯ ಹುತಾತ್ಮರ ಗೌರವಾರ್ಥ ನಿರ್ಮಿಸಲಿರುವ ಅಮೃತ ಉದ್ಯಾನಕ್ಕೆ ಸಮರ್ಪಿಸಲಾಗುವುದು ಎಂದು ಕೇಶವಪ್ರಸಾದ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎ ವಿ. ನಾರಾಯಣಸ್ವಾಮಿ ಮಾತನಾಡಿ ಮೇರಾ ಮಿಟ್ಟಿ ಮೇರಾದೇಶ್ ಅಭಿಯಾನ ದೇಶದ ಎಲ್ಲಾ ಪ್ರಜೆಗಳು ಧರ್ಮತೀತ, ಜಾತ್ಯತೀತ, ಪಕ್ಷತೀತವಾಗಿ ಒಗ್ಗೂಡುವ ಕಾರ್ಯಕ್ರಮ. ಇದಕ್ಕೆ ಯಾವುದೇ ಮಿತಿ ಇಲ್ಲ ದ ಸಾರ್ವತ್ರಿಕಾ ಕಾರ್ಯಕ್ರಮವಾಗಿದೆ. ಈಗಾಗಲೇ ಪ್ರಧಾನಿ ಮೋದಿ ರವರು ದೇಶದ ಪ್ರತಿ ಪಂಚಾಯ್ತಿಗಳಿಗೆ ಮಣ್ಣನ್ನು ಸಂಗ್ರಹಿಸುವ ಆದೇಶವನ್ನು ಕೊಟ್ಟಿದ್ದಾರೆ. ಇದೊಂದು ಸರ್ಕಾರಿ ಕಾರ್ಯಮವಾಗಿದೆ. ಇದಕ್ಕೆ ಬಿಜೆಪಿ ಪಕ್ಷವು ಕೈಜೋಡಿಸಿದ್ದು ಜಿಲ್ಲೆಯ ಬೂತ್ ಮಟ್ಟದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಸಂಚಾಲಕರನ್ನು ನೇಮಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಬರುವ ದಿನಗಳಲ್ಲಿ ಮಣ್ಣು ಸಂಗ್ರಹಣಾ ಕಳಸಗಳನ್ನು ಪ್ರತಿ ಬೂತ್ ಗಳಿಗೆ ತಲುಪಿಸಲಾಗುವುದು. ಇದರಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷರು, ತಾಲೂಕು, ಬೂತ್ ಮಟ್ಟದ ಪ್ರಮುಖರು ಭಾಗಿಯಾಗಲಿದ್ದಾರೆಂದು
ನಾರಾಯಣಸ್ವಾಮಿ ತಿಳಿಸಿದರು
ಇದೆ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರಿಗೆ ಪ್ರತಿಘ್ನ ವಿಧಿ ಬೋಧಿಸಿದರು. ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕಾಂತರಾಜ್ ಅಭಿಯಾನದ ರೂಪು ರೇಷಗಳ ಬಗ್ಗೆ ತಿಳಿಸಿದರು.
ಬಿಜೆಪಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿ, ಮೇರಾ ಮಿಟ್ಟಿ ಮೇರಾದೇಶ್ ಸಂಚಾಲಕರಾದ ಬಿ. ಎಂ. ನಾರಾಯಣಸ್ವಾಮಿ, ಸಹ ಸಂಚಾಲಕ ನಗರಸಭಾ ಸದಸ್ಯ ಬಂತಿ ವೆಂಕಟೇಶ್, ದೊಡ್ಡಬಳ್ಳಾಪುರ ಮಂಡಲ ಅಧ್ಯಕ್ಷ ಕೆ. ನಾಗೇಶ್, ನಗರ ಅಧ್ಯಕ್ಷ ಮುದ್ದಪ್ಪ, ದೇವನಹಳ್ಳಿ ತಾಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್, ನಗರಸಭಾ ಅಧ್ಯಕ್ಷೆ ಸುಧಾ ಲಕ್ಷ್ಮಿ ನಾರಾಯಣ್, ನಗರಸಭಾ ಸದಸ್ಯೆ ವತ್ಸಲಾ, ಬಿಜೆಪಿ ಮಹಿಳಾ ಮುಖಂಡರಾದ ವತ್ಸಲಾ, ಗಿರಿಜಾ ಅನಂತಪದ್ಮನಾಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.