ಗಿಡನೆಟ್ಟು ವನಮಹೋತ್ಸವ ಅಭಿಯಾನಕ್ಕೆ ಶಾಸಕ ಎ.ಆರ್ ಕೃಷ್ಣಮೂರ್ತಿ ಚಾಲನೆ .

ಯಳಂದೂರು: ಪಟ್ಟಣದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಗಿಡನೆಟ್ಟು ನೀರೆರೆದು ವನಮಹೋತ್ಸವ ಅಭಿಯಾನಕ್ಕೆ ಶಾಸಕ ಎ.ಆರ್ ಕೃಷ್ಣಮೂರ್ತಿಯವರು ಚಾಲನೆ ನೀಡಿದರು.

ತಾಲೂಕು ಸರ್ಕಾರಿ ಆಸ್ಪತ್ರೆ ಮತ್ತು ಹಲವು ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ ಸ್ವಚ್ಛತ ಶ್ರಮದಾನ ಮತ್ತು ವನಮಹೋತ್ಸವ ಅಭಿಯಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್ ಕೃಷ್ಣಮೂರ್ತಿ ಭಾಗವಹಿಸಿ ಶ್ರಮದಾನ ಮಾಡಿ ಗಿಡನೆಟ್ಟರು.

ತಾಲೂಕಿನ ಹಲವಾರು ಸಂಘಸಂಸ್ಥೆಗಳು ಸ್ವಚ್ಛತ ಶ್ರಮದಾನದಲ್ಲಿ ಭಾಗವಹಿಸಿ ಆಸ್ಪತ್ರೆಯ ಆವರಣದಲ್ಲಿರುವ ಕಸಕಡ್ಡಿಗಳು ಆಯ್ದಕೊಳ್ಳಲಾಯಿತು ಹಾಗೂ ಅನಾವಶ್ಯಕ ಗಿಡಗಂಟಿಗಳನ್ನು ತೆರವುಗೊಳಿಸಿದರು.

ನಂತರ ಮಾತನಾಡಿದ ಶಾಸಕರು ನಾನು ಮೊದಲಬಾರಿಗೆ ಶಾಸಕರಾಗಿದ್ದಾಗ ಜರ್ಮನಿಗೆ ಹೋಗಿದ್ದೇವು ಅಲ್ಲಿನ ಸ್ವಚ್ಚತೆ ಮತ್ತು ಜನರ ಸ್ವಯಂಸೇವೆಯ ಬಗ್ಗೆ ತಿಳಿಸಿಸುವ ಮೂಲಕ ಹಳಯ ನೆನಪನ್ನು ಮೆಲಕು ಹಾಕಿದರು.
ಸ್ವಚ್ಚತೆ ಎನ್ನುವ ಅರಿವು ನಮ್ಮ ಮನೆಯಿಂದಲೇ ಪ್ರಾರಂಭವಾಗುತ್ತದೆ‌. ಆರೋಗ್ಯವು ಸ್ವಚ್ಛತೆಯನ್ನು ಅವಲಂಬಿಸಿದೆ ಅದ್ದರಿಂದ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು

ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹಾಗೂ ಮಹನೀಯರ ಹೊಸ ಭಾವಚಿತ್ರಗಳಿಗೆ ಶಾಸಕ ಎ.ಆರ್ ಕೃಷ್ಣಮೂರ್ತಿ ದೀಪಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಿ ಭಾವಚಿತ್ರಗಳನ್ನು ಅನಾವರಣ ಮಾಡಿದರು
ಶ್ರಮದಾನದಲ್ಲಿ ಭಾಗವಹಿಸಿದ್ದ ಹಲವು ಸಂಘಸಂಸ್ಥೆಯ ಸ್ವಯಂಸೇವಕರಿಗೆ ಅಭಿನಂದನ ಪತ್ರವನ್ನು ಶಾಸಕರು ವಿತರಿಸಿದರು.

ಈ ಸಂದರ್ಭದಲ್ಲಿ ಡಿ ಹೆಚ್ ಒ ಡಾ.ಕೆ.ಎಂ ವಿಶ್ವೇಶ್ವರಯ್ಯ, ಡಿಡಿಪಿಒ ಮಂಜುನಾಥ್ ಪ್ರಸನ್ನ, ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಶ್ರೀಧರ್, ಡಾ.ನಾಗೇಂದ್ರ ತಹಶಿಲ್ದಾರ್ ಜಯಪ್ರಕಾಶ್, ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ರವಿಕೀರ್ತಿ, ಪಟ್ಟಣ ಪಂಚಾಯಿತಿ ಸದಸ್ಯೆ ಪ್ರಭಾವತಿರಾಜಶೇಖರ್, ರಂಗನಾಥ್, ಬ್ಲಾಕ್ ಅಂಡ್ ವೈಟ್ ಸಂಸ್ಥೆ ಕೆಸ್ತೂರು ಶಾಂತರಾಜು ಹಾಗೂ ಹಲವು ಸಂಘಸಂಸ್ಥೆಗಳ ಸ್ವಯಂಗ ಸೇವಕರು ಭಾಗವಹಿಸಿದ್ದರು.

‌ವರದಿ ಆರ್ ಉಮೇಶ್