ಚಾಮರಾಜನಗರ ನ್ಯೂಸ್…… ‌ ಯಳಂದೂರು ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ದಲಿತ ಪರ ಸಂಘಟನೆಗಳು. ‌ದಲಿತರನ್ನು ಅವಹೇಳನಕಾರಿ ಪದಬಳಸಿ ಮಾತನಾಡಿರುವ ಚಿತ್ರ ನಟ ಉಪೇಂದ್ರ ಊರಿದ್ದ ಕಡೆ ಹೊಲಗೇರಿ ಎಂಬ ಪದಬಳಸಿ ದಲಿತ ಸಮುದಾಯಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಹಾಗೂ ಕರ್ನಾಟಕ ಸರ್ಕಾರದ ತೋಟಗಾರಿಕೆ ಮತ್ತು ಗಣಿ ಇಲಾಖೆ ಸಚಿವ ಮಲ್ಲಿಕಾರ್ಜುನ ಅವರ ಹೇಳಿಕೆ ಊರ ಹೊಲಗೇರಿ ಮಾಡಬೇಡಿ ಎಂಬ ಹೇಳಿಕೆಯನ್ನು ಖಂಡಿಸಿ ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ವಹಿಸುವಂತೆ ಆಗ್ರಹಿಸಿ ಹಾಗೂ ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಚಿವ ಅರಗ‌ ಔನೇಂದ್ರ ಅವರ ಹೇಳಿಕೆಯನ್ನು ಖಂಡಿಸಿ ಹಾಗೂ ರಾಜ್ಯ ಸರ್ಕಾರ ಎಸ್ ಸಿ ಎಸ್ಟಿ ಅನುದಾನ 11000 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರವುದನ್ನು ಖಂಡಿಸಿ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬತ್ತಾಯಿಸಿ ಪ್ರತಿಭಟನೆ ನಡೆಸಿದರು ಈ ಪ್ರತಿಭಟನೆಯಲ್ಲಿ ದಲಿತ ಪರ ಸಂಘಟನೆಗಳಾದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ರಾಜ್ಯ ದಲಿತ ಮಹಿಳಾ ಬಕ್ಕೂಟ‌ ಹಾಗೂ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿ ತಾಲ್ಲೂಕು ಕಛೇರಿಯ ತಹಸಿಲ್ದಾರ್ ರವರ ಮೂಲಕ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ತಲುಪುವಂತೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕಂದಳ್ಳಿ ನಾರಾಯಣ ತಾಲ್ಲೂಕು ಸಂಚಾಲಕ ಎಂ ಶಂಕರ್ ಮೂರ್ತಿ ಗಣಿಗನೂರು‌ ಚಂದ್ರು ಶೇಖರ್ ಸಂಘಟನಾ ಸಂಚಾಲಕಿ ನಳಿನಕುಮಾರಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ದುಗಟ್ಟಿ ಮಹೇಶ್. ಕಾರ್ಯದರ್ಶಿ ಶಂಕರ್ ನಾಗ್ ತಾಲ್ಲೂಕು ಅಧ್ಯಕ್ಷ ಹೊನ್ನೂರು ಸುರೇಶ್ . ಲೋಕೇಶ್.ಸೋಮಣ್ಣ.ಮಲ್ಲರಾಜು . ಭಾಗ್ಯಲಕ್ಷ್ಮಿ.ರಾಜಮ್ಮ. ಮಹೇಶ್. ಸಿದ್ದರಾಜು ರಾಜ್ ಶೇಖರ್.ರೇಚಣ್ಣ.ನಿಂಗರಾಜು ಹಾಗೂ ವಿವಿಧ ಗ್ರಾಮಗಳ ಮುಖಂಡರುಗಳು ಮಹಿಳೆಯರು ಯುವಕರು ಯುವತಿಯರು.ಹಾಜರಿದ್ದರು. ‌

ವರದಿ ಆರ್ ಉಮೇಶ್