ದೊಡ್ಡಬಳ್ಳಾಪುರ:ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ದೊಡ್ಡಬಳ್ಳಾಪುರ ಘಟಕದ ವತಿಯಿಂದ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 77 ನೇ ಸ್ವಾತಂತ್ರ್ಯ ದಿನಾಚಾರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ್ಯಕ್ಷರಾದ ನಾರಾಯಣಗೌಡ ಆದೇಶದಂತೆ ಎಂ ಡಿ ಪುಟ್ಟೇಗೌಡ್ರು ಅನ್ನಪೂರ್ಣಕ್ಕನವರು ಸಹ ಮತದೊಂದಿಗೆ ದೊಡ್ಡಬಳ್ಳಾಪುರ ತಾಲೂಕು ಕರವೇ ಅಧ್ಯಕ್ಷರಾದ ಪುರುಷೋತ್ತಮ್ ಗೌಡ ರವರ ನೇತೃತ್ವದಲ್ಲಿ ಗಾಂಧಿ ಸರ್ಕಲ್ ಬಳಿ ಮಹಾತ್ಮ ಗಾಂಧೀಜಿಯವರಿಗೆ 77ನೇ ಸ್ವಾತಂತ್ರ್ಯ ಉತ್ಸವ ಅಂಗವಾಗಿ ತಾಲೂಕಿನ ಕರವೇ ಕನ್ನಡ ಸೇನಾ ನಿಗಳ ಜೊತೆಯಲ್ಲಿ ಅದ್ದೂರಿ ಕಾರ್ಯಕ್ರಮ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಪುರುಷೋತ್ತಮ್ ಗೌಡ, ಅನೇಕ ಮಹನೀಯರು, ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವುದನ್ನು ನಾವು ವಿಮರ್ಶೆ ಮಾಡಿ ನೋಡಬೇಕಾಗುತ್ತದೆ.

ನಾವೆಲ್ಲರೂ ಜಾತಿ, ಧರ್ಮ, ಪಕ್ಷ ಮರೆತು ಭಾರತೀಯರು ಎಂಬ ರೀತಿಯಲ್ಲಿ ಒಟ್ಟಾಗಿ ದೇಶದ ಬಗ್ಗೆ ನಮ್ಮ ಊರಿನ ಬಗ್ಗೆ ಬೆಳವಣಿಗೆಯ ಬಗ್ಗೆ ಆಲೋಚನೆ ಮಾಡಬೇಕು. ಆರೋಗ್ಯ, ಶಿಕ್ಷಣ ಎಲ್ಲ ಶ್ರೀಸಾಮಾನ್ಯರಿಗೆ ಸಿಕ್ಕಿದರೆ ಸ್ವಾತಂತ್ರ್ಯದ ನಿಜವಾದ ಅರ್ಥ ಸಿಗುತ್ತದೆ. ಬಡತನ, ಭ್ರಷ್ಟಾಚಾರ ಭಯೋತ್ಪಾದನೆ ನಿರ್ಮೂಲನಾ ಆಗಿ ನಿಜವಾದ ಸ್ವಾತಂತ್ರ ಜನಸಾಮಾನ್ಯರಿಗೆ ಸಿಗುವಂತಾಬೇಕು ಎಂದರು.

ಈ ವೇಳೆ ಕರವೇ ಮುಖಂಡರಾದ ಪುಟ್ಟರಾಜು, ಶ್ರೀನಾಥ್, ಅಂಬರೀಶ್ ಕುಮಾರ್ ಹನುಮಂತರಾಜು, ಕಾಂತಮ್ಮ ಗೀತಾ, ಚಂದ್ ಪಾಷಾ, ಹುಸೇನ್, ನಂಜುಂಡ ಆರಾಧ್ಯ ವೆಂಕಟೇಶ್ ದೇವರಾಜ್, ವೆಂಕಟೇಶ್ ಮತ್ತಿತರರಿದ್ದರು.