ದೊಡ್ಡಬಳ್ಳಾಪುರ: ನಗರದ ಹೈವೇ ರಸ್ತೆಯಲ್ಲಿ ಅನೇಕ ಗೂಡಂಗಡಿಗಳು ಯಾವುದೇ ರೀತಿಯ ಅನುಮತಿ ಪಡೆಯದೆ ತಲೆ ಎತ್ತಿದ್ದು ಇದರಿಂದ ಸಾರ್ವಜನಿಕರು ಹಾಗು ವಾಹನ ಸವಾರರಿಗೆ ತೀವ್ರ ರೀತಿಯ ತೊಂದರೆಗಳಾಗುತ್ತಿದ್ದು ಅನೇಕ ಅಪಘಾತ ವಾಗಿ ಸಾವು ನೋವುಗಳು ಸಂಭವಿಸುತ್ತಿದ್ದರು ಸಂಭದಪಟ್ಟ ಇಲಾಖೆಯ ಅದಿಕಾರಿಗಳು ಅಂಗಡಿ ಮಾಲಿಕರ ವಿರುದ್ದ ಕ್ರಮ ಜರುಗಿಸದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರದಾನ ಕಾರ್ಯದರ್ಶಿ ರಾಜಘಟ್ಟ ರವಿ ಆರೋಪಿಸಿದರು.
ನಗರದ ತಾಲ್ಲೂಕು ಕಛೇರಿಯ ಮುಂಬಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ತುಮಕೂರು ರಸ್ತೆಯಲ್ಲಿ ಮೊನ್ನೆಯಷ್ಟೇ ಲಾರಿಯೊಂದು ವ್ಯಕ್ತಿಯ ಮೇಲೆ ಹರಿದು ಸಾವನ್ನಪ್ಪಿದ್ದು ಅವರ ಮಗಳಿಗೆ ಕೈ ಮುರಿದು ಚಿಕಿತ್ಸೆ ಗಾಗಿ ಯಲಹಂಕ ದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಇವೆಲ್ಲಾ ಘಟನೆಗಳು ನೆಡೆಯಲು ಪ್ರಮುಖ ಕಾರಣ ರಸ್ತೆಯ ಪಕ್ಕದಲ್ಲೇ ತೆರುವಾಗಿರುವ ಅನದಿಕ್ರುತ ಅಂಗಡಿಗಳು ಈ ಬಗ್ಗೆ ಪಿ ಡಬ್ಲ್ಯೂ ಡಿ , ಬೆಸ್ಕಾಂ,ನಗರಸಭೆ ಗಳಿಗೆ ಇವುಗಳ ತೆರವಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಒಂದು ವಾರ ಗಡುವು
ರಸ್ತೆ ಪಕ್ಕದಲ್ಲಿ ತಲೆ ಎತ್ತಿರುವ ಅಂಗಡಿಗಳನ್ನು ಒಂದು ವಾರದೊಳಗೆ ಸಂಭದಪಟ್ಟ ಅಧಿಕಾರಿಗಳು ತೆರೆವು ಗೊಳಿಸಬೇಕು ಇಲ್ಲಾವಾದಲ್ಲಿ ತಾಲ್ಲೋಕು ಕಛೇರಿ ಬೀಗ ಹಾಕಿ ಉಘ್ರವಾಗಿ ಪ್ರತಿಭಟಿಸಲಾಗುವುದು ಎಂದು ರಾಜಘಟ್ಟ ರವಿ ಎಚ್ಚರಿಸಿದರು. ನಂತರ ತಹಶಿಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ,
ತಾಲ್ಲೋಕು ಅದ್ಯಕ್ಷರಾದ ಹೆಚ್.ಎಸ್.ವೆಂಕಟೇಶ್,
ತಾಲ್ಲೂಕು ಪ್ರಧಾನಕಾರ್ಯದರ್ಶಿ
S.L.N.ವೇಣು,ಬಷೀರ್,
ಜೋಗಹಳ್ಳಿಅಮ್ಮು,
ಆನಂದಕುಮಾರ್,ರವಿಕುಮಾರ್,ರಘುನಂದನ್,ಸೂರಿ,
ರಂಗಸ್ವಾಮಿ ಶಾಂತಿನಗರ,
ಹಮಾಮ್ ಅಂಬರೀಶ್.ಮತ್ತಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.