ಪತ್ರಕರ್ತರು ವಸ್ತುನಿಷ್ಠೆ ವರದಿಗಳ ಮೂಲಕ ಸಮಾಜದ ಧ್ವನಿ ಯಾಗಬೇಕು: ಎನ್ ವೈ ಗೋಪಾಲಕೃಷ್ಣ

ಮೊಳಕಾಲ್ಮುರು ಆ.3: ನಮ್ಮ ದೇಶದ ಸಂವಿಧಾನದ ಮೂರು ಆದಾರ ಸ್ತಂಭಗಳ ಜೊತೆಯಲ್ಲಿ ಸದಾ ಇರುವುದೇ ಪತ್ರಿಕಾ ರಂಗ, ಇದು ಕೂಡ ಸಂವಿಧಾನದ ನಾಲ್ಕನೇ ಅಂಗವಾಗಿದೆ ಎಂದು ಶಾಸಕ ಎನ್.ವೈ ಗೋಪಾಲಕೃಷ್ಣ ತಿಳಿಸಿದರು.

ಅವರು ಪಟ್ಟಣದ ಗುರು ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪತ್ರಕರ್ತರ ಬರವಣಿಗೆ ಎಂದಿಗೂ ಜೀವಂತವಾಗಿರುತ್ತದೆ. ಪತ್ರಕರ್ತ ತನ್ನ ಕಾಯಕ ನಿಷ್ಠೆಯ ಸೇವೆಗೆ ಹಗಲಿರುಳು ಸದಾ ಸಿದ್ದವಾಗಿರುತ್ತಾನೇ ಅರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪತ್ರಕರ್ತರ ಬರವಣಿಗೆ ಬಹುಮುಖ್ಯ ವಾದುದ್ದು ಸಮಾಜದ ಹಿತ ಕಾಯುವ ಕವಚ ಪತ್ರಕರ್ತನ ಬರವಣಿಗೆ ಇದು ಲೋಕದ ವಿದ್ಯಮಾನಗಳ ಕೈಗನ್ನಡಿ.ಪತ್ರಿಕೆಗಳು ಜನರ ದ್ವನಿ ಯಾಗಿ ನಿಲ್ಲಬೇಕು ಆ ನಿಟ್ಟಿನಲ್ಲಿ ಇಲ್ಲಿನ ಪತ್ರಕರ್ತರು ಸಾಗುತ್ತಿದ್ದಾರೆ ಇದು ಸಂತಸದ ಸಂಗತಿ ಎಂದು ನುಡಿದರು,
ಪ್ರಸಕ್ತ ವಿದ್ಯಮಾನಗಳು ಗಮನಿಸುತ್ತಾ ಹೋದರೇ ಸಾಮಾಜಿಕ ಜಾಲತಾಣ ದಲ್ಲಿ ಕ್ಷಣಾರ್ಧದಲ್ಲಿ ಸುದ್ದಿಗಳ ಕೈಗೆಟಕುತ್ತವೆ ಆದರೇ ಮುದ್ರಣ ಮಾಧ್ಯಮ ಇವೆಲ್ಲವನ್ಮೂ ಮೀರಿದ್ದು ಎಂದರು
ಪತ್ರಕರ್ತರು ಒಗ್ಗಟ್ಟಿನಿಂದ ಇರಬೇಕು ಹಾಗ ನಿಮ್ಮ ವೃತ್ತಿಪರ ಶಕ್ತಿ ಹೆಚ್ಚುತ್ತದೆ ನೀವಂದುಕೊಂಡ ಎಲ್ಲಾ ಕಾರ್ಯಗಳು ಯಶಸ್ವಿಯಾ ಗುತ್ತವೆ. ಇಂದು ಅನೇಕ ಪತ್ರಕರ್ತರು ಕಾರ್ಯಕ್ರಮ ಗಳಿಗೆಬಾರದೆ ಸುದ್ದಿಮಾಡುವ ಪರಿಪಾಠ ರೂಡಿಸಿಕೊಂಡಿ ದ್ದಾರೇ ಆದರೇ ಅಂತಹ ಸುದ್ದಿಗಳು ಪೂರ್ಣ ಪ್ರಮಾಣದ ಸುದ್ದಿಗಳಾಗುವುದಿಲ್ಲ ಎಂದರು

ನಾನು ಮೊದಲು ಈ ಕ್ಷೇತ್ರದ ನಾಗರಿಕ. ನಾನು ಏಳು ಬಾರಿ ಶಾಸಕನಾದರೂ ಯಾವ ಮಂತ್ರಿಗಿರಿಗೂ ಆಸೆ ಪಟ್ಟವನಲ್ಲ.ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೆನೆ ನಮ್ಮ ಜೊತೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು ನಾನು ಎಂದಿಗೂ ದ್ವೇಷ ರಾಜಕಾರಣ ಮಾಡುವುದಿಲ್ಲ ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅದ್ಯಕ್ಷ ಬಿ. ದಿನೇಶ್ ಗೌಡಗೆರೆ ಪ್ರಸ್ತಾವಿಕವಾಗಿ ಮಾತನಾಡಿ, ಪತ್ರಕರ್ತನ ವೃತ್ತಿ ಪವಿತ್ರವಾದದ್ದು ವೃತ್ತಿಪರವಾಗಿ ಸುದ್ದಿ ಮಾಡುವಾಗ ಅಧಿಕಾರಿಗಳು ಜನಪ್ರತಿನಿದಿಗಳನ್ನು ಆದಾರವಾಗಿ ಮಾಡುವ ಸುದ್ದಿ ತೇಜೋವದೆ ರೂಪದ ಸುದ್ದಿಯಾಗದೆ ಪೂರ್ವಾಪರ ಪರಿಶೀಲಿಸಿ, ಬರೆಯುವಂತಾಗಲಿ.
ಪತ್ರಕರ್ತರ ಬರವಣಿಗೆ ಖಡ್ಗ ಕ್ಕಿಂತ ಹರಿತವಾದುದ್ದು ಅದು ಬರವಣಿಗೆ ರೂಪದಲ್ಲಿ ಸಮಾಜದ ಸರಿ ತಪ್ಪುಗಳನ್ನು ಎತ್ತಿ ತೋರಿಸುವ ಕೈಗನ್ನಡಿ ಪತ್ರಿಕೆ. ಪತ್ರಕರ್ತನ ಬರವಣಿಗೆ ಸಮಾಜಕ್ಕೆ ಬೆನ್ನೆಲುಬು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ ಪಂ ಮಾಜಿ ಅದ್ಯಕ್ಷರಾದ ಜಿ. ಪ್ರಕಾಶ್ ಮಾತನಾಡಿ, ಪತ್ರಿಕೆ , ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗ. ಇಂತಹ ಸ್ಥಾನ ಮಾನ ಮಹತ್ವದುದ್ದು ಪತ್ರಕರ್ತರು ಪಾರದರ್ಶಕತೆ ಯಿಂದ ಕೆಲಸ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ, ಸಿದ್ದಯ್ಯನಕೋಟೆ ಚಿತ್ತರಗಿ ಮಠದ ಶ್ರೀ ಶ್ರೀ ಬಸವಲಿಂಗ ಸ್ವಾಮೀಜಿ ಗಳು ಪತ್ರಕರ್ತರ ಕಾಯಕ ಶ್ರದ್ಧೆಯಿಂದ ಶ್ರೇಷ್ಠ ವಾದದ್ದು, ಸಮಾಜಕ್ಕೆ ಬಹು ಮುಖ್ಯ ವಾದ ಕಾಯಕ ವಾಗಿದ್ದು ಸಮಾಜ ನಿರ್ಮಾಣಕ್ಕೆ ಸಮಾಜದ ಅನಿಷ್ಟ ಬದಲಾವಣೆ ಗೆ ಪೂರಕವಾಗಿದ್ದು ಎಂದು ತಿಳಿಸಿದರು.

ಈ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ಎಸ್. ರಾಜಶೇಖರ್, ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಕಟ್ಟೆ, ಪ್ರಧಾನಕಾರ್ಯದರ್ಶಿ ಗೋವಿಂದಪ್ಪ, ಈರಣ್ಣ ಯಾದವ್,ಕೆಂಚಪ್ಪ, ಪ್ರಿನ್ಸಿಪಾಲ್ ಗೋವಿಂದಪ್ಪ, ಪಂ ಸದಸ್ಯರಾದ ಎಸ್. ಖಾದರ್, ರಾಜ್ಯ ರೈತ ಸಂಘದ ಬೆಡರಡ್ಡಿಹಳ್ಳಿ ಬಸವರಡ್ಡಿ, ಮರ್ಲಹಳ್ಳಿ ರವಿಕುಮಾರ್,ಸಂಜೀವಪ್ಪ, ಯಲ್ಲಪ್ಪ ಟೀಚರ್ ಓಬಣ್ಣ , ಎಸ್ ಎಸ್ ನಾಗಭೂಷಣ್ ಕೆರೆ ಕೊಂಡಾಪುರ ಪರಮೇಶ್ವರಪ್ಪ, ಬಡೋಬಯ್ಯ, ಯಜ್ಜೇಹಳ್ಳಿ ನಾಗರಾಜ್, ಎಸ್ ಟಿ. ಚಂದ್ರಣ್ಣ, ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕೆ. ಓ. ಶಿವಣ್ಣ ಮತ್ತು ಸಂಗಡಿಗರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.