ದೊಡ್ಡಬಳ್ಳಾಪುರ:ವೀರಶೈವ ಲಿಂಗಾಯತ ಸಮಾಜದಿಂದ ಶ್ರೀ ಶಿವಕುಮಾರ ಸ್ವಾಮೀಜಿ ಯವರ ಗುರುವಂದನಾ ಕಾರ್ಯಕ್ರಮ
ದೊಡ್ಡಬಳ್ಳಾಪುರ… ನಗರದ ಬಸವಭವನದಲ್ಲಿ ದಿ.5.8.2023ಶನಿವಾರ ದಂದು ದೊಡ್ಡಬಳ್ಳಾಪುರ ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಡಾ, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಗಿದೆ ಎಂದು ಸಮಾಜದ ಹಿರಿಯ ಮುಖಂಡರಾದ ಬೇಕರಿ ಸತೀಶ್ ಹೇಳಿದರು.
ನಗರದ ಬಸವಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಬೇಕರಿ ಸತೀಶ್ ಮಾತನಾಡಿ ನಡೆದಾಡುವ ದೇವರು, ತ್ರಿವಿದ ದಾಸೋಹಿ, ಕರ್ನಾಟಕ ರತ್ನ, ಸಿದ್ದಗಂಗೆಯ ಜೀವಗಂಗೆ, ಲಿಂಗಐಕ್ಯ ಪರಮ ಪೂಜ್ಯ ಡಾ!ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮ ಪ್ರತಿವರ್ಷ ತಾಲೂಕಿನಲ್ಲಿ ಸಮಾಜದ ವತಿಯಿಂದ ನಡೆಯುತ್ತಿದ್ದು, ಈ ಬಾರಿ ಎಂದಿಗಿಂತ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಗದ್ಗುರು ವೀರಸಿಂಹಾಸನ ಮಠ, ಸುತ್ತೂರು ಕ್ಷೇತ್ರದ ಪರಮಾಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದು, ಸಿದ್ದಗಂಗಾ ಮಠಧ್ಯಕ್ಷರಾದ ಪರಮಪೂಜ್ಯ ನಿ. ಪ್ರ. ಸ್ವ. ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದು, ಶಿವಗಂಗೆ ಮೇಲಣಗವಿ ಮಠದ ಪೀಠಧ್ಯಕ್ಷರಾದ ಪರಮಪೂಜ್ಯ ಷ. ಭ್ರ. ಡಾ!!ಶ್ರೀ ಶ್ರೀ ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ದೊಡ್ಡಬಳ್ಳಾಪುರ ಜಗದ್ಗುರು ಬಸವೇಶ್ವರ ಮಹಾಮಠದ ಪೀಠಧ್ಯಕ್ಷರಾದ ಪರಮಪೂಜ್ಯ ನಿ. ಪ್ರ. ಸ್ವ. ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ರವರು ದಿವ್ಯ ಉಪಸ್ಥಿತರಿದ್ದು, ಅರಣ್ಯ ಸಚಿವರಾದ ಬಿ. ಈಶ್ವರ ಖಂಡ್ರೆ ಯವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿಕಾರಿಪುರ ಶಾಸಕರಾದ ಬಿ. ವೈ ವಿಜಯೇಂದ್ರ, ಬಿ. ಬಿ. ಎಂ ಪಿ ಮಾಜಿ ಮೇಯರ್ ಶ್ರೀಮತಿ ಗಂಗಾಬಿಕಾ ಮಲ್ಲಿಕಾರ್ಜುನ್, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಜಿ. ಮರೀಸ್ವಾಮಿ, ಚಿತ್ರನಟರಾದ ದೊಡ್ಡಣ್ಣ, ಡಾರ್ಲಿಂಗ್ ಕೃಷ್ಣ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ತಾಲೂಕಿನ ವೀರಶೈವ ಲಿಂಗಾಯತ ಸಮಾಜ ಒಗ್ಗೂಡುವ ಅವಶ್ಯಕತೆ ದೃಷ್ಟಿಯಿಂದ ಗುರುವಂದನಾ ಕಾರ್ಯಕ್ರಮದಲ್ಲಿ ತಾಲೂಕಿನ ಸಮಸ್ತ ಸಮುದಾಯ ಬಂದುಗಳು ಭಾಗವಹಿಸಲು ಮನವಿ ಮಾಡುವುದಾಗಿ ಬೇಕರಿ ಸತೀಶ್ ಹೇಳಿದ್ದಾರೆ.
ತಾಲ್ಲೂಕ್ ವೀರಶೈವ ಲಿಂಗಾಯತ ಸಮಾಜದ ಯುವಘಟಕದ ಅಧ್ಯಕ್ಷ ಸುಜಯ್, ಉಪಾಧ್ಯಕ್ಷ ಮೋಹನ್, ಅ, ವೀ ಸಮಾಜದ ನಿರ್ದೇಶಕ, ಗ್ರಾಮ ಪಂಚಾಯ್ತಿ ಸದಸ್ಯರಾದ ಪ್ರಭಾಕರ್, ಅ ವೀ. ಯುವಘಟಕದ ನಿರ್ದೇಶಕರಾದ ಭರತ್, ಕಿರಣ್, ಮಹದೇವ್, ದೀಪಕ್, ಪ್ರವೀಣ್, ಚೇತನ್, ಗಗನ್, ಅ. ವೀ. ಯುವಘಟಕದ ಜಿಲ್ಲಾ ಉಪಾಧ್ಯಕ್ಷರಾದ ಲೋಕೇಶ್ ನಾಗಸಂದ್ರ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು