ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾದ್ಯಕ್ಷ ಜಿ. ಶ್ರೀನಿವಾಸ್ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಇಂದು ನೆಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಮಂಗಳೂರು ಸಮಾಚಾರ ಎಂಬ ಕನ್ನಡ ದಿನ ಪತ್ರಿಕೆಯು ಜುಲೈ 1 ರಂದು ಆರಂಭವಾಗಿದ್ದು ಅಂದಿನಿಂದ ಜುಲೈ ತಿಂಗಳಿನಲ್ಲಿ ಪತ್ತಿಕಾ ದಿನಾಚರಣೆ ಆಚರಿಸುವ ಪ್ರತೀತಿ ಬಂದಿದ್ದು ಪತ್ರಕರ್ತರು ನೈಜ ಸುದ್ದಿಗಳಿಗೆ ಪತ್ರಕರ್ತರು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಪ್ರದಾನ ಕಾರ್ಯದರ್ಶಿ ಆರ್ ರಮೇಶ್ ಮಾತನಾಡಿ ಡಿ ವಿ ಗುಂಡಪ್ಪನವರು ಸ್ಥಾಪಿಸಿದ ಸಂಘ ಇದಾಗಿದ್ದು ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಏಕೈಕ ಸಂಘ ಎಂದರೆ ಅದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,ಈ ಸಂಘದಲ್ಲಿ ಸದಸ್ಯರಾಗಿರುವ ಸದಸ್ಯರಿಗೆ ಜಿಲ್ಲಾ ಸಂಘದಿಂದ ಉಚಿತ ಸದಸ್ಯತ್ವ ನೀಡುತ್ತಿದ್ದು ಕಾರ್ಯನಿರತ ಪತ್ರಕರ್ತರು ಇದರ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.
ದೊಡ್ಡಬಳ್ಳಾಪುರ ತಾಲ್ಲೋಕು ಅದ್ಯಕ್ಷ ಗಂಗರಾಜ್ ಶಿರವಾರ ಮಾತನಾಡಿ ಸಂಘದ ಅಬಿವ್ರುದ್ದಿಗೆ ಸಂಘದ ಸದಸ್ಯರು ಸಹಕರಿಸಿ ಮುಂದಿನ ತಿಂಗಳ ಆಗಸ್ಟ್ ನಲ್ಲಿ ನೆಡೆಯುವ ತಾಲ್ಲೋಕು ಸಮ್ಮೇಳನಕ್ಕೆ ಸಹಕಾರ ನೀಡಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸಲು ಮನವಿ ಮಾಡಿದರು. ದೊಡ್ಡಬಳ್ಳಾಪುರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರದಾನ ಕಾರ್ಯದರ್ಶಿ ಎನ್ ಎಂ ನಟರಾಜು ಮಾತನಾಡಿ ದೇಶದಲ್ಲಿ ಪತ್ರಿಕಾರಂಗ ಬೆಳೆದು ಬಂದ ಹಾದಿ ಬಗ್ಗೆ ವಿವರಿಸುತ್ತಾ ಮರದ ಕಡ್ಡಿಗಳಿಂದ ಅಕ್ಷರ ಮೂಡಿಸುತ್ತಾ ಬಂದು,ನಂತರ ಮಸಿ ಮುಖಾಂತರ ಮುದ್ರಣ ಕಾಣುತ್ತಿದ್ದು ಬದಲಾಗುತ್ತಿರುವ ತಂತ್ರಜ್ಞಾನದಿಂದ ಇಂದು ಮಸಿಯಿಲ್ಲದೆಯೆ ವೆಬ್ ಪೋರ್ಟಲ್ ಮುಖಾಂತರ ಸುದ್ದಿ ಸಿಗುತ್ತಿದೆಯಂದರು.
ಕಾರ್ಯಕ್ರಮದಲ್ಲಿ
ತಾಲ್ಲೋಕು ಅದ್ಯಕ್ಷರಾದ
ಗಂಗರಾಜ ಶಿರವಾರ
ಜಿಲ್ಲಾ ಅದ್ಯಕ್ಷರಾದ ಜಿ ಶ್ರೀನಿವಾಸ್
ಜಿಲ್ಲಾ ಪ್ರಧಾನಕಾರ್ಯದರ್ಶಿ ಆರ್.ರಮೇಶ್
ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟಿನ ಅದ್ಯಕ್ಷರಾದ ನಟರಾಜ್,
ಜಿಲ್ಲಾ ನಿರ್ದೇಶಕರಾದ ಆರ್.ಸತೀಶ್,
ತಾಲ್ಲೋಕು ಪ್ರಧಾನ ಕಾರ್ಯದರ್ಶಿ ಜೆ.ಮುನಿರಾಜು,
ಉಪಾದ್ಯಕ್ಷರಾದ ರುದ್ರೇಶ್,ನಿರ್ದೇಶಕರಾದ ಡಿ.ಚಂದ್ರಶೇಖರ್ ಉಪ್ಪಾರ್,ಮುನಿಯಪ್ಪ, ಪ್ರದೀಪ್ ಕುಮಾರ್ ಆರ್,
ಕೆ.ಮನು ಕುಮಾರ್,ರಾಜುಸಣ್ಣಕ್ಕಿ,ಮುನಿಸ್ವಾಮಿ ಮತ್ತಿತರರು ಬಾಗವಹಿಸಿದ್ದರು