ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿದ್ದು ಶಾಸಕರಾದ ಹಾಗೂ ಮಾಧ್ಯಮ ಸಂಯೋಜಕರಾಗಿರುವ ವೃತ್ತಿ ಬಾಂಧವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯೂ.ಡಬ್ಲ್ಯೂ.ಜೆ) ವತಿಯಿಂದ ‘ಸುದ್ದಿಮನೆಯಿಂದ ವಿಧಾನಸೌದದ ವರೆಗೆ’ ಕಾರ್ಯಕ್ರಮ ಮೂಲಕ ಅಭಿನಂದನಾ ಸಮಾರಂಭ ನಡೆಯಿತು.

ಸಂಘದ ಅಧ್ಯಕ್ಷ ಶಿವಾನಂದ ತಗಡೂರುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡ್ಯ
ಶಾಸಕರಾದ ರವಿ ಗಣಿಗ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ಅಭಿನಂದಿಸಿದರು.

ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ತ್ಯಾಗರಾಜ್, ಬಿ.ಎನ್.ಶ್ರೀಧರ್, ಸೋಮಶೇಖರ್ ಕೆರೆಗೋಡು, ಎಸ್.ಲಕ್ಷ್ಮಿ ನಾರಾಯಣ, ಟಿ.ಎಂ.ಸತೀಶ್, ನಾಗರಾಜ್, ಲಕ್ಷ್ಮಣ್, ದೀಪಕ್ ಕರಡೆ, ರಘುರಾಮ್, ಅ.ನಾ.ಪ್ರಹ್ಲಾದರಾವ್ ಅವರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮ ದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ ಸ್ವಾಗತಿಸಿದರು. ಖಜಾಂಚಿ ಎಂ.ವಾಸುದೇವ ಹೊಳ್ಳ ವಂದಿಸಿದರು. ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಹಾಜರಿದ್ದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಶೇಷಚಂದ್ರಿಕ, ಈಶ್ವರ ದೈತೋಟ, ಭಾರತೀಯ ಕಾರ್ಯನಿರತ ಒಕ್ಕೂಟದ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ, ರಾಜ್ಯ ಸಮಿತಿ ಸದಸ್ಯರಾದ ವಿ.ಮುನಿರಾಜು, ಸೋಮಶೇಖರ ಗಾಂಧಿ, ಕೆ.ಆರ್.ದೇವರಾಜ್, ನಗರ ಘಟಕದ ಅಧ್ಯಕ್ಷ ಕೆ.ಸತ್ಯನಾರಾಯಣ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೇಕಟ್, ಖಜಾಂಚಿ ಎ.ಬಿ.ಶಿವರಾಜ್,
ಚಿಕ್ಕಬಳ್ಳಾಪುರ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಂ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್,ಪ್ರಧಾನ ಕಾರ್ಯದರ್ಶಿ ಆರ್ ರಮೇಶ್ ,ವಿಜಯಪುರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್. ಪಿ.ಕುಲಕರ್ಣಿ, ಪತ್ರಕರ್ತೆಯರಾದ ಪರಿಮಳ,ವಿಜಯಪುರದ ಲಕ್ಷ್ಮೀಪಾಟಿಲ್, ಸ್ತ್ರೀ ಜಾಗೃತಿ ಪತ್ರಿಕೆಯ ಶೋಭಾ, ಮುಂತಾದವರು ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.