ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವು ದೇವನಹಳ್ಳಿಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ನೆಡೆಯಿತು. ಪ್ರಾಸ್ತಾವಿಕ ಬಾಷಣ ಮಾಡಿದ ತಾಲ್ಲೋಕು ಅದ್ಯಕ್ಷ ಸುನಿಲ್ ತಾಲ್ಲೋಕು ಸಂಘದ ಅಬಿವ್ರುದ್ದಿಗೆ ಹೆಚ್ಚು ಒತ್ತು ನೀಡುವ ಭರವಸೆ ನೀಡಿದರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾದ್ಯಕ್ಷ ಶ್ರೀನಿವಾಸ್ ಪತ್ರಕರ್ತರ ಸಂಘದ ಕಮಿಟಿ ರಚನೆಯಾದ ನಂತರ ಜಿಲ್ಲಾ ಸಂಘವು ಚುನಾವಣಾ ಪೂರ್ವದಲ್ಲಿ ಕೊಟ್ಟ ಆಶ್ವಾಸನೆಯಂತೆ ಸಂಘದ ಸದಸ್ಯತ್ವಶುಲ್ಕ ಇಲ್ಲದೆ ಉಚಿತವಾಗಿ ಐ.ಡಿ ಕಾರ್ಡ್ ನೀಡಲಾಗುತ್ತಿದ್ದು ರಾಜ್ಯ ಸಮ್ಮೇಳನಕ್ಕೆ ಆಗಮಿಸುವ ಸದಸ್ಯರಿಗೆ ಪ್ರಯಾಣ ಭತ್ಯೆ ನೀಡಿದ್ದು ನೀಡಿದ್ದ ಮತ್ತೊಂದು ಭರವಸೆಯಾದ ಸಂಘದ ಸದಸ್ಯರಿಗೆ ನೀಡಬೇಕಿರುವ ಇನ್ಶುರೆನ್ಸ್ ಮಾಡಿಸುವ ಕುರಿತು ಜಿಲ್ಲಾ ಸಂಘವು ಶ್ರೀಘ್ರದಲ್ಲೆ ಸದಸ್ಯರಿಗೆ ಇನ್ಸುರೆನ್ಸ್ ಮಾಡಿಸುವತ್ತ ಮುಂದಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಪ್ರದಾನ ಕಾರ್ಯದರ್ಶಿ ಆರ್ ರಮೇಶ್ ಮಾತನಾಡಿ ಜಿಲ್ಲಾ ಸಂಘದ ಕಾರ್ಯಚಟುವಟಿಕೆ ಬಗ್ಗೆ ವಿವರವಾಗಿ ತಿಳಿಸುತ್ತಾ ಕೇವಲ ಕಾರ್ಯನಿರತ ಪತ್ರಕರ್ತರಿಗಾಗಿ ಮಾತ್ರ ಈ ಸಂಘ ಸೀಮಿತವಾಗಿದ್ದು ಅಂತಹ ಪತ್ರಕರ್ತರಿಗೆ ಮಾತ್ರ ಸದಸ್ಯತ್ವ ನಿಡಲಾಗುತ್ತಿದೆ ಎಂದರು. ಜಿಲ್ಲಾ ಉಪಾಧ್ಯಕ್ಷ ಮುರುಳಿಮೋಹನ್ ಮಾತನಾಡಿ ಸಂಘದಲ್ಲಿ ಸದಸ್ಯತ್ವವು ರಾಜ್ಯಸಂಘದ ನಿಬಂದನೆಗಳ ಪ್ರಕಾರ ಮಾಡುತ್ತಿದ್ದು ಸದಸ್ಯತ್ವಕ್ಕೆ ಬೇಕಾದ ಪೂರಕ ಪತ್ರಿಕೆಗಳ ದಾಖಲೆಗಳು ನೀಡದಿರುವ ವರ ಸದಸ್ಯತ್ವ ನೀಡಲಾಗಿಲ್ಲವೆಂದರು
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮಾತನಾಡಿ ಕೆ ಎಂ ದೇವರಾಜ್ ಮಾತನಾಡಿ ಜಿಲ್ಲಾ ಸಂಘದ ಸದಸ್ಯರಾದ ಕೆ ಎಂ ದೇವರಾಜ್ ಮಾತನಾಡಿ ನುಡಿದಂತೆ ನೆಡೆಯುತ್ತಿರುವ ಜಿಲ್ಲಾ ಸಂಘ ನಮ್ಮದು ಎಂದರು. ಕಾರ್ಯಕ್ರಮದ ನಿರೂಪಣೆಯನ್ನು ತಾಲ್ಲೋಕು ಪ್ರದಾನ ಕಾರ್ಯದರ್ಶಿ ಮುನಿನಾರಾಯಣ ನೆರವೇರಿಸಿದರು
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಸಿ.ಪಿ ಕುಸುಮಾ, ಜಿಲ್ಲಾ ಕಾರ್ಯದರ್ಶಿ ಎಂ ಆರ್ ನಾಗರಾಜು ಜಿಲ್ಲಾ ಖಜಾಂಚಿ ಶಾಂತಮೂರ್ತಿ,ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ ಎಂ ದೇವರಾಜು,ವಿನಯ್,ಎಂ ಶ್ರೀಧರ್ , ಗೋಪಾಲಕೃಷ್ಣ,ನಾಮಿನಿ ಸದಸ್ಯರಾದ ಶ್ರೀ ನಿವಾಸ್ , ವಿಶೇಷ ಆಹ್ವಾನಿತರಾದ ಬಿ ಪಿಳ್ಳರಾಜು ತಾಲ್ಲೋಕು ಅದ್ಯಕ್ಷ ಸುನಿಲ್,ಪ್ರಧಾನ ಕಾರ್ಯದರ್ಶಿ ಮುನಿನಾರಾಯಣ,ತಾಲ್ಲೋಕು ಸಂಘದ ಬಹುತೇಕ ಸದಸ್ಯರು ಬಾಗವಹಿಸಿದ್ದರು. 
Post Views: 138