ನೆಲಮಂಗಲ: ನೆಲಮಂಗಲ ತಾಲ್ಲೋಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಗುರುತಿನ ಚೀಟಿಗಳನ್ನು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿತರಿಸಲಾಯಿತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾದ್ಯಕ್ಷ ಜಿ ಶ್ರೀನಿವಾಸ್ ಪ್ರದಾನ ಕಾರ್ಯದರ್ಶಿ,ಆರ್ ರಮೇಶ್ ಜಿಲ್ಲಾ ಸಂಘವು ನೀಡಿದ ಭರವಸೆಗಳಂತೆ ಜಿಲ್ಲೆಯ ಪತ್ರಕರ್ತರಿಗೆ ಉಚಿತ ಸದಸ್ಯತ್ವ ಸೇರಿದಂತೆ ರಾಜ್ಯ ಸಮ್ಮೇಳನಕ್ಕೆ ಆಗಮಿಸುವ ಸದಸ್ಯರಿಗೆ ಪ್ರಯಾಣ ಭತ್ಯ ಸೇರಿದಂತೆ ಹಲವು ರೀತಿಯ ಯೋಜನೆ ರೂಪಿಸುವತ್ತ ಸಂಘ ಚಿಂತನೆ ನೆಡೆಸುತ್ತಿದ್ದು ಸಂಘದ ಸದಸ್ಯರಿಗೆ ಇನ್ಶುರೆನ್ಸ್ ವಿಚಾರವಾಗಿ ಹಲವು ಗೊಂದಲಗಳಿದ್ದು ಶೀಘ್ರವಾಗಿ ಇನ್ಸುರೆನ್ಸ್ ಮಾಡಿಸುವ ಕಾರ್ಯ ನೆರವೇರಲಿದೆ ಎಂದು ತಿಳಿಸಿದರು

ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ ಎಂ ದೇವರಾಜು‌ ಮಾತನಾಡಿ ನುಡಿದಂತೆ ನೆಡಯುತ್ತಿರುವ ಜಿಲ್ಲಾ ಸಂಘ ನಮ್ಮದು ಸಂಘದ ಅಬಿವ್ರುದ್ದಿಗೆ ಎಲ್ಲರು ಸಹಕರಿಸಲು ಕೋರಿದರು.ಜಿಲ್ಲಾ ಕಾರ್ಯಕಾರಿ ಸದಸ್ಯರಾದ ನೆಲಮಂಗಲ ಸುಗ್ಗರಾಜು ಮಾತನಾಡಿ ಜಿಲ್ಲಾ ಸಂಘಕ್ಕೆ ಮಾದರಿ ಸಂಘವಾಗಿರುವ ನೆಲಮಂಗಲ ತಾಲ್ಲೂಕಿನ ಪತ್ರಕರ್ತರು ತಾಲ್ಲೂಕು ಸಂಘದ ಸಭೆಗಳಿಗೆ ತಪ್ಪದೆ ಆಗಮಿಸಿ ಸಂಘದ ಕಛೇರಿ ಮತ್ತು ಸಂಘದ ಸದಸ್ಯರಿಗೆ ನಿವೇಶನಗಳು ಕೊಡಿಸುವತ್ತ ಸಂಘದ ಸದಸ್ಯರು ಗಮನ ಹರಿಸಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಆರ್ ಸತೀಶ್,ಜಿ ಕೆ ಸುಗ್ಗರಾಜು,ವೈ ಆನಂದ್,ಬಿ ಎಸ್ ರಾಘವೇಂದ್ರಾಚಾರ್, ನಾಮಿನಿ ಸದಸ್ಯ ಹೈಟೆಕ್ ಹೆಚ್ ಜಿ ರಾಜು, ಬೂದಿ ಹಾಲ್ ಕಿಟ್ಟಿ ,ನೆಲಮಂಗಲ ತಾಲ್ಲೂಕು ಅದ್ಯಕ್ಷ ಪ್ರಮೋದ್ ಉಪಾದ್ತ್ಯಕ್ಷ ಚಿಕ್ಕರಾಜು,ಕಾರ್ಯದರ್ಶಿ ಶಾಂತರಾಜು,ಖಜಾಂಚಿ ಮಹಂತೇಶ್, ನೆಲಮಂಗಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಭಾಗವಹಿಸಿದ್ದರು.