ಬಳ್ಳಾರಿ: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬಳಿ ಇಂದು ಮಧ್ಯಾಹ್ನ ಲಾರಿ ಮತ್ತು ಎರೆಡು ಆಟೋಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಮಹಿಳೆಯರು. ಇಬ್ಬರು ಪುರುಷರು ಸೇರಿ ಏಳು ಜನ ಸಾವನ್ನಪ್ಪಿದ್ದು 12 ಜನ ಗಾಯಗೊಂಡಿದ್ದಾರೆ.
ಎರಡು ಆಟೋದಲ್ಲಿ ಪ್ರಯಾಣಿಸುತ್ತಿದ್ದ 19 ಜನರಿದ್ದರು. ಬಳ್ಳಾರಿಯಿಂದ ಗೌತಮ ನಗರದ ಇವರು ಹೊಸಪೇಟೆಯ ತುಂಗಭದ್ರ (ಟಿಬಿ) ಡ್ಯಾಂ ನೋಡಲು ಹೊರಟಿದ್ದರು.
ಸತ್ತವರ ಹೆಸರು: ಖಾಸಿಂ, ಯಾಸ್ಮಿನ್, ಉಮೇಶ್, ಜಹೀರಾ, ಮತ್ತು ಶ್ಯಾಮ, ಸೇರಿದಂತೆ ಒಟ್ಟು ಐವರ ಹೆಸರು ಗುರುತಿಸಲಾಗಿದ್ದು, ಇನ್ನಿಬ್ಬರ ಹೆಸರು ಪತ್ತೆಯಾಗಿಲ್ಲ
12 ಜನ ಗಾಯಾಳುಗಳು ಪೈಕಿ 4 ಹೊರ ರೋಗಿಗಳಾಗಿದ್ದಾರೆ. ಇನ್ನುಳಿದಂತೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಐವರು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಮೂವರು ದಾಖಲಾಗಿದ್ದಾರೆ.
ಹೊಸಪೇಟೆಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ಶಾಸಕ ಗವಿಯಪ್ಪ, ಎಸ್ಪಿ ಶ್ರೀ ಹರಿಬಾಬು, ಎಸಿ ಸಿದ್ದರಾಮೇಶ್ವರ ಭೇಟಿ, ಮಾಹಿತಿ ಸಂಗ್ರಹಿಸಿ ಗಾಯಾಳುಗಳಿಗೆ ಅಗತ್ಯ ನೆರವು ನೀಡಿದ್ದಾರೆ.
ಮೃತರ ಕುಟುಂಬಗಳಿಗೆ ಎರಡು ಲಕ್ಷ ಪರಿಹಾರ ಘೋಷಣೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ, ಗಾಯಾಳುಗಳ ಆಸ್ಪತ್ರೆ ವೆಚ್ಚಕ್ಕಾಗಿ ಐವತ್ತು ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ.